Advertisement

ಪ್ರಿನ್ಸ್‌ ಫಿಲಿಪ್ ಅಂತ್ಯಕ್ರಿಯೆಯಲ್ಲಿ ಸೊಸೆ ಭಾಗಿಯಾಗಲ್ಲ

12:53 AM Apr 12, 2021 | Team Udayavani |

ಲಂಡನ್‌: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ ಅಂತ್ಯಕ್ರಿಯೆ ಈ ವಾರ ನಡೆಯಲಿದೆ. ಅರಸೊತ್ತಿಗೆಯಿಂದ ದೂರವುಳಿದಿರುವ ಮೊಮ್ಮಗ ಪ್ರಿನ್ಸ್‌ ಹ್ಯಾರಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಕಿಂಗ್‌ಹ್ಯಾಂ ಅರಮನೆ ರವಿವಾರ ತಿಳಿಸಿದೆ. ಆದರೆ ಹ್ಯಾರಿ ಅವರ ಪತ್ನಿ ಮೆಘನ್‌ ಮರ್ಕೆಲ್‌ ತುಂಬು ಗರ್ಭಿಣಿಯಾಗಿದ್ದು, ಈ ಸ್ಥಿತಿಯಲ್ಲಿ ಪ್ರಯಾಣ ಮಾಡದಂತೆ ವೈದ್ಯರು ಸೂಚಿಸಿರುವ ಕಾರಣ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ.ಎಂದೂ ತಿಳಿಸಲಾಗಿದೆ.

Advertisement

ವಿಂಡ್ಸರ್‌ ಕ್ಯಾಸಲ್‌ನ ಸೈಂಟ್‌ ಜಾರ್ಜ್ ಚಾಪೆಲ್‌ನಲ್ಲಿ ಎ.17ರಂದು ಪ್ರಿನ್ಸ್‌ ಫಿಲಿಪ್‌ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅಂತಿಮ ವಿಧಿವಿಧಾನಗಳು ದೇಶಾದ್ಯಂತ ನೇರಪ್ರಸಾರಗೊಳ್ಳಲಿದೆ ಎಂದು ಅರಮನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೊನಾ ನಿರ್ಬಂಧ ಜಾರಿಯಲ್ಲಿರುವ ಕಾರಣ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೂ ಗೈರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next