Advertisement

ಕೋವಿಡ್-19ನಿಂದ ಗುಣಮುಖನಾದ ನಾನು ಅದೃಷ್ಟವಂತ: ಪ್ರಿನ್ಸ್‌ ಚಾರ್ಲ್ಸ್‌

10:00 PM Jun 04, 2020 | Sriram |

ಲಂಡನ್‌: ಕೋವಿಡ್-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಬ್ರಿಟನ್‌ ರಾಜಕುಮಾರ ಪ್ರಿನ್ಸ್‌ ಚಾರ್ಲ್ಸ್‌(71) ಇದೇ ಮೊದಲಬಾರಿಗೆ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನನಗೆ ಕೋವಿಡ್-19 ಸೋಂಕಿನ ಲಕ್ಷಣಗಳು ಸಾಕಷ್ಟು ತೀವ್ರ ಸ್ವರೂಪದ್ದಾಗಿರಲಿಲ್ಲ. ಆ ವಿಷಯದಲ್ಲಿ ನಾನು ಅದೃಷ್ಟವಂತ ಎಂದು ಹೇಳಿದ್ದಾರೆ.

Advertisement

ವಿಶ್ವ ಆರ್ಥಿಕ ವೇದಿಕೆ ಆಯೋಜಿಸಿದ್ದ ಪರಿಸರಕ್ಕೆ ಸಂಬಂಧಿಸಿ ಗ್ರೇಟ್‌ ರಿಸೆಟ್‌ ಆನ್‌ಲೈನ್‌ ಸಮ್ಮೇಳನಕ್ಕೆ ಚಾಲನೆ ನೀಡಿದ ವೇಳೆ ಅವರು ಈ ಮಾತುಗಳನ್ನಾಡಿದರು.

ಮಾರ್ಚ್‌ ಅಂತ್ಯದಲ್ಲಿ ಪ್ರಿನ್ಸ್‌ ಚಾರ್ಲ್ಸ್‌ಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಸ್ಕಾಟ್‌ಲ್ಯಾಂಡ್‌ನ‌ ಬಿರ್‌ಕಾಲ್‌ ಅರಮನೆಯಲ್ಲಿ ಅವರನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next