Advertisement

ಭಾರೀ ಮಹತ್ವ ಪಡೆದಿರುವ ಪ್ರಧಾನಿ ಐರೋಪ್ಯ ಭೇಟಿ

12:27 AM May 02, 2022 | Team Udayavani |

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೂರು ದಿನಗಳ ಐರೋಪ್ಯ ದೇಶಗಳ ಪ್ರವಾಸ ಸೋಮವಾರದಿಂದ ಶುರುವಾಗಿದೆ. ಈ ಪ್ರವಾಸದ ವೇಳೆ ಅವರು ಜರ್ಮನಿ, ಡೆನ್ಮಾರ್ಕ್‌, ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಭಾರತದೊಂದಿಗೆ ಈ ದೇಶಗಳು ಹೊಂದಿರುವ ಬಾಂಧವ್ಯ ವೃದ್ಧಿ, ಹೊಸ ಯೋಜನೆಗಳ ಅನುಷ್ಠಾನ ಹಾಗೂ ವಾಣಿಜ್ಯ- ವ್ಯವಹಾರಗಳ ಸಂಬಂಧವನ್ನು ಉದ್ದೀಪನಗೊಳಿಸುವುದು ಈ ಭೇಟಿಯ ಉದ್ದೇಶವಾಗಿದೆ.

Advertisement

ಪ್ರವಾಸದ ವಿವರ

ಮೇ 2

ಬರ್ಲಿನ್‌ (ಜರ್ಮನಿ)
ಬರ್ಲಿನ್‌ನಲ್ಲಿರುವ ಸುಮಾರು 2,000 ಭಾರತೀಯರು ಸೇರುವ ಬೃಹತ್‌ ಸಮಾವೇಶದಲ್ಲಿ ಮೋದಿ ಮಾತು. ಬರ್ಲಿನ್‌ನ ಚಾನ್ಸಲರ್‌ ಸ್ಕೋಲ್ಜ್ ಅವರೊಂದಿಗೆ ಇಲ್ಲಿ ನಡೆಯಲಿರುವ 6ನೇ ಭಾರತ- ಜರ್ಮನಿ ನಡುವಿನ ಅಂತರ ಸರಕಾರಿ ಸಲಹಾ ಸಮ್ಮೇಳನದಲ್ಲಿ (ಐಜಿಸಿ) ಭಾಗಿ.

ಮೇ 3
ಕೋಪನ್‌ಹೇಗ್‌ (ಡೆನ್ಮಾರ್ಕ್‌)
ಪ್ರಧಾನಿ ಫ್ರೆಡೆರಿಕ್ಸೆನ್‌ ಜತೆಗೆ ಚರ್ಚೆ. ಡೆನ್ಮಾರ್ಕ್‌ ಜತೆಗೂಡಿ ಆರಂಭಿಸಲಿರುವ ಗ್ರೀನ್‌ ಸ್ಟ್ರಾಟೆಜಿಕ್‌ ಪಾರ್ಟ್‌ನರ್‌ಶಿಪ್‌ ಯೋಜನೆ ಕುರಿತಾದ ಚರ್ಚೆ. ತದನಂತರ, 2ನೇ ಇಂಡಿಯಾ- ನೋರ್ಡಿಕ್‌ ಶೃಂಗಸಭೆಯಲ್ಲಿ ಡೆನ್ಮಾರ್ಕ್‌, ಐಸ್‌ಲ್ಯಾಂಡ್‌, ಫಿನ್ಲಂಡ್‌, ಸ್ವೀಡನ್‌ ಹಾಗೂ ನಾರ್ವೆಯ ಪ್ರಧಾನಿಗಳ ಜತೆೆ ಭಾಗಿ.

ಮೇ 4
ಪ್ಯಾರಿಸ್‌ (ಫ್ರಾನ್ಸ್‌)
ಡೆನ್ಮಾರ್ಕ್‌ನಿಂದ ಭಾರತಕ್ಕೆ ಹಿಂದಿರುಗುವಾಗ ಫ್ರಾನ್ಸ್‌ಗೆ ಪುಟ್ಟ ಭೇಟಿ, ಅಧ್ಯಕ್ಷ ಮ್ಯಾಕ್ರನ್‌ ಜತೆ ಮಾತುಕತೆ.

ಪ್ರಧಾನಿ ಹೇಳಿಕೆಯಲ್ಲೇನಿದೆ?
ತ್ರಿರಾಷ್ಟ್ರ ಪ್ರವಾಸದ ಮುನ್ನ ಪ್ರಧಾನಿ ಮೋದಿ, ತಮ್ಮ ಪ್ರವಾಸ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, “ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಇಡೀ ಐರೋಪ್ಯ ಖಂಡವೇ ಆತಂಕದ ಪರಿಸ್ಥಿತಿಯಲ್ಲಿದೆ. ಈ ಬಾರಿಯ ನನ್ನ ಭೇಟಿಯಿಂದ ಭಾರತ ಮತ್ತು ಐರೋಪ್ಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಭಾರತದ ಶಾಂತಿ ಮತ್ತು ಸಮೃದ್ಧಿಯ ಆಶಯಗಳಿಗೆ ಐರೋಪ್ಯ ದೇಶಗಳೊಂದಿಗಿನ ನಂಟನ್ನು ಬಲವರ್ಧಿಸುವುದು ಅನಿವಾರ್ಯವೂ ಆಗಿದೆ’ ಎಂದು ಆಶಿಸಿದ್ದಾರೆ.

Advertisement

ಇಂಧನ ಕ್ಷೇತ್ರದಲ್ಲಿನ ಸಹಭಾಗಿತ್ವ ಪ್ರವಾಸದಲ್ಲಿ ಪ್ರಧಾನ ಆದ್ಯತೆಯಾಗಲಿದೆ. ಉಕ್ರೇನ್‌ ಮತ್ತು ರಷ್ಯಾ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.
-ವಿಶ್ವಮೋಹನ್‌ ಕ್ವಾಟ್ರಾ,
ವಿದೇಶಾಂಗ ಕಾರ್ಯದರ್ಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next