Advertisement
ಉಡುಪಿಗೆ 3,000 ಗುರಿತಾಂತ್ರಿಕ ಸುಧಾರಣೆಗಳಿಂದಾಗಿ ಮುಂದೆ ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಯುವಜನರಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲಗಳನ್ನು ನೀಡುವ ದೃಷ್ಟಿಯಿಂದ ಕೇಂದ್ರ ಸರಕಾರ ಪ್ರಸ್ತಕ ಸಾಲಿನಲ್ಲಿ ಉಡುಪಿ ಪ್ರಧಾನಮಂತ್ರಿ ಕೌಶಲ ಕೇಂದ್ರಕ್ಕೆ 3,000 ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವ ಗುರಿಯನ್ನು ನೀಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗುರಿ ಪ್ರಮಾಣ 4ಪಟ್ಟು ಏರಿಕೆಯಾಗಿದೆ.
ಮಣಿಪಾಲ ಲಕ್ಷ್ಮೀಂದ್ರ ನಗರದ ಪ್ರಧಾನಮಂತ್ರಿ ಕೌಶಲ ಕೇಂದ್ರ 2018-19ನೇ ಸಾಲಿನಲ್ಲಿ ಶೇ.98ರಷ್ಟು ಸಾಧನೆ ಮಾಡಿದೆ. ಕಳೆದ ಸಾಲಿನಲ್ಲಿ 700 ಜನರಿಗೆ ತರಬೇತಿ ನೀಡುವ ಗುರಿ ನೀಡಿದ್ದು, 644 ಯುವಜನರು ತರಬೇತಿ ಪಡೆದುಕೊಂಡಿದ್ದಾರೆ. ಅವರಲ್ಲಿ 217 ಮಂದಿ ಸಣ್ಣ ಕೈಗಾರಿಕೆ, 122 ಬ್ಯೂಟಿಶಿಯನ್, 116 ಜನ ಕಿರಿಜೂನಿಯರ್ ಸಾಫ್ಟ್ ವೇರ್ ಡೆವಲಪರ್, 120 ಐಟಿ ಹಾಗೂ 57ಜನ ಹಾರ್ಡ್‌ವೇರ್ ಕ್ಷೇತ್ರ ಆಯ್ಕೆ ಮಾಡಿದ್ದಾರೆ. ಸುಮಾರು 12 ಜನರು ತರಬೇತಿಯನ್ನು ಅರ್ಧದಲ್ಲಿ ನಿಲ್ಲಿಸಿದ್ದಾರೆ. ಈ ಕೇಂದ್ರದಲ್ಲಿ ಬ್ಯೂಟಿಶಿಯನ್,ಸಾಫ್ಟ್ವೇರ್ ಡೆವಲಪಿಂಗ್, ಐಟಿ ಹೆಲ್ಪ್ ಡೆಸ್ಕ್, ಕಂಪ್ಯೂಟಿಂಗ್ ಮತ್ತು ನೆಟ್‌ವರ್ಕಿಂಗ್, ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್, ರೀಟೈಲ್ಸ್ ಸೇರಿದಂತೆ 8 ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಕೌಶಲ ಕೇಂದ್ರದ ನಿರ್ವಹಣೆಯನ್ನು ರೂಮನ್ ಸಂಸ್ಥೆ ವಹಿಸಿಕೊಂಡಿದೆ. ಭ್ಯರ್ಥಿಗಳಿಗೆ ತರಬೇತಿ ಪಡೆಯುವವರಿಗೆ ತಿಂಗಳಿಗೆ 1,000 ರೂ.ನಂತೆ ಪ್ರಯಾಣ ಭತ್ಯೆ ಸಿಗಲಿದೆ.
Related Articles
ಕಾರ್ಕಳ, ಕುಂದಾಪುರ, ಉಡುಪಿ, ಬ್ರಹ್ಮಾವರ ಸೇರಿದಂತೆ ವಿವಿಧ ಪ್ರದೇಶದಿಂದ ಯುವಜನರು ಈ ಕೇಂದ್ರಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸುಮಾರು 390 ಗಂಟೆಗಳ ತರಬೇತಿ ಇರಲಿದೆ. ನಿತ್ಯ ತಲಾ 2 ಗಂಟೆ ಪ್ರಾಯೋಗಿಕ ಹಾಗೂ ಥಿಯರಿ ತರಗತಿಗಳಿವೆ. ಶೇ. 90ರಷ್ಟು ಕಡ್ಡಾಯ ಹಾಜರಾತಿ ಹಾಗೂ ಕೇಂದ್ರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಇಲ್ಲವಾದರೆ ಅಭ್ಯರ್ಥಿಗಳು ಮರುಪರೀಕ್ಷೆ ಎದುರಿಸಬೇಕು.
Advertisement
ಉಚಿತ ತರಬೇತಿ18ರಿಂದ 35ರೊಳಗಿನ ವಯೋಮಿತಿಯ ಹಾಗೂ ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರದಲ್ಲಿ ಉಚಿತ ತರಬೇತಿ ಇರಲಿದೆ. ಆಸಕ್ತರು ಕೇಂದ್ರವನ್ನು ಅಥವಾ www.rooman.com/pmkvy/ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಬ್ಯಾಚ್ ಆಧಾರದ ಮೇಲೆ ತರಗತಿ ಪ್ರಾರಂಭವಾಗಲಿದೆ. ಯುವ ಜನತೆಗೆ ಅವಕಾಶ
ಗ್ರಾ.ಪಂ.ನಿಂದ ಹಿಡಿದು ವಿವಿಧ ಸ್ತರದ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯುವಕ-ಯುವತಿಯರನ್ನು ಗುರುತಿಸಿ ಪ್ರಧಾನಮಂತ್ರಿ ಕೌಶಲ ವಿಕಾಸ ಕೇಂದ್ರಕ್ಕೆ ತರಬೇತಿ ಪಡೆಯಲು ಕಳುಹಿಸಬೇಕು.
-ಶೋಭಾ ಕರಂದ್ಲಾಜೆ, ಸಂಸದೆ ಉಡುಪಿ-ಚಿಕ್ಕಮಗಳೂರು ಪ್ರಾಯೋಗಿಕ ತರಬೇತಿ
ಜಿಲ್ಲೆಯ ಗ್ರಾಮೀಣ ಭಾಗದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
-ರಾಘವೇಂದ್ರ ರಾವ್, ಪ್ರಧಾನ ಮಂತ್ರಿ ಕೌಶಲ ವಿಕಾಸ ಕೇಂದ್ರದ ಮುಖ್ಯಸ್ಥ. ಉಡುಪಿ ತೃಪ್ತಿ ಕುಮ್ರಗೋಡು