Advertisement
14 ಪ್ರಧಾನಿಗಳ ಸ್ಮರಣೆ:ಭಾರತವು 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಈವರೆಗೆ ಪ್ರಧಾನಿ ಮೋದಿಯವರನ್ನೂ ಸೇರಿ ಒಟ್ಟು 14 ಪ್ರಧಾನಿಗಳ ಆಡಳಿತ ಕಂಡಿದೆ. ಜವಹರಲಾಲ್ ನೆಹರು ಅವರಿಂದ ಹಿಡಿದು, ಪ್ರಧಾನಿ ನರೇಂದ್ರ ಮೋದಿಯವರೆಗೆ ಪ್ರತಿ ಪ್ರಧಾನ ಮಂತ್ರಿಗಳು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಈ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು.
ಸ್ವಾತಂತ್ರ್ಯ ಹೋರಾಟ, ಸಂವಿಧಾನ ರಚನೆಯ ಜೊತೆಗೆ ಆಯಾ ಪ್ರಧಾನ ಮಂತ್ರಿಗಳ ಆಡಳಿತ ಅವಧಿಯಲ್ಲಿ ಭಾರತಕ್ಕೆ ಎದುರಾದ ಸವಾಲುಗಳು ಹಾಗೂ ಅದನ್ನು ಅವರು ನಿಭಾಯಿಸಿದ ರೀತಿಯನ್ನು ಎಳೆಎಳೆಯಾಗಿ ಬಿಡಿಸಿಡಲಾಗುವುದು. ಜನರ ಹಸ್ತವೇ ಲೋಗೋ:
ವಿಶೇಷವಾಗಿ ಈ ಸಂಗ್ರಹಾಲಯಕ್ಕೆ ಭಾರತದ ಜನರ ಹಸ್ತವನ್ನೇ ಲೋಗೋ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಲೋಗೋದಲ್ಲಿ ದೊಡ್ಡ ಹಸ್ತವೊಂದರಲ್ಲಿ ಅಶೋಕ ಚಕ್ರವಿದೆ.
Related Articles
ದೆಹಲಿಯ ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ನಿರ್ಮಾಣವಾಗಿರುವ ಈ ಸಂಗ್ರಹಾಲಯದಲ್ಲಿ ಹಳೆಯ ನೆಹರು ಸಂಗ್ರಹಾಲಯವನ್ನೂ ಸೇರ್ಪಡಿಸಿಕೊಳ್ಳಲಾಗಿದೆ. ಹಾಗಾಗಿ ವಿಶೇಷವಾಗಿ ನೆಹರು ಅವರ ಕೊಡುಗೆಗಳು, ಅವರಿಗೆ ಬಂದಿರುವಂತಹ ಅತ್ಯದ್ಭುತ ಉಡುಗೊರೆಗಳನ್ನು(ಈವರೆಗೆ ಎಲ್ಲಿಯೂ ಪ್ರದರ್ಶನಗೊಳ್ಳದ ಉಡುಗೊರೆಗಳು) ಪ್ರದರ್ಶನ ಮಾಡಲಾಗುವುದು.
Advertisement