Advertisement

ಪ್ರಧಾನಿ ಆದರ್ಶ ಗ್ರಾಮ ಯೋಜನೆ ಕಾಮಗಾರಿ ವೀಕ್ಷಣೆ

06:17 PM Jan 11, 2022 | Team Udayavani |

ಕನಕಗಿರಿ: ತಾಲೂಕಿನ ನಾಲ್ಕು ಗ್ರಾಮಗಳು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಗೊಂಡಿದ್ದು, ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ ಎಂದು ತಾಪಂ ಇಒ  ಕೆ.ವಿ. ಕಾವ್ಯರಾಣಿ ಹೇಳಿದರು. ಪಿಎಂ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಗೊಂಡ ಸಮೀಪದ ಬೊಮ್ಮಸಾಗರ ತಾಂಡಾ, ಇಂಗಳದಾಳ ಹಾಗೂ ಚಿರ್ಚನಗುಡ್ಡ ತಾಂಡಾಗಳಿಗೆ ಸೋಮವಾರ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.

Advertisement

ತಾಲೂಕಿನ ಬೊಮ್ಮಸಾಗರ, ಅಡವಿಬಾವಿ, ಇಂಗಳದಾಳ ಹಾಗೂ ಚಿರ್ಚನಗುಡ್ಡ ತಾಂಡಾಗಳು ಯೋಜನೆಗೆ ಆಯ್ಕೆಯಾಗಿವೆ. ತಲಾ ಒಂದು ಗ್ರಾಮದಲ್ಲಿ 40 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕುಡಿಯುವ ನೀರು, ಗ್ರಾಮ ನೈರ್ಮಲಿಕರಣ, ಕಸ ವಿಲೇವಾರಿ, ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯ ದುರಸ್ತಿ, ಸ್ಮಾರ್ಟ್‌ ಕ್ಲಾಸ್‌ ಅಳವಡಿಕೆ, ಸಿಸಿ ರಸ್ತೆ ನಿರ್ಮಾಣ, ಸೌರ ವಿದ್ಯುತ್‌ ಮತ್ತು ಬೀದಿ ದೀಪಗಳ ನಿರ್ಮಾಣ ಸೇರಿ ಇತರೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆಲ ಕಾಮಗಾರಿಗಳು ಮುಗಿದಿದ್ದು, ಉಳಿದಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಉದ್ದೇಶವಾಗಿದೆ.

ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕು. ಕಳಪೆ ಕಾಮಗಾರಿ ನಡೆದರೆ ಗಮನಕ್ಕೆ ತರುವಂತೆ ಗ್ರಾಮಸ್ಥರಿಗೆ ಹೇಳಿದರು. ಕೆಆರ್‌ಡಿಇಎಲ್‌ ಜೆ.ಇ. ದೇವರಾಜ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ವೀರಣ್ಣ ನಕ್ರಳ್ಳಿ, ಶರಣೇಗೌಡ ಪಾಟೀಲ, ಗ್ರಾಪಂ ಸದಸ್ಯ ಕೃಷ್ಣಪ್ಪ, ಚರ್ಚಿನಗುಡ್ಡ ತಾಂಡಾ ಗ್ರಾಪಂ ಸದಸ್ಯರಾದ ಹುಸೇನಸಾಬ್‌, ಪ್ರಮುಖರಾದ ಯಮನೂರಪ್ಪ ದಳಪತಿ, ರಾಮಚಂದ್ರಗೌಡ, ರಾಮಣ್ಣ ಆದಾಪುರ, ಬಸವರಾಜ, ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next