Advertisement

ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ; 40 ವರ್ಷ ಬೇಕಾಯಿತು; ವಿಪಕ್ಷಗಳತ್ತ ಚಾಟಿ

04:26 PM Jun 20, 2022 | Team Udayavani |

ಬೆಂಗಳೂರು : ಕಳೆದ 40 ವರ್ಷ ಗಳಿಂದ ನಾವು ಯೋಜನೆಗಳ ಕುರಿತು ಚರ್ಚೆಯಲ್ಲೇ ಕಾಲ ಕಳೆದಿದ್ದೇವೆ, ನಾವು ಈಗ ಅದನ್ನು 40  ತಿಂಗಳಿನಲ್ಲಿ ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳತ್ತ ಚಾಟಿ ಬೀಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸದ ವೇಳೆ ಸೋಮವಾರ ಮಧ್ಯಾಹ್ನ ಕೊಮ್ಮಘಟ್ಟದಲ್ಲಿ ನಡೆದ ಹಲವು ಹಲವು ಕಾಮಗಾರಿಗಳ ಶಂಕುಸ್ಥಾಪನೆ, ರಾಷ್ಟ್ರಕ್ಕೆ ಸಮರ್ಪಣೆ ಮಾಡಿ ಪ್ರಧಾನಿ ಮಾತನಾಡಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ ,ಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರವು ನಿಮಗೆ ನೀಡಿದ ವಿಶ್ವಾಸವನ್ನು ಇಂದು 27 ಸಾವಿರ ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಸುವ ಮೂಲಕ ನಾವೆಲ್ಲರೂ ಮತ್ತೊಮ್ಮೆ ನೋಡುತ್ತಿದ್ದೇವೆ ಎಂದರು.

ಒಂದು ಕಾಲದಲ್ಲಿ ವಿಮಾನ ನಿಲ್ದಾಣಗಳು ಮತ್ತು ವಿಮಾನ ಪ್ರಯಾಣದಲ್ಲಿ ಮಾತ್ರ ಕಂಡುಬರುತ್ತಿದ್ದ ವಾತಾವರಣವನ್ನು ಭಾರತೀಯ ರೈಲ್ವೇ ಈಗ ಆ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ.ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿನ ಬೆಂಗಳೂರಿನ ಆಧುನಿಕ ರೈಲು ನಿಲ್ದಾಣವೂ ಇದಕ್ಕೆ ನೇರ ಸಾಕ್ಷಿಯಾಗಿದೆ ಎಂದರು.

ಡಬಲ್ ಇಂಜಿನ್ ಸರ್ಕಾರ ಬೆಂಗಳೂರನ್ನು ಟ್ರಾಫಿಕ್ ಜಂಜಾಟದಿಂದ ಮುಕ್ತಗೊಳಿಸಲು ಸಾಧ್ಯವಿರುವ ಎಲ್ಲ ವಿಧಾನ ರೈಲು, ರಸ್ತೆ, ಮೆಟ್ರೋ, ಕೆಳಸೇತುವೆ, ಮೇಲ್ಸೇತುವೆ, ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರವು ಬೆಂಗಳೂರಿನ ಉಪನಗರ ಪ್ರದೇಶಗಳನ್ನು ಉತ್ತಮ ಸಂಪರ್ಕದೊಂದಿಗೆ ಸಂಪರ್ಕಿಸಲು ಬದ್ಧವಾಗಿದೆ ಎಂದರು.

Advertisement

ಬೆಂಗಳೂರು ದೇಶದ ಯುವಕರ ಕನಸಿನ ನಗರವಾಗಿದ್ದು, ಅದರ ಹಿಂದೆ ಉದ್ಯಮಶೀಲತೆ, ನಾವೀನ್ಯತೆ ಇದೆ.ಇನ್ನೂ ಭಾರತದ ಖಾಸಗಿ ವಲಯ, ಖಾಸಗಿ ಉದ್ಯಮವನ್ನು ಅಸಂಬದ್ಧ ಪದಗಳಿಂದ ಸಂಬೋಧಿಸುವ ಜನರಿಗೆ ತಮ್ಮ ಮನಸ್ಥಿತಿಯನ್ನು ಬದಲಾಯಿಸಲು ಬೆಂಗಳೂರು ಕಲಿಸುತ್ತದೆ ಎಂದರು.

16 ವರ್ಷಗಳಿಂದ ಈ ಯೋಜನೆಗಳು ಕಡತಗಳಲ್ಲಿ ಕುಂಟುತ್ತಲೇ ಇದ್ದವು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಮತ್ತು ಬೆಂಗಳೂರಿನ ಜನರ ಪ್ರತಿಯೊಂದು ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ ಎಂದು ನನಗೆ ಸಂತೋಷವಾಗಿದೆ ಎಂದರು.

ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, 7 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ.ಕೊಂಕಣ ರೈಲ್ವೆಯ 100% ವಿದ್ಯುದೀಕರಣದ ಮಹತ್ವದ ಮೈಲಿಗಲ್ಲನ್ನು ನಾವು ನೋಡಿದ್ದೇವೆ.ಈ ಎಲ್ಲಾ ಯೋಜನೆಗಳು ಕರ್ನಾಟಕದ ಯುವಕರು, ಮಧ್ಯಮ ವರ್ಗ, ರೈತರು, ಕಾರ್ಮಿಕರು, ಉದ್ಯಮಿಗಳಿಗೆ ಹೊಸ ಸೌಲಭ್ಯಗಳನ್ನು, ಹೊಸ ಅವಕಾಶಗಳನ್ನು ನೀಡಲಿವೆ ಎಂದರು.

ದೇಶದ ಶಕ್ತಿಯನ್ನು ಅಧಿಕಾರಶಾಹಿ ಮಾನಸಿಕತೆ ಉಳ್ಳ ವ್ಯಕ್ತಿಗಳು ವಿಭಿನ್ನ ದೃಷ್ಟಿಯಿಂದ ನೋಡುತ್ತಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ : ಹಲವು ಕಾಮಗಾರಿಗಳ ಶಂಕುಸ್ಥಾಪನೆ, ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಪ್ರಧಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next