Advertisement
ಕ್ಯಾಂಪ್ಕೋ, ಎಆರ್‌ಡಿಎಫ್, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮಂಗಳೂರು ವಿ.ವಿ. ಆಶ್ರಯದಲ್ಲಿ ನೆಹರೂ ನಗರದ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆ. 10ರಿಂದ 12ರ ತನಕ 3 ದಿನಗಳ ಕಾಲ ನಡೆಯಲಿರುವ 5ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
321 ರೂ.ಗೆ ಶೀಘ್ರ ಏರಿಕೆ
ಆಮದಾಗುವ ಅಡಿಕೆ ಮೇಲೆ ನಿಯಂತ್ರಣದ ದೃಷ್ಟಿಯಿಂದ ಕನಿಷ್ಠ ಆಮದು ಸುಂಕವನ್ನು 251 ರೂ.ಗಳಿಂದ 351 ರೂ.ಗೆ ಏರಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಇಲಾಖೆ ಒಪ್ಪಿಗೆ ಕೊಟ್ಟು ಡಿಜಿಎಫ್‌ಟಿಗೆ ಕಳುಹಿಸಿದೆ. ಅಲ್ಲಿಂದ ವಾಣಿಜ್ಯ ಸಚಿ ವಾಲಯಕ್ಕೆ ಕಳುಹಿಸಿದ್ದು, ಅಲ್ಲಿ ಒಪ್ಪಿಗೆ ನೀಡುವ ಪ್ರಕ್ರಿಯೆ ಆಗುತ್ತಿದೆ ಶೀಘ್ರ ಘೋಷಣೆಯಾಗಲಿದೆ ಎಂದರು. ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ ಸಂಶೋಧನೆ ನಡೆಸಲು ಕೆನಡಾದ ವಿಜ್ಞಾನಿಗಳ ಜತೆ ಚರ್ಚಿಸಲಾಗಿದೆ ಎಂದರು.
Related Articles
ದೇಶವು ಮೊದಲ ಬಾರಿಗೆ ಆಹಾರ ಧಾನ್ಯದಲ್ಲಿ ಸ್ವಾವಲಂಬನೆ ಹೊಂದಿದೆ. ಖಾದ್ಯ ತೈಲದಲ್ಲಿ ಸ್ವಾವಲಂಬನೆ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಕೃಷಿಕರು ತಾಳೆ ಬೆಳೆಗೂ ಒತ್ತು ನೀಡಬೇಕು. ಕ್ಯಾಂಪ್ಕೋ ತೈಲ ಉತ್ಪಾದನ ಘಟಕ ತೆರೆಯಬೇಕು ಎಂದರು.
Advertisement
ಕೇಂದ್ರವು ಅಡಿಕೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬೇಡಿಕೆ ಈಡೇರಿಕೆಗೆ ಸ್ಪಂದನೆ ನೀಡಿದೆ. ಅದರೊಂದಿಗೆ ಅಡಿಕೆ ಆಮದಿಗೆ ಸಂಪೂರ್ಣ ನಿಷೇಧ ಹೇರುವ ಮೂಲಕ ದೇಶೀಯ ಅಡಿಕೆಗೆ ಬೆಂಬಲ ನೀಡಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಆಗ್ರಹಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಂಜೀವ ಮಠಂದೂರು, ಸಿಪಿಸಿಆರ್‌ಐ ಹಾಗೂ ಐಸಿಎಆರ್ ಕಾಸರಗೋಡಿನ ನಿರ್ದೆಶಕ ಡಾ| ಕೆ.ವಿ. ಹೆಬ್ಟಾರ್, ಮಂಗಳೂರು ವಿ.ವಿ. ಉಪಕುಲಪತಿ ಡಾ| ಸುಬ್ರಹ್ಮಣ್ಯ ಯಡಪಡಿತ್ತಾಯ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎನ್. ಕೃಷ್ಣ ಭಟ್, ಸಂಚಾಲಕ ಟಿ.ಎಸ್. ಸುಬ್ರಹ್ಮಣ್ಯ ಭಟ್ ಹಾಗೂ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷಿ ಯಂತ್ರ ಮೇಳದ ಸಂಯೋಜಕ ರವಿಕೃಷ್ಣ ಡಿ. ಕಲ್ಲಾಜೆ ಸ್ವಾಗತಿಸಿ, ಉಪನ್ಯಾಸಕಿ ಯರಾದ ನೀಮಾ ಎಚ್. ಕುಂಬ್ರ, ನಿಶಾ, ಹರಿಪ್ರಸಾದ್ ನಿರೂಪಿಸಿದರು.
ಕಸ್ಟಮರಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚಳಕೃಷಿಕರ ಅನುಕೂಲಕ್ಕಾಗಿ ಕೇಂದ್ರ ಸರಕಾರವು ಹೋಬಳಿ ಮಟ್ಟ ದಲ್ಲಿ ಕಸ್ಟಮರಿಂಗ್ ಕೇಂದ್ರ ತೆರೆದು ಬಾಡಿಗೆ ಆಧಾರದಲ್ಲಿ ಯಂತ್ರೋಪ ಕರಣ ನೀಡುತ್ತಿದೆ. ಇನ್ನಷ್ಟು ರೈತ ರಿಗೆ ನೆರವಾಗಲು ಕಸ್ಟಮ ರಿಂಗ್ ಕೇಂದ್ರಗಳ ಸಂಖ್ಯೆ ಹಾಗೂ ಕೃಷಿ ಯಂತ್ರಗಳ ಸಂಖ್ಯೆ ಹೆಚ್ಚಳ ಗೊಳಿಸ ಲಾಗುವುದು ಎಂದರು. ದಿನ ನಿತ್ಯದ ಸಲಕರಣೆಗಳಿಗೆ ಸಬ್ಸಿಡಿ
ಸಬ್ಸಿಡಿಯಲ್ಲಿ 80 ಸಾವಿರ ಕೋ.ರೂ. ಟ್ಯಾಕ್ಟರ್‌ಗೆ, 4 ಸಾವಿರ ಕೋ.ರೂ. ಬೇರೆ ಬೇರೆ ಸಲಕರಣೆಗಳಿಗೆ ಹೋಗುತ್ತಿದೆ. ಟ್ಯಾಕ್ಟರ್‌ಗೆ ನೀಡುವ ಸಬ್ಸಿಡಿಯನ್ನು ಕಡಿಮೆಗೊಳಿಸಿ ದಿನನಿತ್ಯ ಬಳಕೆಯ ಸಲಕರಣೆಗಳಿಗೆ ನೀಡಬೇಕಿದೆ. ಇದಕ್ಕಾಗಿ ಈ ವರ್ಷದಿಂದಲೇ ಮಾರ್ಗಸೂಚಿ ತಯಾರಿಸಲಾಗುವುದು ಎಂದರು.