Advertisement
ಆದರೆ ಸೋಮವಾರದಂದು ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್ ಒಂದು ಅವರ ಅಭಿಮಾನಿಗಳ ಸಹಿತ ಎಲ್ಲರನ್ನೂ ಒಮ್ಮೆ ಅಚ್ಚರಿಯಲ್ಲಿ ಕೆಡವಿತ್ತು. ‘ಈ ಭಾನುವಾರದಂದು ನಾನು ಫೇಸ್ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಮತ್ತು ಯೂ-ಟ್ಯೂಬ್ ನಲ್ಲಿರುವ ನನ್ನ ಅಕೌಂಟ್ ಗಳನ್ನು ತ್ಯಜಿಸುವ ಕುರಿತಾಗಿ ಯೋಚಿಸುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ನೆಟ್ಟಿಗರು ಪ್ರಧಾನಿ ನಿರ್ದಾರದಿಂದ ಆಶ್ಚರ್ಯಕ್ಕೊಳಗಾಗಿದ್ದು ಮಾತ್ರವಲ್ಲದೇ #NoSir ಹ್ಯಾಷ್ ಟ್ಯಾಗ್ ನಲ್ಲಿ ತಮ್ಮ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳುವಂತೆ ಒತ್ತಾಯಿಸತೊಡಗಿದರು.
ಆದರೆ ಪ್ರಧಾನಿ ಮೋದಿ ಅವರ ನಿನ್ನೆಯ ಟ್ವೀಟ್ ನ ಅಸಲಿಯತ್ತು ಇಂದು ಬಯಲಾಗಿದೆ. ಮಾರ್ಚ್ 8 ಭಾನುವಾರ ಮಹಿಳಾ ದಿನ, ಈ ದಿನದಂದು ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆಯನ್ನು ಒಂದು ದಿನದ ಮಟ್ಟಿಗೆ ಮಹಿಳೆಯರ ಸುಪರ್ದಿಗೆ ನೀಡುತ್ತಿದ್ದಾರೆ. ಆದರೆ ತನ್ನ ಖಾತೆಯನ್ನು ನಿಭಾಯಿಸುವ ಮಹಿಳೆಯನ್ನು ಸೂಚಿಸುವ ಜವಾಬ್ದಾರಿಯನ್ನು ಅವರು ದೇಶವಾಸಿಗಳಿಗೆ ನೀಡಿದ್ದಾರೆ. ಅದು ಹೇಗೆನ್ನುವ ಮಾಹಿತಿ ಇಲ್ಲಿದೆ.
Related Articles
ಪ್ರಧಾನಿ ಮೋದಿ ಅವರು ನಡೆಸಲು ಉದ್ದೇಶಿಸಿರುವ ಒಂದು ಅಭಿಯಾನದ ಭಾಗ ಇದಾಗಿದ್ದು #SheInspiresUs ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ಈ ಅಭಿಯಾನ ನಡೆಯುತ್ತದೆ. ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಹಿಳೆಯರನ್ನು ಗೌರವಿಸುವ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.
Advertisement
ನಿಮ್ಮ ಜೀವನ ಮತ್ತು ಕೆಲಸ ಸಮಾಜಕ್ಕೆ ಪ್ರೇರಣದಾಯಕವಾಗಿದ್ದಲ್ಲಿ ನೀವು ಒಂದು ದಿನದ ಮಟ್ಟಿಗೆ ಪ್ರಧಾನಮಂತ್ರಿಯವರ ಯಾವುದಾದರೊಂದು ಸಾಮಾಜಿಕ ಜಾಲತಾಣ ಖಾತೆಯನ್ನು ನಿಭಾಯಿಸಬಹುದು. ಅದಿಲ್ಲವಾದಲ್ಲಿ ನಿಮ್ಮ ಸುತ್ತ ಮುತ್ತಲ ಪರಿಸರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹಿಳೆಯರಿದ್ದಲ್ಲಿ ಅವರ ಹೆಸರನ್ನೂ ನೀವು ಈ ಆಭಿಯಾನದಲ್ಲಿ ಸೇರಿಸಬಹದು. ಅದು ಹೇಗೆಂದರೆ…?
ನಿಮಗೆ ತಿಳಿದಿರುವ ಪ್ರೇರಣಾದಾಯಕ ಮಹಿಳೆಯರ ಕುರಿತಾಗಿ ಮಾಹಿತಿ/ಫೊಟೋ/ವಿಡಿಯೋವನ್ನು #SheInspiresUs ಹ್ಯಾಷ್ ಟ್ಯಾಗ್ ನಡಿಯಲ್ಲಿ ಟ್ವಿಟ್ಟರ್/ಫೇಸ್ ಬುಕ್/ಇನ್ ಸ್ಟಾ ಗ್ರಾಂಗಳಲ್ಲಿ ಪೋಸ್ಟ್ ಮಾಡಿ. ಇನ್ನು ಅವರ ಕುರಿತಾದ ಕಿರು ವಿಡಿಯೋ ಇದ್ದಲ್ಲಿ ಅದನ್ನು ಇದೇ ಹ್ಯಾಷ್ ಟ್ಯಾಗ್ ಬಳಸಿ ಯೂ-ಟ್ಯೂಬ್ ನಲ್ಲಿ ಪೋಸ್ಟ್ ಮಾಡಿ.