Advertisement

ಪ್ರಧಾನಿ ಮೋದಿ ಸಂವಿಧಾನಕ್ಕೆ ಬದ್ಧರಾಗಿಲ್ಲ

12:29 PM Mar 05, 2018 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂವಿಧಾನ ದ್ರೋಹಿಗಳು. ಈ ಜೋಡಿ ದೇಶವನ್ನು ಹಾಳುಮಾಡುತ್ತಿದೆ ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಪಿ.ಮಹೇಶ್‌ಚಂದ್ರ ಗುರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಹಿಂದುತ್ವ ವರ್ಸಸ್‌ ಭಾರತೀಯ ಸಂವಿಧಾನ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಟೀ ಮಾರುವವನು ಪ್ರಧಾನ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟ ಸಂವಿಧಾನಕ್ಕೆ ಕೈ ಮುಗಿದಿದ್ದರು. ಆದರೆ, ನಂತರದ ದಿನಗಳಲ್ಲಿ ಸಂವಿಧಾನಕ್ಕೆ ಬದ್ಧರಾಗಿ ನಡೆಯಲಿಲ್ಲ. ಸಂವಿಧಾನದ ಆಶಯಗಳನ್ನು ಅನುಸರಿಸುತ್ತಿಲ್ಲ ಎಂದು ಟೀಕಿಸಿದರು.

ಭಾರತದಲ್ಲಿದ್ದು, ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕಿಂತ ವಿದೇಶ ಸುತ್ತಿ, ಅಲ್ಲಿನ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸಿ ಕಮಿಷನ್‌ ಹೊಡೆಯುವುದರಲ್ಲೇ ಕಾಲ ಕಳೆಯುತ್ತಿರುವ ಮೋದಿ ಅಂಡ್‌ ಕಂಪನಿ ದೇಶವನ್ನು ಹಾಳು ಮಾಡುತ್ತಿದೆ ಎಂದರು.

ಬಿಜೆಪಿ ಮುಕ್ತವಾಗಬೇಕು: ಗುಜರಾತ್‌ನಿಂದ ಬಿಜೆಪಿ ಅವನತಿ ಆರಂಭವಾಗಿದ್ದು, ದೇಶದ ರಾಜಕಾರಣದಿಂದಲೂ ಬಿಜೆಪಿ ಮುಕ್ತವಾಗಬೇಕು. ಈ ಕುರಿತು ಹೆಚ್ಚು ಜನ ಜಾಗೃತಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ವಿಚಾರ ಸಂಕಿರಣ, ಕಾರ್ಯಕ್ರಮಗಳನ್ನು ರೂಪಿಸಬೇಕು. ಹಿಂದುತ್ವ ಈ ದೇಶದ ಶತ್ರು. ನಾವು ಹಿಂದೂ ಧರ್ಮವನ್ನು ವಿರೋಧಿಸುತ್ತಿಲ್ಲ. ಹಿಂದುತ್ವವನ್ನು ವಿರೋಧಿಸುತ್ತಿದ್ದೇವೆ ಎಂದರು.

Advertisement

ಯಡಿಯೂರಪ್ಪ ಪೆದ್ದ, ಇವ್ನು ಓಡಾಟ ಮಾಡೋದು ಅಷ್ಟೇ. ಇವ್ರನ್ನ ಮುಖ್ಯಮಂತ್ರಿ ಮಾಡಲ್ಲ. ಅನಂತಕುಮಾರ್‌ ಹೆಗಡೆಯನ್ನು ಮುಖ್ಯಮಂತ್ರಿ ಮಾಡಲು ಮೋದಿ ಟೀಂ ಮುಂದಾಗಿದೆ. ನಾನು ಪೊಲೀಸ್‌ ರಕ್ಷಣೆ ಪಡೆಯಲ್ಲ. ನನ್ನನ್ನು ಕೊಂದರೆ ಅವರು ವಿಲನ್‌ಗಳಾಗುತ್ತಾರೆ. ನಾನು ಹುತಾತ್ಮನಾಗಿ ಹೀರೋ ಆಗುತ್ತೇನೆ ಎಂದರು.

ಉರಿಲಿಂಗಿಪೆದ್ದಿ ಮಠದ ಜಾnನ ಪ್ರಕಾಶ ಸ್ವಾಮೀಜಿ ಮಾತನಾಡಿ, ಅನಂತಕುಮಾರ್‌ ಹೆಗಡೆಯ ರಕ್ತ ನಮ್ಮ ದೇಶದ್ದಲ್ಲ. ಅವನ ರಕ್ತ ಬೆರಕೆ ರಕ್ತ. ಬೇಕಿದ್ದರೆ ಡಿಎನ್‌ಎ ಪರೀಕ್ಷೆ ಮಾಡಿಸಿ, ನಮ್ಮದು ದ್ರಾವಿಡ ರಕ್ತ ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು. 

ಚುನಾವಣೆ ಹಿನ್ನೆಲೆಯಲ್ಲಿ ದಲಿತರ ಮನೆಯಲ್ಲಿ ಅನ್ನ ತಿಂದು ವಾಸ್ತವ್ಯ ಮಾಡಲು ಬರುವ ಹಿಂದೂವಾದಿಗಳು ನಿಜವಾದ ದ್ರೋಹಿಗಳು. ಭಾರತ್‌ ಮಾತಾ ಕೀ ಜೈ ಅನ್ನುವ ಢೋಂಗಿಗಳ ಬಗ್ಗೆ ಎಚ್ಚರವಾಗಿರಬೇಕು ಎಂದರು. ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಸ್ವರಾಜ್‌ ಇಂಡಿಯಾ ಮುಖಂಡ ಪ್ರೊ.ಶಬೀರ್‌ ಮುಸ್ತಾಫಾ ಕಾರ್ಯಕ್ರಮದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next