Advertisement

NDA ಗೆ ಬರಲಿದ್ದ KCR – ಸ್ಫೋಟಕ ಮಾಹಿತಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

12:12 AM Oct 04, 2023 | Team Udayavani |

ಜಗದಾಳ್ಪುರ/ನಿಜಾಮಾಬಾದ್‌: “ತೆಲಂಗಾಣ ಮುಖ್ಯಮಂತ್ರಿ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಸಂಸ್ಥಾಪಕ ಕೆ.ಚಂದ್ರಶೇಖರ ರಾವ್‌ ಎನ್‌ಡಿಎ ಸೇರಲು ಬಯಸಿದ್ದರು. ಆದರೆ ಅವರ ನಿಲುವುಗಳ ಹಿನ್ನೆಲೆಯಲ್ಲಿ ಅವರ ಕೋರಿಕೆ ಮಾನ್ಯ ಮಾಡಲಿಲ್ಲ’

Advertisement

– ಇಂಥ ಒಂದು ಸ್ಫೋಟಕ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ತೆಲಂಗಾಣದ ನಿಜಾಮಾಬಾದ್‌ನಲ್ಲಿ ಮಂಗಳವಾರ ನೀಡಿದ್ದಾರೆ. ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ 8 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ನಡೆಸಿದ ಬಳಿಕ ಅವರು ಮಾತನಾಡಿದರು.

ಮುಂದಿನ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಬಿಆರ್‌ಎಸ್‌ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಲು ಮುಂದಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ. ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾ ವಣೆಯಲ್ಲಿ ಬಿಜೆಪಿಗೆ 48 ಸ್ಥಾನಗಳು ಬಂದಿದ್ದವು ಮತ್ತು ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಕೆಸಿಆರ್‌ ನಮ್ಮ ಬೆಂಬಲವನ್ನು ಬಯಸಿದ್ದರು. ಫ‌ಲಿತಾಂಶಕ್ಕಿಂತ ಮೊದಲು ನಾನು ರಾಜ್ಯಕ್ಕೆ ಆಗಮಿಸಿದಾಗ ತೆಲಂಗಾಣ ಸಿಎಂ ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೂವಿನ ಹಾರ ಹಾಕಿ ನನ್ನನ್ನು ಸ್ವಾಗತಿಸುತ್ತಿದ್ದರು. ಅನಂತರ ಅವರು ಬಂದು ಸ್ವಾಗತಿಸುವುದನ್ನು ನಿಲ್ಲಿಸಿದರು. ಯಾವ ಕಾರಣಕ್ಕೆ ಅವರು ಹೀಗೆ ಮಾಡಿದರೋ ಗೊತ್ತಿಲ್ಲ ಎಂದು ಪ್ರಧಾನಿ ಮೋದಿ ಲಘುವಾಗಿ ಹೇಳಿದರು.

ದಿಲ್ಲಿಯಲ್ಲೂ: ಮಹಾನಗರ ಪಾಲಿಕೆ ಫ‌ಲಿತಾಂಶದ ಬಳಿಕ ಕೆ.ಚಂದ್ರಶೇಖರ ರಾವ್‌ ಹೊಸದಿಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ತಮ್ಮನ್ನು ವಿಶೇಷ ಅಕ್ಕರೆಯಿಂದ ಭೇಟಿಯಾಗಿದ್ದರು ಎಂದರು ಪ್ರಧಾನಿ. ಅಂಥ ಸ್ವಭಾವವನ್ನು ಹೊಂದಿಲ್ಲದೇ ಇರುವ ಕೆಸಿಆರ್‌ ವರ್ತನೆಯಿಂದ ಅಚ್ಚರಿಗೊಂಡಿದ್ದೆ ಎಂದು ಹೇಳಿದರು. ಅದರ ಹಿನ್ನೆಲೆಯನ್ನು ವಿಚಾರಿಸಿದಾಗ “ಭಾರತ ನಿಮ್ಮ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ನನ್ನ ಪಕ್ಷ ಎನ್‌ಡಿಎಗೆ ಸೇರಲು ಬಯಸುತ್ತಿದೆ ಎಂದು ಹೇಳಿದ್ದರು. ಜತೆಗೆ ಹೈದರಾಬಾದ್‌ ಪಾಲಿಕೆಯಲ್ಲಿ ಬಿಜೆಪಿಯ ಬೆಂಬಲವನ್ನೂ ಯಾಚಿಸಿದ್ದರು ಎಂದರು.
ನಿಮ್ಮ ಕೃತ್ಯಗಳಿಂದಾಗಿ ಬಿಆರ್‌ಎಸ್‌ ಜತೆಗೆ ಕೈಜೋಡಿಸಲು ಬಿಜೆಪಿಗೆ ಸಾಧ್ಯವಿಲ್ಲ. ಪಾಲಿಕೆಯಲ್ಲಿ ನಾವು ವಿಪಕ್ಷದಲ್ಲಿ ಕೂರುತ್ತೇವೆ. ಜನರ ಮತಾದೇಶಕ್ಕೆ ಮೋಸ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಬಗ್ಗೆ ಪ್ರಧಾನಿ ಬಹಿರಂಗಪಡಿಸಿದ್ದಾರೆ.

ಪುತ್ರನಿಗೆ ಅಧಿಕಾರ ನೀಡಲು ಸಿದ್ಧತೆ: ತೆಲಂಗಾಣದ ಮುಖ್ಯಮಂತ್ರಿ ಸ್ಥಾನವನ್ನು ಪುತ್ರ ಕೆ.ಟಿ.ರಾಮ ರಾವ್‌ಗೆ ನೀಡಲು ಮುಂದಾಗಿರುವ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ಅದಕ್ಕಾಗಿ ಕೆ.ಚಂದ್ರಶೇಖರ ರಾವ್‌ ತಮ್ಮ ಆಶೀರ್ವಾದ ಯಾಚಿಸಿದ್ದರು ಎಂದರು. ಅದಕ್ಕೆ ನಾನು ಇದು ರಾಜವಂಶಸ್ಥರ ಆಡಳಿತ ಅಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತ ಇದೆ ಎಂದು ಕೆಸಿಆರ್‌ಗೆ ಮನವರಿಕೆ ಮಾಡಿಕೊಟ್ಟಿರುವ ಬಗ್ಗೆ ಪ್ರಧಾನಿ ಹೇಳಿದ್ದಾರೆ.

Advertisement

ಉದ್ಘಾಟನೆ: ಎನ್‌ಟಿಪಿಸಿಯ ಘಟಕವಾಗಿರುವ ತೆಲಂಗಾಣ ಸೂಪರ್‌ ಥರ್ಮಲ್‌ ಯೋಜನೆಯ ಮೊದಲ ಹಂತದ 800 ಮೆಗಾವ್ಯಾಟ್‌ನ ವಿದ್ಯುತ್‌ ಘಟಕವನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಇದರಿಂದಾಗಿ ತೆಲಂಗಾಣಕ್ಕೆ ಲಾಭವಾಗಲಿದೆ ಎಂದರು.

ಜಿಲ್ಲೆ, ರಾಜ್ಯಗಳ ಅಭಿವೃದ್ಧಿಯಿಂದ ದೇಶ ಬೆಳವಣಿಗೆ: ದೇಶದ ಪ್ರತೀ ಜಿಲ್ಲೆಗಳು, ರಾಜ್ಯಗಳು ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣಗೊಳ್ಳಲು ಸಾಧ್ಯ ಎಂದರು ಪ್ರಧಾನಿ. ಛತ್ತೀಸ್‌ಗಢದ ಜಗದಾಳು³ರದಲ್ಲಿ 26 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿನ ರೈಲ್ವೇ ಯೋಜನೆಗಳಿಗೆ ಈಗ ಹೆಚ್ಚಿನ ವಿತ್ತೀಯ ನೆರವು ನೀಡಲಾಗುತ್ತಿದೆ ಎಂದರು. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಕಾಂಗ್ರೆಸ್‌ ಸರಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿವೆ ಎಂದು ಪ್ರಧಾನಿ ದೂರಿದರು.

ಕರ್ನಾಟಕದಲ್ಲಿ ನೆರವು
ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲ್ಲಲು ಬಿಆರ್‌ಎಸ್‌ ವಿತ್ತೀಯ ನೆರವನ್ನೂ ನೀಡಿದೆ ಎಂದು ಮೋದಿ ಹೇಳಿದ್ದಾರೆ. ಅವೆರಡೂ ಪಕ್ಷಗಳು ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆ ಯಲ್ಲಿ ಸೋಲು ಅನುಭವಿಸಲಿವೆ ಎಂದರು.

ಯಾವ ಕಾರಣಕ್ಕೂ ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೆ ಸೇರಿ ಕೊಳ್ಳುವ ಅಂಶವನ್ನು ತಂದೆಯವರು ಮಾಡಿಲ್ಲ. ಎನ್‌ಡಿಎ ಈಗ ಮುಳುಗುತ್ತಿರುವ ಹಡಗು.
ಕೆ.ಟಿ.ರಾಮ ರಾವ್‌, ತೆಲಂಗಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next