Advertisement

“ಜಲ ಜೀವನ್‌’ನಿಂದ ದೇಶದ ಸಕಲ ಅಭಿವೃದ್ಧಿಗೆ ಉತ್ತೇಜನ : ಪ್ರಧಾನಿ ಮೋದಿ

10:53 PM Apr 09, 2022 | Team Udayavani |

ನವದೆಹಲಿ: “ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ “ಜಲಜೀವನ ಮಿಷನ್‌’ ಯೋಜನೆಯು ದೇಶದ ಸಕಲ ಅಭಿವೃದ್ಧಿಗೆ ಉತ್ತೇಜಕವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

Advertisement

“2019ರಲ್ಲಿ ಜಲ ಜೀವನ ಯೋಜನೆ ಆರಂಭವಾಗುವುದಕ್ಕೂ ಮೊದಲು ದೇಶದಲ್ಲಿ ಕೇವಲ ಶೇ.16.75 ಅಂದರೆ 3.23 ಮನೆಗಳಿಗೆ ನೀರಿನ ಪೂರೈಕೆ ಯಾಗುತ್ತಿತ್ತು. ಯೋಜನೆ ಆರಂಭವಾದ ಎರಡೇ ವರ್ಷಗಳಲ್ಲಿ ಆ ಪ್ರಮಾಣ ಶೇ. 48.62ಕ್ಕೆ ಏರಿಕೆಯಾಗಿದೆ. 107 ಜಿಲ್ಲೆಗಳ 1.5 ಲಕ್ಷ ಗ್ರಾಮಗಳಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.

“ಈವರೆಗೆ, 17.39 ಲಕ್ಷ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿ ಯೇ 4.82 ಲಕ್ಷ ಜಲ ಸಮಿತಿ ರಚಿಸ ಲಾಗಿದೆ. ನೀರಿನ ಗುಣಮಟ್ಟ ಪರೀಕ್ಷೆ ಗಾಗಿ 9.69 ಲಕ್ಷ ಮಹಿಳೆಯರಿಗೆ ತರ ಬೇತಿ ನೀಡಲಾಗಿದೆ. 4 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿ : ಅಮಿತ್‌ ಶಾ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next