Advertisement

Ukraine ವಿರುದ್ಧ ರಷ್ಯಾದ ಅಣ್ವಸ್ತ್ರ ದಾಳಿ ತಡೆದಿದ್ದ ಪ್ರಧಾನಿ ಮೋದಿ!

12:43 AM Mar 11, 2024 | Team Udayavani |

ಹೊಸದಿಲ್ಲಿ: ಉಕ್ರೇನ್‌ ವಿರುದ್ಧ ರಷ್ಯಾ ಅಣ್ವಸ್ತ್ರ ಬಳಕೆಗೆ ಮುಂದಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಭಾವ್ಯ ಅಣು ಬಾಂಬ್‌ ದಾಳಿ ನಡೆಯ ದಂತೆ ನೋಡಿಕೊಂಡರು ಎಂದು ಅಮೆರಿಕದ ಸಿಎನ್‌ಎನ್‌ ಟಿವಿ ವರದಿ ಮಾಡಿದೆ. “ಮೋದಿ ಅವರ ಮಧ್ಯಸ್ಥಿಕೆ ಮತ್ತು ಇತರ ದೇಶಗಳ ನಾಯಕರು ಈ ದಾಳಿ ನಡೆಯ ದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿ ಮಾಡಲಾಗಿದೆ.

Advertisement

ರಷ್ಯಾ ಅಣ್ವಸ್ತ್ರಗಳನ್ನು ಬಳಸಬಹುದು ಎಂದು ಅಮೆರಿಕ ಜೋ ಬೈಡೆನ್‌ ಆಡಳಿತವು ಆತಂಕಕ್ಕೀಡಾಗಿತ್ತು ಎಂದೂ ತಿಳಿಸಲಾಗಿದೆ.
ಭಾರತದ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಪ್ರಯತ್ನ ಮತ್ತು ಸಾರ್ವಜನಿಕ ಹೇಳಿಕೆಗಳು ಬಿಕ್ಕಟ್ಟು ಉಂಟಾಗದಂತೆ ನೋಡಿ ಕೊಳ್ಳುವಲ್ಲಿ ಕಾರಣವಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೂಂದೆಡೆ ಉಕ್ರೇನ್‌ ಅಣು ಬಾಂಬ್‌ ಬಳಸಲಿದೆ ಎಂದು ರಷ್ಯಾದಲ್ಲಿ ಸುಳ್ಳು ಸುದ್ದಿಯನ್ನು ಪಸರಿಸಲಾಯಿತು. ಇದನ್ನೇ ಅಣ್ವಸ್ತ್ರ ಬಳಕೆಗೆ ಅಸ್ತ್ರ ಮಾಡಿಕೊಳ್ಳುವ ಹುನ್ನಾರವಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯುದ್ಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಎಂದೂ ನೇರವಾಗಿ ರಷ್ಯಾವನ್ನು ಟೀಕಿಸಿಲ್ಲ. ಆದರೆ ಇದು ಯುದ್ಧಗಳ ಕಾಲವಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರಿಗೆ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next