Advertisement

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

04:07 PM Sep 30, 2022 | Team Udayavani |

ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಂದೇ ಭಾರತ್ 2.0 ಎಕ್ಸ್ ಪ್ರೆಸ್ ರೈಲನ್ನು ಗುಜರಾತಿನ ಗಾಂಧಿನಗರದಲ್ಲಿ ಲೋಕಾರ್ಪಣೆಗೊಳಿಸಿದರು.

Advertisement

ಬೆಳಗ್ಗೆ10:30ರ ಸುಮಾರಿಗೆ ಗಾಂಧಿನಗರ ರಾಜಧಾನಿ ರೈಲು ನಿಲ್ದಾಣದಿಂದ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ನಂತರ ಅವರು ಅಹಮದಾಬಾದ್‌ನ ಗಾಂಧಿನಗರ ಮತ್ತು ಕಲುಪುರ್ ರೈಲು ನಿಲ್ದಾಣದ ನಡುವೆ ಪ್ರಯಾಣಿಕರೊಟ್ಟಿಗೆ ಪ್ರಯಾಣ ಬೆಳೆಸಿದರು.

ಮಹಾರಾಷ್ಟ್ರ ಮತ್ತು ಗುಜರಾತ್‌ನ ರಾಜಧಾನಿ ನಗರಗಳನ್ನು ಸಂಪರ್ಕಿಸುವ ಈ ರೈಲು ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಮೊದಲ ರೈಲು ಹೊಸದಿಲ್ಲಿ-ವಾರಣಾಸಿ ಮಾರ್ಗದಲ್ಲಿ ಪ್ರಾರಂಭಿಸಿದರೆ, ಎರಡನೆಯದು ಹೊಸದಿಲ್ಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾರ್ಗದಲ್ಲಿ ಪ್ರಾರಂಭವಾಗಿದೆ.

ಈ ರೈಲು ಪ್ರಯಾಣಿಕರಿಗೆ ವಿಮಾನದಂತಹ ಪ್ರಯಾಣದ ಅನುಭವ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರೈಲು ಇದಾಗಿದ್ದು, ರೈಲುಗಳ ನಡುವೆ ಅಪಘಾತ ತಪ್ಪಿಸುವ ವ್ಯವಸ್ಥೆ ಇದೆ.

Koo App

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next