ಕಲಬುರಗಿ: ಗುಲ್ಬರ್ಗ ವಿವಿಯಲ್ಲಿ ಮಂಗಳವಾರ ಸಮುದಾಯಭವನದಲ್ಲಿ ಬೆಳಗ್ಗೆ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವಿ ಕುಲಪತಿ, ಪ್ರೊಫೆಸರ್ ಗಳು ಹಾಗೂ ಇತರೆ ಸಿಬ್ಬಂದಿ ವಿವಿಧ ಆಸನಗಳನ್ನು ಹಾಕಿ ಖುಷಿಪಟ್ಟರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಲಪತಿ ಪ್ರೊ| ದಯಾನಂದ ಅಗಸರ್, ವಿಶ್ವಕ್ಕೆ ಯೋಗದ ಪರಿಚಯ ಮಾಡಿದ್ದು ಭಾರತೀಯರು ಎನ್ನುವುದು ಹೆಮ್ಮೆ ವಿಚಾರ. ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬರುವವರೆಗೂ ಅದು ನಮ್ಮ ಆಚರಣೆಯಾಗಿತ್ತು. ಈಗ ವಿಶ್ವದ ಆಚರಣೆಯಾಗಿದೆ. ವೈಜ್ಞಾನಿಕವಾಗಿ ಯೋಗದ ಮಹತ್ವವನ್ನು ಜಗತ್ತಿಗೆ ತಿಳಿಯ ಪಡಿಸಲು ಶ್ರಮಿಸಿದವರು ಪ್ರಧಾನಿ ಮೋದಿ ಎಂದರು.
ತಾಂತ್ರಿಕ ಯುಗದಲ್ಲಿ ನಾವು ಯೋಗದ ಸಹಾಯದಿಂದ ತುಸು ಉತ್ತಮ ಮತ್ತು ಶಾಂತಿಯುತ ಜೀವನ ನಡೆಸಬಹುದು. ಆದ್ದರಿಂದ ಪ್ರತಿಯೊಬ್ಬರು ಯೋಗ ಮಾಡಬೇಕಾದ ಅನಿವಾರ್ಯತೆ ಗ್ಲೋಬಲ್‌ಯುಗದಲ್ಲಿ ಎದುರಾಗಿದೆ. ಇದನ್ನು ಎಲ್ಲರೂ ಪರಿಪಾಲಿಸಲೇಬೇಕು ಎಂದರು.
ಮಾನಸಿಕ ತಜ್ಞ ಡಾ| ಸಿ.ಆರ್. ಚಂದ್ರಶೇಖರ, ವಿತ್ತಾಧಿಕಾರಿ, ಪ್ರೊ| ಎನ್. ಬಿ. ನಡುವಿನಮನಿ, ಎನ್‌ಎಸ್‌ಎ ಸ್ ಸಂಯೋಜಕ ಡಾ| ಜಿ. ಕಣ್ಣೂರ, ಡಾ| ಹನಮಂತ ಜಂಗೆ, ಡಾ| ಚಂದ್ರಕಾಂತ ಬಿರಾದಾರ, ಡಾ| ಎಂ.ಎಸ್. ಪಾಸೋಡಿ, ಡಾ| ಚಂದ್ರಕಾಂತ ಕೆಳಮನಿ., ಡಾ| ದೇವೇಂದ್ರಪ್ಪ ತೇಲ್ಕರ, ಪ್ರೊ| ಗುರು ಶ್ರೀರಾಮಲು, ಪ್ರೊ| ಜಗನ್ನಾಥ ಸಿಂಧೆ, ಪ್ರೊ| ಕೆರೂರ ಹಾಗೂ ಸಿಬ್ಬಂದಿ ಇದ್ದರು.