Advertisement

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಜಮೆಯಾಗದವರದ್ದು ತ್ರಿಶಂಕು ಸ್ಥಿತಿ

10:05 AM Dec 07, 2019 | mahesh |

ಪುತ್ತೂರು: ಕೇಂದ್ರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಗೌರವಧನವು ಅರ್ಜಿ ಸಲ್ಲಿಸಿದ ರೈತರ ಖಾತೆಗಳಿಗೆ ಹಂತ ಹಂತವಾಗಿ ಜಮೆ ಯಾಗುತ್ತಿದೆ. ಆದರೆ ಒಮ್ಮೆಯೂ ಖಾತೆಗೆ ಜಮೆ ಆಗದವರು ಮಾತ್ರ ಮರಳಿ ಅರ್ಜಿ ಸಲ್ಲಿಸುವ ಬಗ್ಗೆ ಸ್ಪಷ್ಟತೆ ಇಲ್ಲದೆ ಗೊಂದಲ ಎದುರಿಸುತ್ತಿದ್ದಾರೆ.

Advertisement

ರಾಜ್ಯದಲ್ಲಿ ಒಟ್ಟು 47,39,436 ಅರ್ಜಿಗಳು ಸಲ್ಲಿಕೆಯಾ ಗಿದ್ದು, 46,91,272 ಮಂದಿಗೆ ಪ್ರಥಮ ಕಂತಿನ ಹಣ ಲಭಿಸಿದೆ. ಎರಡನೇ ಕಂತು ಜಮೆಯಾದ ಖಾತೆಗಳು 34,34,012. ತೃತೀಯ ಕಂತು ಕೇವಲ 3,68,519 ಮಂದಿಗಷ್ಟೇ ಆಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದಿಂದ ಮಾಹಿತಿ ಲಭಿಸಿದೆ.

ತ್ರಿಶಂಕು ಸ್ಥಿತಿ
ಒಂದು ಕಂತಿನ ಹಣ ಕೂಡ ಜಮೆ ಆಗದ ಸಾವಿರಾರು ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಜಮೆ ಯಾಗಲು ಆಧಾರ್‌ ದಾಖಲೆ ಅಗತ್ಯ. ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದವರಿಗೆ ಸಮಸ್ಯೆ ಯಾಗಿದೆ. ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವವರ ಆಧಾರ್‌ ಲಿಂಕ್‌ ಆದ ಖಾತೆಗೆ ಹಣ ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಕೆಲವರ ಗ್ಯಾಸ್‌ ಸಬ್ಸಿಡಿ ಖಾತೆಗೆ ಜಮೆಯಾಗಿದೆ. ಆದರೆ ಇಲಾಖೆಯ ಮೂಲಕ ಇದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.

ಆರಂಭದಲ್ಲಿ ಅರ್ಜಿ ಸ್ವೀಕರಿಸುವ ಸಂದರ್ಭ ದಲ್ಲಿ ಹೋಬಳಿ ಮಟ್ಟದಲ್ಲಿ ಅರ್ಜಿ ಅಂತಿಮ ಗೊಳಿಸ ಲಾಗಿದೆ. ಗ್ರಾಮ ಕರಣಿಕರ ಬಳಿ ಸಲ್ಲಿಸಿದ ಕೆಲವು ಅರ್ಜಿಗಳು ಕಣ್ಮರೆ ಯಾಗಿರುವ ಸಾಧ್ಯತೆಯ ಬಗ್ಗೆಯೂ ಆರೋಪಗಳಿವೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅವಕಾಶ ಮುಂದು ವರಿಸಲಾಗಿದೆ. ಆದರೆ ಇದುವರೆಗೆ ಖಾತೆಗೆ ಹಣ ಬಾರದೆ ಇರುವವರ ಮರು ಅರ್ಜಿಯನ್ನು ಇಲಾಖೆಯಲ್ಲಿ ಸ್ವೀಕರಿಸಲಾ ಗುತ್ತಿದ್ದರೂ ಮೇಲಧಿ ಕಾರಿಗಳಿಂದ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ ತಾಲೂಕು ಕೃಷಿ ಅಧಿಕಾರಿಗಳು.

ಪರಿಶೀಲನ ವೆಬ್‌ಸೈಟ್‌
ಕಿಸಾನ್‌ ಸಮ್ಮಾನ್‌ನಲ್ಲಿ ಸಲ್ಲಿಕೆಯಾದ ಅರ್ಜಿಯ ಸ್ಥಿತಿಗತಿ ಪರಿಶೀಲನೆಗೆ ಇಲಾಖೆಯ Fruitspmkisan.gov.nic ನಲ್ಲಿ ಅವಕಾಶವಿದೆ. ರೈತರು ಆಧಾರ್‌ ಸಂಖ್ಯೆ ನಮೂದಿಸಿ ಪರಿಶೀಲಿಸಬಹುದು.

Advertisement

ಮಾಹಿತಿಯಲ್ಲಿ ವ್ಯತ್ಯಾಸ
ದ.ಕ. ಜಿಲ್ಲೆಯಲ್ಲಿ 1,26,944 ಅರ್ಜಿ ಸಲ್ಲಿಕೆ ಯಾಗಿದ್ದು, ಪ್ರಥಮ ಕಂತಿನ ಹಣ 1,26,349 ಮಂದಿಗೆ ಜಮೆಯಾಗಿರುವ ಕುರಿತು ಜಿಲ್ಲಾ ಕೃಷಿ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. ಅಂದರೆ 595 ಮಂದಿಗೆ ಬಾಕಿಯಿದ್ದಂತಾಯಿತು. ಆದರೆ ಪುತ್ತೂರು ತಾಲೂಕಿನ 34,821 ಅರ್ಜಿಗಳಲ್ಲಿ 33,190 ಮಂದಿಗೆ ಹಣ ಪಾವತಿಯಾಗಿದೆ ಎಂದು ಸ. ಕೃಷಿ ನಿರ್ದೇಶಕರು ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಇಲ್ಲಿ 1,631 ಮಂದಿಯ ಖಾತೆಗೆ ಜಮೆಯಾಗಲು ಬಾಕಿಯಿದ್ದರೆ, ಜಿಲ್ಲೆಯಲ್ಲಿ 595 ಮಂದಿಗೆ ಮಾತ್ರ ಬಾಕಿ ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.

ಒಮ್ಮೆ ಅರ್ಜಿ ಸಲ್ಲಿಸಿದ ರೈತರು ಮರಳಿ ಸಲ್ಲಿಸಿದರೆ ವೆಬ್‌ಸೈಟ್‌ನಲ್ಲಿ ಸ್ವೀಕಾರವಾಗುವುದಿಲ್ಲ. ಆದರೆ ಸಲ್ಲಿಸಿದ ಅರ್ಜಿಯ ಕುರಿತು ಆಧಾರ್‌ ಕಾರ್ಡ್‌ ಅಥವಾ ಮೊಬೈಲ್‌ ಸಂಖ್ಯೆ ನಮೂದಿಸಿ ವೆಬ್‌ಸೈಟ್‌ ಮೂಲಕ ಪರಿಶೀಲನೆಗೆ ಅವಕಾಶವಿದೆ.
ನಂದನ್‌ ಶೆಣೈ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next