Advertisement

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

03:26 PM May 05, 2024 | Team Udayavani |

ಹೊಸದಿಲ್ಲಿ : ‘1994ರಲ್ಲಿ ನೀಡಿದ್ದ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ಬಳಿಯಲು ಪ್ರಧಾನಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಭಾನುವಾರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಎ ಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ‘ನಾವು ಧರ್ಮವನ್ನೇ ಆಧಾರವಾಗಿಟ್ಟುಕೊಂಡಿಲ್ಲ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆ ನೀಡಿ ಮೀಸಲಾತಿ ನೀಡಿದ್ದೇವೆ’ ಎಂದರು.

1994ರ ನಂತರ, ಕರ್ನಾಟಕದಲ್ಲಿ 4 ಜನ ಬಿಜೆಪಿ ಮುಖ್ಯಮಂತ್ರಿಗಳು. ನರೇಂದ್ರ ಮೋದಿ ಅವರು 10 ವರ್ಷ ಪ್ರಧಾನಿಯಾಗಿ, ಅಟಲ್ ಬಿಹಾರಿ ವಾಜಪೇಯಿ ಅವರು 6 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. 30 ವರ್ಷಗಳ ನಂತರ ಈ ವಿಷಯ ಪ್ರಸ್ತಾಪಿಸಿದ್ದಾರೆ.ಕೆಲವು ಮುಸ್ಲಿಂ ಜಾತಿಗಳು ಒಬಿಸಿ ಪಟ್ಟಿಗೂ ಸೇರ್ಪಡೆಗೊಂಡಿದ್ದು, ಸ್ವತಃ ಪ್ರಧಾನಿಯೇ ಅದರ ಮನ್ನಣೆ ಪಡೆಯುತ್ತಿದ್ದಾರೆ’ ಎಂದರು.

ಏಪ್ರಿಲ್ 19ರಿಂದ ಪ್ರಧಾನಿಗೆ ಒಂದೇ ಒಂದು ಸಮಸ್ಯೆ ‘ದಕ್ಷಿಣ ಭಾರತ್ ಮೇ ಸಾಫ್, ಉತ್ತರ ಭಾರತ್ ಮೇ ಹಾಫ್(ದಕ್ಷಿಣದಲ್ಲಿ ಬಿಜೆಪಿ ಸ್ವಚ್ಛ, ಉತ್ತರದಲ್ಲಿ ಅರ್ಧ) ‘ ಎಂಬುದು ಅವರಿಗೆ ತಿಳಿದಿದೆ. ಸುಳ್ಳಿಗೆ ಉತ್ತರ ಮತಗಳ ಮೂಲಕವೇ ಸಿಗಲಿದೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next