Advertisement

ಕೇಂದ್ರದಿಂದಲೇ ಭದ್ರತಾ ಲೋಪವಾಗಿದೆ, ಪ್ರಧಾನಿಗಳೇ ಮಾರ್ಗಸೂಚಿಗಳನ್ನು ಪಾಲಿಸಿಲ್ಲ: ಖರ್ಗೆ

11:53 AM Jan 07, 2022 | Team Udayavani |

ಬೆಂಗಳೂರು: ಪಂಜಾಬ್ ಘಟನೆ ವಿಚಾರವಾಗಿ ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ, ಕೇಂದ್ರ ಸಚಿವರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

Advertisement

ಈ ಬಗ್ಗೆ ಕೂ ಮಾಡಿರುವ ಅವರು, ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ, ಕೇಂದ್ರ ಸಚಿವರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ದಲಿತ ನಾಯಕನ ನೇತೃತ್ವದ ಪಂಜಾಬ್ ಸರ್ಕಾರದ ಹೆಸರು ಕೆಡಿಸಿ, ಅವರನ್ನು ಇಳಿಸಲು ಬಿಜೆಪಿ ಈ ಕೆಲಸ ಮಾಡುತ್ತಿದೆ. ಭದ್ರತಾ ಲೋಪ ಕೇಂದ್ರ ಸರ್ಕಾರದಿಂದಲೇ ಆಗಿದೆ. ಪ್ರಧಾನಿಗಳೇ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ‌ ಮೋದಿಯೋ, ರಾಹುಲ್ ಗಾಂಧಿಯೋ ? : ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಏನಾಗಿತ್ತು: ದೆಹಲಿಯಿಂದ ಭಟಿಂಡಗೆ ವಿಮಾನದಲ್ಲಿ ಬಂದ ಪ್ರಧಾನಿ ಮೋದಿ ಅವರು, ಫಿರೋಜ್‌ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹೋಗಲು ಆಗಲಿಲ್ಲ.  ರಸ್ತೆ ಮಾರ್ಗದಲ್ಲಿ ತೆರಳುತ್ತಿದ್ದ ಪ್ರಧಾನಿ ಮೋದಿ ಅವರ ವಾಹನಕ್ಕೆ ಪ್ರತಿಭಟನಾಕಾರ ರೈತರು ತಡೆಹಾಕಿದರು. ರ್ಯಾಲಿ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ಫ್ಲೈಓವರ್‌ ಮೇಲೆ 20 ನಿಮಿಷಗಳ ಕಾಲ ಕಾದ ಮೋದಿ ಅವರು, ರ್ಯಾಲಿ ರದ್ದು ಪಡಿಸಿ ವಾಪಸ್‌ ತೆರಳಿದರು.

Koo App

Advertisement

ಪಂಜಾಬ್ ಘಟನೆ ವಿಚಾರವಾಗಿ ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ, ಕೇಂದ್ರ ಸಚಿವರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ದಲಿತ ನಾಯಕನ ನೇತೃತ್ವದ ಪಂಜಾಬ್ ಸರ್ಕಾರದ ಹೆಸರು ಕೆಡಿಸಿ, ಅವರನ್ನು ಇಳಿಸಲು ಬಿಜೆಪಿ ಈ ಕೆಲಸ ಮಾಡುತ್ತಿದೆ. ಭದ್ರತಾ ಲೋಪ ಕೇಂದ್ರ ಸರ್ಕಾರದಿಂದಲೇ ಆಗಿದೆ. ಪ್ರಧಾನಿಗಳೇ ಮಾರ್ಗಸೂಚಿಗಳನ್ನು ಪಾಲಿಸಿಲ್ಲ! – ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕರು

ಕರ್ನಾಟಕ ಕಾಂಗ್ರೆಸ್ (@inckarnataka) 7 Jan 2022

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next