Advertisement

ಕಾಪು: ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ‌ ಮೆಂಡನ್ ಚಾಲನೆ

03:32 PM Oct 25, 2021 | Team Udayavani |

ಕಾಪು: ಕೋವಿಡ್ 19 ಭಾದಿಸಿದ ಒಂದೂವರೆ ವರ್ಷಗಳ ಬಳಿಕ ಕಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಸರಕಾರ ಹಸಿರು ನಿಶಾನೆ ತೋರಿದ್ದು ಕಾಪು ತಾಲೂಕಿನ‌ ವಿವಿಧ ಶಾಲೆಗಳಲ್ಲಿ ಜನಪ್ರತಿನಿಧಿಗಳು, ಅಧ್ಯಾಪಕ ವೃಂದ, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

Advertisement

ಎಲ್ಲೆಡೆ ಎಳೆಯ ಉತ್ಸಾಹದಿಂದ ಆಗಮಿಸಿದ್ದು ಪೋಷಕರು ಕೂಡಾ ಮಕ್ಕಳನ್ನು ಸಂತೋಷದಿಂದ ಕರೆ ತರುತ್ತಿರುವುದು ಕಂಡು ಬಂದಿದೆ. ಶಾಲಾ  ಪ್ರಾರಂಭೋತ್ಸವದ  ಹಿನ್ನೆಲೆಯಲ್ಲಿ  ಚೆಂಡೆ, ವಾದ್ಯ, ಗೊಂಬೆ ಕುಣಿತಗಳಿಂದ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ  ಶಾಲೆ, ಪಡು ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಉಚ್ಚಿಲ ಸರಸ್ವತಿ ಮಂದಿರ ಶಾಲೆ, ಎರ್ಮಾಳು ತೆಂಕ ಸರಕಾರಿ ಶಾಲೆ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಸೇರಿದಂತೆ ವಿದ್ಯಾರ್ಥಿಗಳನ್ನು ಸಂಭ್ರಮ ಸಡಗರದೊಂದಿಗೆ ಸ್ವಾಗತಿಸಲಾಯಿತು.

ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಶಬರಿಮಲೆ ಅಯ್ಯಪ್ಪ ಸಮಾಜ (ಸಾಸ್) ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ” ಒಂದರಿಂದ ಐದನೇ ತರಗತಿಯ ಮಕ್ಕಳನ್ನು ಶಾಲೆಗೆ ಸ್ವಾಗತಿಸುವ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಜಗತ್ತಿನಾದ್ಯಂತ ಭಾದಿಸಿದ ಕೊರೊನಾ ನಮ್ಮ‌ ದೇಶ ಮತ್ತು ರಾಜ್ಯದಲ್ಲೂ ಸಂಕಷ್ಟ ವನ್ನು ಉಂಟು ಮಾಡಿದ್ದು, ಸರಕಾರ ವಿಶೇಷ ಮುತುವರ್ಜಿ ವಹಿಸಿ ಶತ ಕೋಟಿ ಜನರಿಗೆ ವ್ಯಾಕ್ಸಿನೇಷನ್‌ ಒದಗಿಸುವ ಮೂಲಕ ಹೆಚ್ಚಿನ ಜೀವ ಹಾನಿಯನ್ನು ತಪ್ಪಿಸಿದೆ. ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಬಗ್ಗೆ ಸರಕಾರ‌ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು ಅದುವರೆಗೆ ನಮ್ಮ‌ ಬಗ್ಗೆ ನಾವೇ ಜಾಗರೂಕತೆ ವಹಿಸಬೇಕಿದೆ ಎಂದರು.‌

ಕಾಪು ಪುರಸಭೆಯ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾಪು ಎಎಸ್ಐ ಜಯಪ್ರಕಾಶ್, ಶಬರಿಮಲೆ ಅಯ್ಯಪ್ಪ ಸಮಾಜ ಸೇವಾ ಸಮಾಜ ( ಸಾಸ್ ) ಯ  ಜಿಲ್ಲಾ ಉಪಾಧ್ಯಕ್ಷ ಸುಂದರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ, ತಾಲೂಕು ಪದಾಧಿಕಾರಿಗಳಾದ ರಘುರಾಮ ಶೆಟ್ಟಿ, ದಿವಾಕರ್ ಶೆಟ್ಟಿ, ಜಿತೇಶ್ ಶೆಟ್ಟಿ, ನಾಗೇಶ್ ಕೆ., ಮುಖ್ಯ ಶಿಕ್ಷಕಿ ರಜನಿ ಕುಮಾರಿ, ಪ್ರಮುಖರಾದ ಹರೀಶ್ ನಾಯಕ್, ಕೃಷ್ಣ ಆಚಾರ್ಯ, ಗಿರೀಶ್ ಪಾತ್ರಿ, ನಾರಾಯಣ ಶೆಟ್ಟಿ ಕಾಪು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next