Advertisement
ಎಲ್ಲೆಡೆ ಎಳೆಯ ಉತ್ಸಾಹದಿಂದ ಆಗಮಿಸಿದ್ದು ಪೋಷಕರು ಕೂಡಾ ಮಕ್ಕಳನ್ನು ಸಂತೋಷದಿಂದ ಕರೆ ತರುತ್ತಿರುವುದು ಕಂಡು ಬಂದಿದೆ. ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಚೆಂಡೆ, ವಾದ್ಯ, ಗೊಂಬೆ ಕುಣಿತಗಳಿಂದ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
Related Articles
Advertisement
ಬಳಿಕ ಮಾತನಾಡಿದ ಅವರು, ಜಗತ್ತಿನಾದ್ಯಂತ ಭಾದಿಸಿದ ಕೊರೊನಾ ನಮ್ಮ ದೇಶ ಮತ್ತು ರಾಜ್ಯದಲ್ಲೂ ಸಂಕಷ್ಟ ವನ್ನು ಉಂಟು ಮಾಡಿದ್ದು, ಸರಕಾರ ವಿಶೇಷ ಮುತುವರ್ಜಿ ವಹಿಸಿ ಶತ ಕೋಟಿ ಜನರಿಗೆ ವ್ಯಾಕ್ಸಿನೇಷನ್ ಒದಗಿಸುವ ಮೂಲಕ ಹೆಚ್ಚಿನ ಜೀವ ಹಾನಿಯನ್ನು ತಪ್ಪಿಸಿದೆ. ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಬಗ್ಗೆ ಸರಕಾರ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು ಅದುವರೆಗೆ ನಮ್ಮ ಬಗ್ಗೆ ನಾವೇ ಜಾಗರೂಕತೆ ವಹಿಸಬೇಕಿದೆ ಎಂದರು.
ಕಾಪು ಪುರಸಭೆಯ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾಪು ಎಎಸ್ಐ ಜಯಪ್ರಕಾಶ್, ಶಬರಿಮಲೆ ಅಯ್ಯಪ್ಪ ಸಮಾಜ ಸೇವಾ ಸಮಾಜ ( ಸಾಸ್ ) ಯ ಜಿಲ್ಲಾ ಉಪಾಧ್ಯಕ್ಷ ಸುಂದರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ, ತಾಲೂಕು ಪದಾಧಿಕಾರಿಗಳಾದ ರಘುರಾಮ ಶೆಟ್ಟಿ, ದಿವಾಕರ್ ಶೆಟ್ಟಿ, ಜಿತೇಶ್ ಶೆಟ್ಟಿ, ನಾಗೇಶ್ ಕೆ., ಮುಖ್ಯ ಶಿಕ್ಷಕಿ ರಜನಿ ಕುಮಾರಿ, ಪ್ರಮುಖರಾದ ಹರೀಶ್ ನಾಯಕ್, ಕೃಷ್ಣ ಆಚಾರ್ಯ, ಗಿರೀಶ್ ಪಾತ್ರಿ, ನಾರಾಯಣ ಶೆಟ್ಟಿ ಕಾಪು ಮೊದಲಾದವರು ಉಪಸ್ಥಿತರಿದ್ದರು.