Advertisement
ಉಲ್ಲಾಳ ನಿವಾಸಿ ಮಹಾಲಿಂಗೇಶ್ (45) ಬಂಧಿತ. ಉಲ್ಲಾಳ ಬಳಿಯ ಮುದ್ದಯ್ಯನಪಾಳ್ಯದಲ್ಲಿರುವ ಸ್ವಂತ ನಿವೇಶನದಲ್ಲಿ ರುದ್ರಮುನೇಶ್ವರ ದೇವಾಲಯ ನಿರ್ಮಿಸಿ ಅರ್ಚಕನಾಗಿರುವ ಮಹಾಲಿಂಗೇಶ್ ಸ್ವಾಮೀಜಿ ಹೇಳಿದರು ಎಂಬ ಕಾರಣಕ್ಕೆ ಕುಂಭ ರಾಶಿಯಲ್ಲಿ ಹುಟ್ಟಿದ ಪತ್ನಿ ಸವಿತಾರನ್ನು ಬಲಿಕೊಟ್ಟು ನಿಧಿ ಪಡೆಯುವ ತವಕದಲ್ಲಿದ್ದ. ಈ ಕುರಿತು ಪತ್ನಿ ನೀಡಿದ ದೂರಿನ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ. ಈತ ತನ್ನ ಅಪ್ರಾಪೆ¤ ಪುತ್ರಿಗೂ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಪತ್ನಿ, ಮಕ್ಕಳಿಂದ ನಗ್ನ ಪೂಜೆ ಮಾಡಿಸುತ್ತಿದ್ದ: ಸ್ವಾಮೀಜಿ ಮಾತಿನಂತೆ ಐದು ವರ್ಷಗಳ ಹಿಂದೆ ದೇವಾಲಯದ ಆವರಣದಲ್ಲಿ ಗುಂಡಿ ತೆಗೆಸಿದ್ದ ಆತ ಪ್ರತಿನಿತ್ಯ ನಸುಕಿನಲ್ಲಿ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ನಸುಕಿನಲ್ಲಿ ದೇವಾಲಯಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ತಾನೂ ಬೆತ್ತಲಾಗಿ ಗುಂಡಿಗೆ ಪೂಜಿ ಸಲ್ಲಿಸುತ್ತಿದ್ದ. ಅಲ್ಲದೆ, ತಾನು ತೋಡಿದ ಗುಂಡಿಯಲ್ಲಿ ದಿನದ 24 ಗಂಟೆಗಳ ಕಾಲ ದೀಪ ಉರಿಯುವಂತೆ ವ್ಯವಸ್ಥೆ ಮಾಡಿದ್ದು, ಬೆಳಗ್ಗೆ ಮತ್ತು ಸಂಜೆ ಕೆಂಪು ಅನ್ನದಿಂದ ನೈವೇದ್ಯ ಮಾಡುತ್ತಿದ್ದ.
Advertisement
ಅಲ್ಲದೆ, ನಿಧಿ ಪಡೆಯಲು ಸಹಕರಿಸು ಎಂದು ಪತ್ನಿ, ಮಕ್ಕಳಿಗೆ ಮದ್ಯ ಹಾಗೂ ತಂಬಾಕು ಸೇವಿಸುವಂತೆ ಪೀಡಿಸುತ್ತಿದ್ದ. ಒಪ್ಪದಿದ್ದಾಗ ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ಸಿಗರೇಟಿನಿಂದ ಸುಟ್ಟಿದ್ದಾನೆ ಎಂದು ಸವಿತಾ ಮಹಿಳಾ ಆಯೋಗಕ್ಕೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾಳೆ.
ಆರೋಪಿ ಮಹಾಲಿಂಗೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದು, ನಿಧಿಗಾಗಿ ಪತ್ನಿಯನ್ನು ಬಲಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದ ಬಗ್ಗೆ ದಾಖಲೆಗಳು ಸಿಕ್ಕಿಲ್ಲ. ಆದರೆ, ಪುತ್ರಿ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಪುತ್ರಿಯ ಮೇಲೇ ಲೈಂಗಿಕ ದೌರ್ಜನ್ಯ ಆರಂಭದಲ್ಲಿ ಪತ್ನಿ ಸವಿತಾ ಪತಿಯ ವಿಕೃತ ಕೆಲಸಕ್ಕೆ ಒಪ್ಪದಿದ್ದಾಗ ಮೊದಲ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದರಿಂದ ಬೇಸತ್ತ ಆಕೆ ಮೊದಲ ಪುತ್ರಿಯನ್ನು ಮೂಡಬಿದರೆಯ ಆಳ್ವಾಸ್ ಕಾಲೇಜಿಗೆ ಸೇರಿಸಿದ್ದರು. ಆದರೂ, ಆಕೆಯನ್ನು ಬಲವಂತವಾಗಿ ಕರೆಸಿಕೊಂಡು ದೌರ್ಜನ್ಯವೆಸಗುತ್ತಿದ್ದ. ಅಲ್ಲದೆ,ತಾಯಿ ಬಲಿ ಕೊಡಲು ನಿರ್ಧರಿಸಿದ್ದು, ಯಾರಾದರೂ ಕೇಳಿದರೆ, ತಾಯಿಗೆ ಅಕ್ರಮ ಸಂಬಂಧವಿದ್ದು, ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆಂದು ಹೇಳಬೇಕು. ನಿಮ್ಮ ತಾಯಿಯನ್ನು ಬಲಿ ಕೊಟ್ಟ ನಂತರ ಆಕೆಯ ಸಹೋದರಿಯನ್ನು ಮದುವೆಯಾಗುತ್ತೇನೆ. ಇದಕ್ಕೆ ನೀವು ಸಹಕರಿಸದಿದ್ದಲ್ಲಿ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಮಕ್ಕಳನ್ನು ಹೆದರಿಸಿದ್ದ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಇತ್ತೀಚೆಗೆ ಪತಿ ಬಲಿ ಕೊಡಲು ಸಿದ್ಧತೆ ತೀವ್ರಗೊಳಿಸಿದ್ದರಿಂದ ಆತಂಕಗೊಂಡ ಸವಿತಾ ಮಹಿಳಾ ಆಯೋಗಕ್ಕೆ ಪತಿಯ ವಿರುದ್ಧ ದೂರು ನೀಡಿದ್ದರು. ಗಂಡು ಮಗುವಿಗೆ ಜನ್ಮ ನೀಡಲು ಸಾಮರ್ಥಯವಿಲ್ಲದ ನೀನ್ನನ್ನು ನಿಧಿಗಾಗಿ ಬಲಿ ಕೊಟ್ಟು ನೀನ್ನ ಸಹೋದರಿಯನ್ನು ಮದುವೆಯಾಗುತ್ತೇನೆ. ಅಲ್ಲದೆ, ಗಂಡು ಮಗುವಿಗಾಗಿ ನಾನೇ ನನ್ನ ಪತಿಗೆ ಮತ್ತೂಂದು ಮದುವೆ ಮಾಡಿಸಲು ಸಿದ್ಧನಾಗಿದ್ದೇನೆ ಎಂದು ಸಮಾಜದಲ್ಲಿ ಹೇಳಿಕೊಂಡು ಬರಬೇಕು ಎಂದು ಪೀಡಿಸಿರುವುದಾಗಿಯೂ ಸವಿತಾ ದೂರಿನಲ್ಲಿ ಆರೋಪಿಸಿದ್ದಾರೆ.