Advertisement

ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ

05:19 PM Aug 16, 2022 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ಪಂಪಾಸರೋವರದ ಅರ್ಚಕ ರಾಮಾದಾಸ ಬಾಬಾ (95) ಇವರು ಮಂಗಳವಾರ ಮಧ್ಯಾಹ್ನ 3.53ಕ್ಕೆ ವಿಧಿವಶರಾಗಿದ್ದಾರೆ .

Advertisement

5 ದಶಕಗಳ ಕಾಲ ಪಂಪಾಸರೋವರದ ವಿಜಯಲಕ್ಷ್ಮಿ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾಗಿ ರಾಮದಾಸ ಬಾಬಾ ಅವರು ಧಾರ್ಮಿಕ ಕಾರ್ಯಗಳನ್ನು ನಿತ್ಯವೂ ಕೈಗೊಳ್ಳುತ್ತಿದ್ದರು. ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ತ್ರಿಕಾಲ ಪೂಜೆ ಮೂಲಕ ವಿಜಯಲಕ್ಷ್ಮಿಯ ಆರಾಧನೆ ಮಾಡುತ್ತಿದ್ದರು.

ಉತ್ತರ ಭಾರತದ ರಾಮದಾಸ ಬಾಬಾ ಅವರು  ಯವ್ವನಾವಸ್ಥೆಯಲ್ಲಿ ಪಂಪಾಸರೋವರಕ್ಕೆ ಆಗಮಿಸಿ ಹಿಂದಿನ ಅರ್ಚಕ ಭುಜಂಗ ದಾಸ ಅವರ ಮೂಲಕ ದೀಕ್ಷೆ ಪಡೆದರು ಆನೆಗುಂದಿಯ ರಾಜ ಮನೆತನದ ಹಿರಿಯರು ಮತ್ತು ಪಂಪಾಸರೋವರ ವಿಜಯಲಕ್ಷ್ಮಿ ದೇವಸ್ಥಾನದ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ತಿರುಮಲದೇವರಾಯ ಅವರ ಅಧ್ಯಕ್ಷತೆಯಲ್ಲಿ ಐವತ್ತು ವರ್ಷಗಳ ಹಿಂದೆ ರಾಮದಾಸ ಬಾಬಾ ಅವರಿಗೆ ಪಂಪಾಸರೋವರದ ಅರ್ಚಕ ಸಾನದ ದೀಕ್ಷೆ ನೀಡಲಾಗಿತ್ತು .ಪ್ರತಿ ವರ್ಷ ದಸರಾ ಸೇರಿದಂತೆ ವಿವಿಧ ವಿಶೇಷ ಸಂದರ್ಭಗಳಲ್ಲಿ ರಾಮದಾಸ ಬಾಬಾ ಅವರು ಪಂಪಾಸರೋವರ ವಿಜಯಲಕ್ಷ್ಮಿ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತರ ಭಾರತದ ಸಾಧು ಸಂತರನ್ನು ಆಹ್ವಾನಿಸಿ ಹೋಮ ಹವನಗಳನ್ನು ನಡೆಸುತ್ತಿದ್ದರು.

ರಾಮದಾಸ ಬಾಬಾ ಅವರ ಅವಧಿಯಲ್ಲಿ ಪಂಪಾಸರೋವರದ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ.ಮೊದಲಿನಿಂದಲೂ ಆನೆಗೊಂದಿ ರಾಜಮನೆತನದವರು ಪಂಪಾ ಸರೋವರ ಅಂಜನಾದ್ರಿ ಬೆಟ್ಟ ಸೇರಿದಂತೆ ಈ ಭಾಗದ ಹಲವು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ದಾಸೋಹ ಇತ್ಯಾದಿ ಕಾರ್ಯಗಳಿಗಾಗಿ ನೆರವು ನೀಡುತ್ತಿದ್ದರು ಜೊತೆಗೆ ಪ್ರತಿನಿತ್ಯವೂ ದೇವರ ಅರ್ಚನೆ ಪೂಜೆ ಗಾಗಿಯೇ ವಿಶೇಷವಾಗಿ ಹಣ ಸಹಾಯ ಮಾಡುತ್ತಿದ್ದರು .ಇದೀಗ ಪಂಪಾಸರೋವರ ಸರ್ಕಾರದ ವಶದಲ್ಲಿದ್ದು ರಾಮದಾಸ ಬಾಬಾ ಅವರು ನಿತ್ಯವೂ  ತ್ರಿವಿಧಪೂಜೆ ಮಾಡುತ್ತಿದ್ದರು. ನಿಧನರಾದ ರಾಮದಾಸ ಬಾಬಾ ಅವರ ಅಂತಿಮ ವಿಧಿ ವಿಧಾನಗಳನ್ನು ಸಾಧುಸಂತರ ಪದ್ದತಿಯಂತೆ ಬುಧುವಾರ ಪಂಪಾಸರೋವರದ ನೆರವೇರಿಸಲಾಗುತ್ತದೆ.

ಈಗಾಗಲೇ ದೇವಸ್ಥಾನದ ಮುಖ್ಯಾಧಿಕಾರಿಯಾಗಿರುವ ತಹಸಿಲ್ದಾರ್ ಅವರಿಗೆ ಮಾಹಿತಿ ನೀಡಲಾಗಿದೆ ಸುತ್ತಮುತ್ತಲಿನ ಭಕ್ತರು ರಾಮದಾಸ ಬಾಬಾ ಅವರ ಅಂತಿಮ ದರ್ಶನ ಪಡೆಯಲು  ವ್ಯವಸ್ಥೆ ಕೈಗೊಳ್ಳಲಾಗುವುದು  ಎಂದು ಆನೆಗುಂದಿ ರಾಜಮನೆತನದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಉದಯವಾಣಿಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next