Advertisement

ಗ್ಯಾಸ್‌ ಸಿಲಿಂಡರ್‌ 25 ರೂ. ದುಬಾರಿ

12:38 AM Sep 02, 2021 | Team Udayavani |

ಹೊಸದಿಲ್ಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಗಗನಮುಖೀಯಾಗಿರುವಂತೆಯೇ  ಅಡುಗೆ ಅನಿಲ ಸಿಲಿಂಡರ್‌ ದರವನ್ನೂ 25 ರೂ. ಏರಿಸಲಾಗಿದೆ. ಕಳೆದ 15 ದಿನಗಳಲ್ಲಿ ಒಟ್ಟು 50 ರೂ. ಏರಿಕೆ ಆದಂತಾಗಿದೆ.

Advertisement

ಆ. 17ರಂದು ತೈಲ ಮಾರುಕಟ್ಟೆ ಕಂಪೆನಿಗಳು 25 ರೂ. ಹೆಚ್ಚಿಸಿದ್ದವು. ಜುಲೈಯಲ್ಲೂ 25.50 ರೂ.  ಏರಿಸಲಾಗಿತ್ತು. 3 ತಿಂಗಳಲ್ಲಿ ಒಟ್ಟಾರೆಯಾಗಿ 75 ರೂ. ಹೆಚ್ಚಾಗಿದೆ. ಕೇವಲ 14.2 ಕೆಜಿಯಷ್ಟೇ ಅಲ್ಲ, ವಾಣಿಜ್ಯ ಬಳಕೆಗಾಗಿ ಉಪಯೋಗಿಸುವ 19 ಕೆಜಿ ಸಿಲಿಂಡರ್‌ ದರವನ್ನೂ 75 ರೂ. ಹೆಚ್ಚಿಸಲಾಗಿದೆ.

ದರ ಹೆಚ್ಚಳಕ್ಕೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಿಡಿಪಿ ಎಂದರೆ ಕೇಂದ್ರದ ಪಾಲಿಗೆ ಗ್ಯಾಸ್‌, ಡೀಸೆಲ್‌, ಪೆಟ್ರೋಲ್‌ ದರ ಏರಿಸುವುದು ಎಂದರ್ಥ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next