Advertisement
ಇಪ್ಪತ್ತು ದಿನಗಳ ಹಿಂದೆ ಹಸಿಕೊಕ್ಕೊ ದರ 90 ರೂ. ಆಸುಪಾಸಿನಲ್ಲಿತ್ತು. ಬಳಿಕ ಏರುಮುಖದಲ್ಲೇ ಸಾಗಿದ್ದು, ಡಿ. 7ರಂದು ಏಕಾಏಕಿ ಕೆ.ಜಿ.ಗೆ 20 ರೂ. ಏರಿಕೆ ಕಂಡು 170 ರೂ.ದಾಖಲಿಸಿದೆ. ಹೊರ ಮಾರುಕಟ್ಟೆಯಲ್ಲಿ 175 ರೂ. ತನಕವೂ ಬೇಡಿಕೆ ಕಂಡು ಬಂದಿದೆ.
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಒಣ ಕೊಕ್ಕೊ ಧಾರಣೆ ಡಿ.6ರ ತನಕ 550 ರೂ. ಇತ್ತು. ಡಿ.7ರಂದು ಕೆ.ಜಿ.ಗೆ 50 ರೂ.ಯಂತೆ ಹೆಚ್ಚಳವಾಗಿ 600 ರೂ.ಗೆ ತಲುಪಿದೆ. ಹೊರ ಮಾರುಕಟ್ಟೆಯಲ್ಲಿ 650 ರೂ. ತನಕವೂ ಬೇಡಿಕೆ ಇದೆ. ಸಿಂಗಲ್ ಚೋಲ್ ನೆಗೆತ
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಧಾರಣೆ ಮತ್ತೆ 10 ರೂ.ನಷ್ಟು ಏರಿಕೆ ಕಂಡಿದೆ. ನ.27ರಂದು ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಕೆ.ಜಿ.ಗೆ 447 ರೂ., ಡಿ.5ರಂದು 458 ರೂ., ಡಿ.7ರಂದು 462 ರೂ.ಗೆ ಏರಿಕೆ ಕಂಡಿದೆ. ನ.27ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 435 ರೂ., ಡಿ.5ಕ್ಕೆ 440 ರೂ. ಇದ್ದ ಧಾರಣೆ ಡಿ.7ರಂದು 450 ರೂ.ಗೆ ಏರಿಕೆ ಕಂಡಿದೆ.