ಹುನಗುಂದ: ಟೊಮ್ಯಾಟೊ ಬೆಲೆ ಕುಸಿತ ಕಂಡಿದ್ದು ರೈತ ಕಂಗಾಲಾಗಿದ್ದಾನೆ.ಮಾರುಕಟ್ಟೆಯಲ್ಲಿ ಅಗ್ಗದ ದರಕೇಳುತ್ತಿರುವುದನ್ನು ಕಂಡ ಪಟ್ಟಣದರೈತನೊಬ್ಬ ತಾನು ಬೆಳೆದ 400 ಕೆಜಿಗೂ ಅಧಿಕ ಟೊಮ್ಯಾಟೋ ರಸ್ತೆಗೆ ಸುರಿದುಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದ್ದಲಗಿ ಗ್ರಾಮದ ರೈತ ಪರಶುರಾಮ ಸಂಗಪ್ಪ ರತ್ನಾಕರಒಂದು ಎಕರೆ ಜಮೀನಿನಲ್ಲಿ 30ರಿಂದ 35 ಸಾವಿರ ಖರ್ಚು ಮಾಡಿಟೊಮ್ಯಾಟೋ ಬೆಳೆದಿದ್ದ. ಉತ್ತಮಫಸಲು ಕೂಡಾ ಬಂದಿತ್ತು. ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಂಗಳವಾರ ಮಾರುಕಟ್ಟೆಯಲ್ಲಿ25ರಿಂದ 30 ಕೆ.ಜಿ ಹೊಂದಿದ 1ಬುಟ್ಟಿಗೆ ಕೇವಲ ಐದೇ ರೂ. ದರ ಕೇಳಿ ಕಂಗಾಲಾಗುವಂತಾಗಿದೆ. ಗ್ರಾಮದಿಂದ ಪಟ್ಟಣದ ಮಾರುಕಟ್ಟೆಗೆ ತರಲು ಕಷ್ಟಅನುಭವಿಸಿದ್ದೇನೆ. ಟೊಮ್ಯಾಟೋತಂದ ಟಂಟಂ ಬಾಡಿಗೆ ಬಂದರೆಕೊಡಬೇಕೆಂದರೆ ಅದು ಬರಲಿಲ್ಲ.
ಚಿಲ್ಲರೆ ಕಾಸಿಗೆ ದಲ್ಲಾಳಿಗಳಿಗೆ ಕೊಟ್ಟುಹೋಗುವುದಕ್ಕಿಂತ ರಸ್ತೆಗೆ ಸುರಿದರೆಯಾರಾದರೂ ತೆಗೆದುಕೊಂಡು ಹೋಗಲಿ ಎಂದು ಟೊಮ್ಯಾಟೊಪಟ್ಟಣದ ವಿಜಯ ಮಹಾಂತೇಶವೃತ್ತದಲ್ಲಿ ಸುರಿದು ಕಣ್ಣೀರು ಸುರಿಸಿದ್ದಾನೆ.
ಕಳೆದ ತಿಂಗಳಿದ್ದ ಬೆಲೆ ಈಗಿಲ್ಲ: ಕಳೆದ ಫೆಬ್ರವರಿಯಲ್ಲಿ ಒಂದುಬುಟ್ಟಿ ಟೊಮ್ಯಾಟೊ 150 ರಿಂದ250 ರೂ. ಮಾರಾಟವಾಗುತ್ತಿತ್ತು.ಆದರೆ ಸದ್ಯ ಮಾರುಕಟ್ಟೆಯಲ್ಲಿಟೊಮ್ಯಾಟೊ ಕೇಳ್ಳೋರಿಲ್ಲದಂತಾಗಿದೆ.ಮಾರುಕಟ್ಟೆಯಲ್ಲಿ ವ್ಯಾಪಾರಿಗಳುಒಂದು ಕೆಜಿ ಟೊಮ್ಯಾಟೊಗೆ 20ರಿಂದ30 ರೂ.ಗೆ ಮಾರಾಟ ಮಾಡುತ್ತಿದ್ದರೆಸವಾಲಿನಲ್ಲಿ ದಲ್ಲಾಳಿಗಳು ರೈತರಿಂದಕೇವಲ 5ರಿಂದ 10ರೂ.ಗೆ ಒಂದು ಬುಟ್ಟಿಟೊಮ್ಯಾಟೊ ಕೇಳುತ್ತಿದ್ದಾರೆ ಎನ್ನುತ್ತಾನೆಟೊಮ್ಯಾಟೊ ಬೆಳೆಗಾರ. ಒಂದೆಡೆಅನ್ನದಾತ ಬೆಳೆಗೆ ಲಾಭ ಸಿಗಲಿಲ್ಲ ಎಂದು ಹತಾಶದಿಂದ ಟೊಮ್ಯಾಟೊ ರಸ್ತೆಯ ಮೇಲೆ ಸುರಿದಿದ್ದೇ ತಡ ಜನರುಹತ್ತೇ ನಿಮಿಷದಲ್ಲಿ ಬಾಚಿ ಬಳಿದುಚೀಲ, ಪುಟ್ಟಿ, ಬ್ಯಾಗ್ ತುಂಬಿಕೊಂಡುಹೋದರು. ಇನ್ನೊಂದೆಡೆ ರೈತ ಖಾಲಿಬುಟ್ಟಿ ಹಿಡಿದು ಬರಿಗೈಯಲ್ಲಿ ಮನೆಯತ್ತ ಮುಖ ಮಾಡಿದನು.
ಟೊಮ್ಯಾಟೊ ಬೆಳೆಗೆ ಬಾರಿ ಲಾಭ ಸಿಗುತ್ತದೆ ಎಂದು ಒಂದು ಎಕರೆಯಲ್ಲಿ ಬೆಳೆದ ಬೆಳೆ ಸರಿಯಾದ ಬೆಲೆಯೂ ಸಿಗದೇ ನಾಟಿ ಮಾಡಿ ಖರ್ಚು ಮಾಡಿದಷ್ಟು ಹಣ ಬರಲಿಲ್ಲ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೇಳುತ್ತಿಲ್ಲ.ಕೇಳಿದರೂ ಅಗ್ಗದ ದರಕ್ಕೆ ಕೇಳುತ್ತಿದ್ದು, ಇದನ್ನೇ ನಂಬಿದ ರೈತರು ಕುಟುಂಬನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಇದನ್ನು ಗಮನಿಸಿ ಟೊಮ್ಯಾಟೊ ಬೆಳೆಗೆ ಕನಿಷ್ಠಬೆಲೆ ನಿಗದಿಗೊಳಿಸಬೇಕು. –
ಪರಶುರಾಮ ರತ್ನಾಕರ, ಇದ್ದಲಗಿ ಟೊಮ್ಯಾಟೊ ಬೆಳೆಗಾರ