Advertisement

ದೊಡ್ಡಬಳ್ಳಾಪುರ: ಆಯುಧಪೂಜೆ – ದಸರಾದಲ್ಲಿ ಪ್ರಮುಖವಾಗಿ ಉಪಯೋಗಿಸುವ ಬೂದು ಕುಂಬಳ ಕಾಯಿ ಹಬ್ಬ ಮುಗಿಯುತ್ತಿದ್ದಂತೆ ಯಾರಿಗೂ ಬೇಡವಾಗಿ ರಸ್ತೆ ಬದಿಗೆ ಹಾಗೂ ಹಳ್ಳಗಳಲ್ಲಿ ಬೀಳುತ್ತಿವೆ.

Advertisement

ದಸರೆ ಆರಂಭಕ್ಕೂ ಒಂದು ವಾರ ಮೊದಲೇ ಒಂದು ಕೆ.ಜಿ.ಗೆ 18ರಿಂದ 20 ರೂ.ಗಳ ವರೆಗೂ ಮಾರಾಟವಾಯಿತು. ಒಂದು ಬೂದುಗುಂಬಳ 4ರಿಂದ 7 ಕೆ.ಜಿ ತೂಗುತ್ತಿತ್ತು. ಆದರೆ ಹಬ್ಬ ಮುಕ್ತಾಯವಾದ ಅನಂತರ ಕೊಳ್ಳುವವರಿಲ್ಲದೇ ನಗರದ ಸುತ್ತಮುತ್ತಲಿನ ರಸ್ತೆ ಬದಿಯಲ್ಲಿ ರಾಶಿಗಟ್ಟಲೇ ಕಾಯಿಗಳನ್ನು ರೈತರು ಸುರಿದು ಹೋಗಿರುವ ದೃಶ್ಯ ಸಾಮಾನ್ಯವಾಗಿದೆ.

ದೊಡ್ಡಬಳ್ಳಾಪುರ ಗೌರಿ ಬಿದನೂರು ರಸ್ತೆ, ಚಿಕ್ಕಬಳ್ಳಾಪುರ ರಸ್ತೆಗಳಲ್ಲಿ ಹೆಚ್ಚಿನ ಬೂದುಗುಂಬಳ ರಾಶಿ ಕಂಡುಬರುತ್ತಿವೆ. ಬೆಲೆ ಇಲ್ಲದ ಸಮಯದಲ್ಲಿ ಟೊಮೊಟೋ ಹಣ್ಣು ಸುರಿಯುವಂತೆ ಈಗ ಬೂದುಗುಂಬಳ ಕಾಯಿಗಳನ್ನು ಸುರಿಯುವ ಸ್ಥಿತಿ ಬಂದಿದೆ. ಸಾಮಾನ್ಯವಾಗಿ ಬೂದುಗುಂಬಳವನ್ನು, ಮಜ್ಜಿಗೆ ಹುಳಿ, ಕಾಶಿ ಹಲ್ವ ಮೊದಲಾಗಿ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ.

ಕೆಲವು ಸಮುದಾಯಗಳಲ್ಲಿ ಮಾತ್ರ ಸಾಂಬಾರಿಗೆ ಬಳಸುತ್ತಾರೆ. ಈ ವೇಳೆ ಮಾರುಕಟ್ಟೆಗೆ ತಕ್ಕ ಮಟ್ಟಿಗೆ ಕಾಯಿಗಳು ಬಂದರೆ ಬೆಲೆ ಸ್ಥಿರವಾಗಿದ್ದು, ಮಾರಾಟ ಸಹಜವಾಗಿರುತ್ತದೆ. ಆಯುಧ ಪೂಜೆ ಹೊರತು ಇತರ ಸಮಯದಲ್ಲಿ ಸಾಮಾನ್ಯವಾಗಿ ಬೂದುಗುಂಬಳಕ್ಕೆ ಬೇಡಿಕೆ ಕಡಿಮೆ. ಹಬ್ಬದ ಸಮಯದ ಒಂದು ವಾರದ ವ್ಯಾಪಾರವನ್ನು ನಂಬಿ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಬೂದುಕುಂಬಳ ಬೆಳೆದಿರುವ ಪರಿಣಾಮ ಇಂದು ಬೀದಿಗೆ ಸುರಿಯುವಂತಾಗಿದೆ ಎಂದು ರೈತ ಹನುಮೇಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next