Advertisement

ಬೆಲೆ ಕುಸಿತ; ಚೆಂಡು ಹೂ ಬೆಳೆಗಾರರಲ್ಲಿ ಆತಂಕ

11:10 AM Oct 15, 2021 | Team Udayavani |

ದೇವದುರ್ಗ: ಚೆಂಡು ಹೂವಿಗೆ ಏಕಾಏಕಿ ಬೆಲೆ ಕುಸಿದ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದ ಅನ್ನದಾತರೀಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

Advertisement

ಸತತ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗೆ ಕೊಳೆ ರೋಗಬಾಧೆ ಕಾಡುತ್ತಿದೆ. ದಸರಾ, ದೀಪಾವಳಿ ಸೀಸನ್‌ನಲ್ಲಿ ಬೆಳೆಗೆ ರೋಗ ಕಾಡುತ್ತಿರುವುದರಿಂದ ಮಾಡಿದ ಖರ್ಚು ಕೂಡ ಬಾರದ ಸ್ಥಿತಿ ಎದುರಾಗಿದೆ. ಆದರೀಗ ಪ್ರತಿ ಕೆ.ಜಿಗೆ 40-50 ರೂ. ದರಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಹಬ್ಬ-ಹರಿದಿನ, ಕಾರ್ಯಕ್ರಮ, ಸಮಾರಂಭಗಳು ನಡೆಯದ್ದರಿಂದ ಕೆ.ಜಿಗೆ 150 ರೂ. ಅಧಿಕ ದಾಟಿದ ಬೆಲೆ ಸೋಂಕಿನ ಪ್ರಕರಣ ತಗ್ಗಿದ ಹಿನ್ನೆಲೆ ಈ ಬಾರಿ ಚೆಂಡು ಹೂವಿಗೆ ಬೆಲೆ ಕುಸಿದಿದೆ.

ಜಾಲಹಳ್ಳಿ, ಬುಂಕಲದೊಡ್ಡಿ, ಕೋತಿಗುಡ್ಡ, ಅರಕೇರಾ, ಕೊಪ್ಪರ ಸೇರಿ ಇತರೆ ಗ್ರಾಮಗಳಲ್ಲಿ ರೈತರು ಚೆಂಡು ಹೂ ಬೆಳೆದಿದ್ದಾರೆ. ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದ ಕೊಳೆ ರೋಗಬಾಧೆ ಆವರಿಸಿದೆ. ಮಾರುಕಟ್ಟೆಯಲ್ಲಿ ಚೆಂಡು ಹೂ ಬೆಲೆ ಕುಸಿತ ಹಿನ್ನೆಲೆಯಲ್ಲಿ ದಸರಾ ಹಬ್ಬದ ಮೊದಲೇ ಬೆಳೆಗಾರರಿಗೆ ನಿರಾಸೆ ತಂದಿದೆ.

ಕಳೆದ ದಸರಾ-ದೀಪಾವಳಿ ಸಂದರ್ಭದಲ್ಲಿ ಚೆಂಡು ಹೂ ಪ್ರತಿ ಕೆ.ಜಿಗೆ 150-200 ರೂ.ವರೆಗೆ ಮಾರಾಟವಾಗಿತ್ತು. ಆದರೀಗ ರೋಗದ ಭೀತಿಯಿಂದ ಬೆಳೆಗಾರರ ಮನಸ್ಥಿತಿ ಕಮರಿ ಹೋಗಿದೆ. ತೋಟಗಾರಿಗೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟದ ವರದಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಚೆಂಡು ಹೂ ಬೆಳೆಗಾರರ ಬ್ಯಾಂಕ್‌ ಖಾತೆ ಪರಿಹಾರದ ಹಣ ಜಮಾ ಮಾಡುವ ಭರವಸೆ ಈಡೇರಿಲ್ಲ. ಕಳೆದ ವರ್ಷ ನಷ್ಟ ಅನುಭವಿಸಿದ ಹಲವು ರೈತರು ಪರಿಹಾರಕ್ಕಾಗಿ ಇನ್ನೂ ತಾಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಸೋಂಕಿನ ಪ್ರಮಾಣ ತಗ್ಗಿದ್ದರೂ ಚೆಂಡು ಹೂವಿನ ಬೆಲೆ ಮಾತ್ರ ಕುಸಿದಿದೆ. ಹೂವಿನ ಬೆಲೆ ಇಳಿಕೆಯಾಗಿದ್ದು, ರೈತರನ್ನು ಕಂಗಾಲಾಗಿಸಿದೆ. ಹೂವುಗಳನ್ನು ಕಟಾವು ಮಾಡಿದ ಕೂಲಿ ಸಹ ದಕ್ಕದಂತಾಗಿದೆ. ಹೀಗಾಗಿ ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆಯಿಂದ ನೂರಾರು ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

Advertisement

ಇದನ್ನೂ ಓದಿ: ಸರ್ಕಾರಿ ಡಿಗ್ರಿ ಕಾಲೇಜಿಗೆ ಸವಾಲಾದ ದಾಖಲಾತಿ

ಇನ್ನು ಅಲ್ಪಸ್ವಲ್ಪ ಚೆಂಡು ಹೂವು ಕೈಗೆ ಬರುತ್ತಿದ್ದು, ಮೋಡ ಕವಿದ ವಾತಾವರಣ ಹಿನ್ನೆಲೆ ಮತ್ತೆ ಚಿಂತೆ ಹುಟ್ಟಿಸಿದೆ. ಕೊಳೆ ರೋಗ ಬಾಧೆಯಿಂದ ತತ್ತರಿಸಿದ ರೈತರಿಗೆ ತಾಲೂಕು ಆಡಳಿತವೇ ಪರಿಹಾರ ನೀಡಬೇಕೆನ್ನುವ ಕೂಗು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿದೆ. ಹಲವು ಗ್ರಾಮಗಳಲ್ಲಿ ರೈತರು ಚೆಂಡು ಹೂವು ಬೆಳೆದಿದ್ದಾರೆ. ಸತತ ಮಳೆಯಿಂದ ಬೆಳೆಗೆ ಕೊಳೆ ರೋಗಬಾಧೆ ಆವರಿಸಿದೆ. ಈ ಬಾರಿ ಬೆಲೆ ಇಲ್ಲದ ಕಾರಣ ಬೆಳೆಗಾರರಿಗೆ ಆತಂಕ ತಂದಿದೆ. -ಭೀಮರಾವ್‌ ಕುಂಬಾರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಈ ಬಾರಿ ಸತತ ಮಳೆಯಿಂದ ಚೆಂಡು ಹೂವಿಗೆ ಕೊಳ ರೋಗಬಾಧೆ ಕಾಡುತ್ತಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏಕಾಏಕಿ ಬೆಲೆ ಕುಸಿದಿದೆ. ಹಾಕಿದ ಹಣವೂ ಬಾರಲಾರದ ಸ್ಥಿತಿ ಎದುರಾಗಿದೆ. -ಅಂಬರೇಶ ಅರಕೇರಾ, ಚೆಂಡು ಹೂ ಬೆಳೆಗಾರ

-ನಾಗರಾಜ ತೇಲ್ಕರ್‌

 

Advertisement

Udayavani is now on Telegram. Click here to join our channel and stay updated with the latest news.

Next