Advertisement

Price control:ಕೇಂದ್ರದಿಂದ 71 ಸಾವಿರ ಟನ್‌ ಈರುಳ್ಳಿ ಖರೀದಿ

01:12 AM Jun 23, 2024 | Team Udayavani |

ಹೊಸದಿಲ್ಲಿ: ದೇಶದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರಕಾರ 71 ಸಾವಿರ ಟನ್‌ ಈರುಳ್ಳಿಯನ್ನು ಖರೀದಿಸಿದೆ. ಜೂ. 20ರ ವರೆಗೆ 70, 987 ಟನ್‌ ಈರುಳ್ಳಿ ಸಂಗ್ರಹಿಸಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 74,071 ಟನ್‌ ಶೇಖರಿಸಲಾಗಿತ್ತು. ಪ್ರಸಕ್ತ ವರ್ಷ 5 ಲಕ್ಷ ಟನ್‌ ಈರುಳ್ಳಿ ಶೇಖರಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರಕಾರ ನಡೆಸಿದ ಅಂದಾಜಿನ ಪ್ರಕಾರ ದೇಶದಲ್ಲಿ ಈಗ ಸದ್ಯ ಪ್ರತೀ ಕೆ.ಜಿ. ಈರುಳ್ಳಿ ಬೆಲೆ 38.67ರೂ. ಬೆಲೆಯಿದೆ. 2023-24ರಲ್ಲಿ ಮಳೆಯ ಅಭಾವದಿಂದ ಈರುಳ್ಳಿ ಉತ್ಪಾದನೆಯಲ್ಲಿ ಶೇ. 20ರಷ್ಟು ಕಡಿಮೆ ಆಗಿದ್ದು, ಅದರ ಬೆಲೆ ಏರಿಕೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next