Advertisement

ರಾಷ್ಟ್ರಪತಿ ಚುನಾವಣೆ : ಮೊದಲ ಸುತ್ತಿನಲ್ಲಿ ದ್ರೌಪದಿ ಮುರ್ಮು ಅವರಿಗೆ ಭಾರಿ ಮುನ್ನಡೆ

04:55 PM Jul 21, 2022 | Team Udayavani |

ನವದೆಹಲಿ : ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಗುರುವಾರ ಬಿರುಸಿನಿಂದ ನಡೆಯುತ್ತಿದ್ದು, ಮೊದಲ ಸುತ್ತಿನ ಎಣಿಕೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

Advertisement

ದ್ರೌಪದಿ ಮುರ್ಮು ಅವರು ಸಂಸದರ 748 ಮತಗಳಲ್ಲಿ 540 ಮತಗಳನ್ನು ಗಳಿಸಿ ಮುನ್ನಡೆಯಲ್ಲಿದ್ದರೆ, ಮೊದಲ ಸುತ್ತಿನ ಮತ ಎಣಿಕೆಯ ನಂತರ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ 208 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಪಿ ಸಿ ಮೋಡಿ ತಿಳಿಸಿದ್ದಾರೆ.

15 ಸಂಸದರ ಮತಗಳು ಅಸಿಂಧು ಎಂದು ಘೋಷಿಸಲಾಗಿದ್ದು, ಎಲ್ಲ ಸಂಸದರ ಮತಗಳನ್ನು ಎಣಿಕೆ ಮಾಡಲಾಗಿದೆ. ಎಂಟು ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂದು ಮೋಡಿ ಹೇಳಿದ್ದಾರೆ.

ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಅವರು ಒಟ್ಟು 5,23,600 ಮತಗಳನ್ನು ಪಡೆದರು, ಇದು ಒಟ್ಟು ಮಾನ್ಯ ಸಂಸದರ ಮತಗಳ ಶೇಕಡಾ 72.19 ರಷ್ಟಿದೆ, ಇದು ಅವರ ಪರವಾಗಿ ಕೆಲವು ಅಡ್ಡ ಮತದಾನವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತವಾಗಿ ಬೆಂಬಲ ನೀಡಿದ ಪಕ್ಷಗಳ ಬಲವನ್ನು ನೋಡಿದರೆ, ಮುರ್ಮು ಅವರು ಇನ್ನೂ ಐದರಿಂದ ಆರು ಸಂಸದರ ಮತಗಳನ್ನು ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಚುನಾವಣೆಗೆ ಮುನ್ನ ವಿವಿಧ ಪಕ್ಷಗಳ 538 ಸಂಸದರು ಮುರ್ಮು ಅವರಿಗೆ ಬೆಂಬಲ ನೀಡಿದ್ದರು, ಆದರೆ ಅವರಲ್ಲಿ ಕೆಲವರು ಮತ ಚಲಾಯಿಸಲಿಲ್ಲ. ಮತ್ತೊಂದೆಡೆ, ಸಿನ್ಹಾ ಅವರ ಒಟ್ಟು ಮತ ಮೌಲ್ಯವು 1,45,600 ರಷ್ಟಿದೆ, ಇದು ಒಟ್ಟು ಮಾನ್ಯ ಮತಗಳ ಶೇಕಡಾ 27.81 ಆಗಿದೆ.

Advertisement

ಶಾಸಕರ ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next