Advertisement

ನಾಳೆ ರಂಗ ಮಂದಿರದಲ್ಲಿ ಪತ್ರಿಕಾ ದಿನಾಚರಣೆ

11:52 AM Jul 22, 2017 | |

ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಸಕ್ತ ಸಾಲಿನ ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಮಿತ್ರರು ಇದೇ ಮೊದಲ ಬಾರಿಗೆ ನಟಿಸಿರುವ ಕೋಣನ ಮುಂದೆ ಕಿನ್ನರಿ ನಾಟಕ ಪ್ರದರ್ಶನ ಜುಲೈ 23ರಂದು ಸಂಜೆ 4:30ಕ್ಕೆ ನಗರದ ಡಾ| ಎಸ್‌.
ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ.

Advertisement

ದಿ| ವಿ.ಎನ್‌. ಕಾಗಲಕರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗೋವಿಂದರಾವ್‌ ಖಮೀತಕರ್‌ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಅದೇ ರೀತಿ ಮಾಧ್ಯಮ ಕ್ಷೇತ್ರದ ಸಂಪಾದಕೀಯಲ್ಲದೇ ಜಾಹೀರಾತು, ಮುದ್ರಣ, ಪ್ರಸರಣ ಸೇರಿ ಇತರ
ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ 16 ಜನರನ್ನು ಸತ್ಕರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉದಯವಾಣಿ ಜಾಹೀರಾತು ವಿಭಾಗದ ವ್ಯವಸ್ಥಾಪಕ ನಾಗಶೆಟ್ಟಿ ಡಾಕುಳಗಿ, ಉದಯವಾಣಿ ಜೇವರ್ಗಿ ತಾಲೂಕು ವರದಿಗಾರ ವಿಜಯಕುಮಾರ ಕಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಪತ್ರಕರ್ತರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಮಾಧ್ಯಮ ಮಿತ್ರರೆಲ್ಲರೂ ಸೇರಿ ಮೊದಲ ಬಾರಿಗೆ ಪತ್ರಕರ್ತ ಡಾ| ಶಿವರಾಮ ಅಸುಂಡಿ ಬರೆದಿರುವ ಹಾಗೂ ಪತ್ರಕರ್ತ ಪ್ರಭಾಕರ ಜೋಶಿ ನಿರ್ದೇಶಿಸುತ್ತಿರುವ ನಾಟಕ ಪ್ರದರ್ಶನ ಹಾಗೂ ಪತ್ರಿಕಾ ದಿನಾಚರಣೆಯನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ
ಉದ್ಘಾಟಿಸುವರು. ಮೊದಲು ಒಂದು ಗಂಟೆ ಪತ್ರಿಕಾ ದಿನಾಚರಣೆ, ತದನಂತರ ನಾಟಕ ಪ್ರದರ್ಶನ ಹಾಗೂ ಪತ್ರಕರ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. 

ಮೇಯರ್‌ ಶರಣು ಮೋದಿ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಧಿಕಾರಿ ಉಜ್ವಲ್‌ ಕುಮನಾರ ಘೋಷ್‌, ಎಸ್ಪಿ ಎನ್‌.
ಶಶಿಕುಮಾರ, ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ತಿಂಗಳು ಸೇವೆಯಿಂದ
ನಿವೃತ್ತಿಯಾಗುತ್ತಿರುವ ವಾರ್ತಾ ಮತ್ತು ಸಂಪರ್ಕ ಇಲಾಖೆ ಉಪ ನಿರ್ದೇಶಕ ಜಿ. ಚಂದ್ರಕಾಂತ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು. 

Advertisement

ಸಂಘದ ಪ್ರಧಾನ ಕಾರ್ಯದರ್ಶಿ ಶಿವರಂಜನ್‌ ಸತ್ಯಂಪೇಟೆ, ಉಪಾಧ್ಯಕ್ಷ ರಮೇಶ ಖಮೀತ್ಕರ್‌, ಖಜಾಂಚಿ ಚಂದ್ರಕಾಂತ
ಹಾವನೂರ ಇದ್ದರು. 

ನಾಟಕ ರಂಗದ ಮೇಲೆ
ಶೇಷಮೂರ್ತಿ ಅವಧಾನಿ, ಸಂಗಮನಾಥ ರೇವತಗಾಂವ, ಶರಣಯ್ಯ ಹಿರೇಮಠ, ರವಿ ನರೋಣಾ, ರಾಜಕುಮಾರ ಉದನೂರ, ಗಂಗಾಧರ ಹಿರೇಮಠ, ಮಹಿಪಾಲರೆಡ್ಡಿ ಮುನ್ನೂರ್‌, ಚಂದ್ರಶೇಖರ ಕವಲಗಾ, ಅರುಣಕುಮಾರ ಕದಂ, ಸರೋಜಿನಿ ಪಾಟೀಲ ಯಮಕನಮರಡಿ, ಗಣೇಶ ಪಾಟೀಲ, ಮನೀಷ್‌ ಪವಾರ, ಸೆ„ಯದ್‌ ಆಬೀದ್‌ ಹುಸೇನ್‌, ಸಿದ್ಧರಾಮ ಚೋರಮಲೆ, ಸುಧನ್ವ ಅವಧಾನಿ.

ಹಿರಿಯ ಪತ್ರಕರ್ತ ಗೋವಿಂದರಾವ ನಾರಾಯಣರಾವ್‌ ಖಮೀತ್ಕರ್‌ 1978ರಲ್ಲಿ ಅನಂತ ಪ್ರಿಂಟಿಂಗ್‌ ಪ್ರಸ್‌ನ್ನು ನಡೆಸಿ, ಆಗಿನಿಂದಲೇ ವಿತ್ತ ಮಂಜರಿ ಎನ್ನುವ ಹಿಂದಿ ಭಾಷೆಯ ದಿನಪತ್ರಿಕೆ ಆರಂಭಿಸಿದ್ದರು. 1992ರಿಂದ ವಾಣಿ ಸಾಮ್ರಾಟ್‌ ಕನ್ನಡ ದಿನಪತ್ರಿಕೆ ಆರಂಭಿಸಿ ಇಲ್ಲಿವರೆಗೆ ಎರಡೂ ಪತ್ರಿಕೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. 1966ರಲ್ಲಿ ಕಲಬುರಗಿಯಲ್ಲಿ ಮೊಟ್ಟ ಮೊದಲ ಫೋಟೊ
ಸ್ಟುಡಿಯೊ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಈ ಬಾರಿಯ ವಿ.ಎನ್‌. ಕಾಗಲಕರ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಗೆ ಭಾಜನರಾದವರು ವಿಜಯಕುಮಾರ ಕಲ್ಲಾ (ಉದಯವಾಣಿ), ನಾಗಶೆಟ್ಟಿ ಡಾಕುಳಗಿ (ಜಾಹೀರಾತು ವಿಭಾಗ), ಶೇಷಗಿರಿ ಎಚ್‌., ಮಂಜುನಾಥ ಅಂಜುಟಗಿ, ಶರಣಬಸಪ್ಪ ವಡಗಾಂವ, ನಾಗಯ್ಯ ಸ್ವಾಮಿ ಬೊಮ್ಮನಳ್ಳಿ, ನರಸಿಂಗ್‌ ಕುದಂಪುರೆ, ಶಿವರಾಜ ವಾಲಿ, ಮಲ್ಲಿಕಾರ್ಜುನ ಮೂಡಬೂಳಕರ್‌, ಆಸ್ಮಾ ಇನಾಂದಾರ್‌, ಶರಣಬಸಪ್ಪ ಅನ್ವರ್‌, ಅರುಣ ಕದಮ್‌, ವಿಜಯಕುಮಾರ ವಾರದ, ಮಿರ್ಜಾ ಸರ್ಪರಾಜ್‌, ಆನಂದ ರಾಜಪ್ಪ (ಮುದ್ರಣ ವಿಭಾಗ), ಸಿದ್ಧಾರೂಢ ಬಿರಾದಾರ (ಪ್ರಸಾರಾಂಗ ವಿಭಾಗ). 

Advertisement

Udayavani is now on Telegram. Click here to join our channel and stay updated with the latest news.

Next