Advertisement

ಮಂಗಳೂರಿನಲ್ಲಿ ರಾಷ್ಟ್ರಪತಿಯ ವಾಸ್ತವ್ಯ; ಸರ್ಕೀಟ್‌ ಹೌಸ್‌ ಸುತ್ತ-ಮುತ್ತ ಬಿಗು ಭದ್ರತೆ

08:05 PM Oct 07, 2021 | Team Udayavani |

ಮಹಾನಗರ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶೃಂಗೇರಿಯ ಶ್ರೀ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸರಕಾರಿ ಅತಿಥಿಗೃಹ ಸರ್ಕೀಟ್‌ ಹೌಸ್‌ನಲ್ಲಿ ಗುರುವಾರ ವಾಸ್ತವ್ಯ ಹೂಡಿದರು. ರಾಷ್ಟ್ರಪತಿಯವರ ವಾಸ್ತವ್ಯದ ಹಿನ್ನೆಲೆಯಲ್ಲಿ ಸರ್ಕೀಟ್‌ ಹೌಸ್‌ ಪರಿಸರದಲ್ಲಿ ಬಿಗು ಭದ್ರತೆ ಕಲ್ಪಿಸಲಾಗಿದೆ.

Advertisement

ರಾಷ್ಟ್ರಪತಿಯವರನ್ನು ಸ್ವಾಗತಿಸಲು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊತ್‌ ಮಂಗಳೂರಿಗೆ ಆಗಮಿಸಿದ್ದು, ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.

ರಾಷ್ಟ್ರಪತಿಯವರ ಆಗಮನ ಹಾಗೂ ನಿರ್ಗಮನ ವೇಳೆ ವಿಮಾನ ನಿಲ್ದಾಣದಿಂದ ಮಂಗಳೂರುವರೆಗಿನ ರಸ್ತೆಯುದ್ದಕ್ಕೂ ಬಿಗು ಭದ್ರತೆ ವ್ಯವಸ್ಥೆಗೊಳಿಸಲಾಗಿದ್ದು, ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಕೀìಟ್‌ಹೌಸ್‌ನ ಮುಂಭಾಗದಲ್ಲಿ ಹಾಗೂ ಒಳಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಉನ್ನತ ಪೊಲೀಸ್‌ ಅಧಿಕಾರಿಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಸಹಿತ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿ ಸರ್ಕೀಟ್‌ ಹೌಸ್‌ನೊಳಗೆ ಬಿಡಲಾಗುತ್ತಿತ್ತು.

ರಾಷ್ಟ್ರಪತಿಯವರು ಪತ್ನಿ ಜತೆಗೆ ಮೈಸೂರಿ ನಿಂದ ಗುರುವಾರ ಸಂಜೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಕದ್ರಿಹಿಲ್‌ನಲ್ಲಿರುವ ನೂತನ ಸರ್ಕೀಟ್‌ ಹೌಸ್‌ಗೆ ಆಗಮಿಸಿದರು. ಅವರ ವಾಸ್ತವ್ಯಕ್ಕೆ ನೂತನ ಸರ್ಕೀಟ್‌ ಹೌಸ್‌ನ್ನು ಸರ್ವ ಸೌಲಭ್ಯಗಳೊಂದಿಗೆ ಸಿದ್ಧಗೊಳಿಸಲಾಗಿತ್ತು.  ಸಕೀìಟ್‌ಹೌಸ್‌ ಪ್ರದೇಶಕ್ಕೆ ಸಾರ್ವ ಜನಿಕ ಪ್ರವೇಶವನ್ನು ಸಂಪೂರ್ಣ ನಿಬಂಧಿ ಸಲಾಗಿದ್ದು, ಭದ್ರತ ಸಿಬಂದಿ ಸುಪರ್ದಿಗೆ ತೆಗೆದುಕೊಂಡು ನಿಗಾ ಇರಿಸಿದ್ದಾರೆ.

ಸಂಚಾರದಲ್ಲಿ ಮಾರ್ಪಾಡು :

Advertisement

ರಾಷ್ಟ್ರಪತಿಯವರು ನಗರದ ಸರ್ಕೀಟ್‌ ಹೌಸ್‌ನಲ್ಲಿ ವಾಸ್ತವ್ಯದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿನ ಸಂಚಾರ ವ್ಯವಸ್ಥೆಯಲ್ಲಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ 11ರ ವರೆಗೆ ಮಾರ್ಪಾಟು ಮಾಡಿದ್ದು ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಕೆಪಿಟಿ ಕಡೆಯಿಂದ ಸರ್ಕೀಟ್‌ ಹೌಸ್‌ ಜಂಕ್ಷನ್‌-ಬಟ್ಟಗುಡ್ಡೆ ಮೂಲಕ ನಗರಕ್ಕೆ ಪ್ರವೇಶಿಸುವ ವಾಹನಗಳು ನಂತೂರು ಜಂಕ್ಷನ್‌ ಮೂಲಕ ನಗರ ಪ್ರವೇಶಿಸಬೇಕು. ಕೆಎಸ್‌ಆರ್‌ಟಿಸಿ , ಬಿಜೈ, ಬಟ್ಟಗುಡ್ಡೆ, ಕಡೆಯಿಂದ ಕೆಪಿಟಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸುವ ವಾಹನಗಳು ಕುಂಟಿಕಾನ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಕಡೆಗೆ ಚಲಿಸಬೇಕು. ಬಂಟ್ಸ್‌ಹಾಸ್ಟೆಲ್‌ ಸರ್ಕಲ್‌, ಕದ್ರಿ ಕಂಬಳ ರಸ್ತೆ, ಬಿಜೈ ಬಟ್ಟಗುಡ್ಡೆ ಮೂಲಕ ರಾಷ್ಟ್ರೀಯ ಹೆದ್ದಾರಿನ ಕೆಪಿಟಿ ಜಂಕ್ಷನ್‌ ಕಡೆಗೆ ಸಂಚರಿಸುವ ವಾಹನಗಳು ಬಂಟ್ಸ್‌ಹಾಸ್ಟೆಲ್‌ ಸರ್ಕಲ್‌, ಮಲ್ಲಿಕಟ್ಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿನ ನಂತೂರು ಜಂಕ್ಷನ್‌ ಮೂಲಕ ಮುಂದುವರಿಯಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕೀಟ್ ಹೌಸ್‌ ಸುತ್ತಮುತ್ತ ಹಾಗೂ ಪರಿಸರದಲ್ಲಿ ರಾತ್ರಿ ಪ್ರಖರ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. 24 ತಾಸು ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ವಾಗದಂತೆ ನಿಗಾ ವಹಿಸಲಾಗಿದ್ದು ಮುಂಜಾಗ್ರತವಾಗಿ ಜನರೇಟರ್‌ಗಳನ್ನು ಕೂಡ ವ್ಯವಸ್ಥೆಗೊಳಿಸಲಾಗಿದೆ.

ಸುಲಲಿತ ದೂರಸಂಪರ್ಕ ವ್ಯವಸ್ಥೆಗೆ ಬಿಎಸ್‌ಎನ್‌ಎಲ್‌ನಿಂದ ಹಾಟ್‌ಲೆçನ್‌ ವ್ಯವಸ್ಥೆಗೊಳಿಸಲಾಗಿದೆ. ರಾಷ್ಟ್ರಪತಿಗಳು, ಅವರೊಂದಿಗೆ ಆಗಮಿಸಲಿರುವ ಅಧಿಕಾರಿಗಳು ಹಾಗೂ ಸಿಬಂದಿಗೆ ಉತ್ತಮ ವಾಸ್ತವ್ಯ, ಊಟೋ ಪಚಾರವನ್ನು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. ದೇಶದ ಪ್ರಥಮ ಪ್ರಜೆಯ ವಾಸ್ತವ್ಯದ ಸಂದರ್ಭದಲ್ಲಿ ಯಾವುದೇ ಸಣ್ಣಪುಟ್ಟ ಲೋಪಗಳು ಕೂಡ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ಸಕೀìಟ್‌ ಹೌಸ್‌ನ ಪ್ರವೇಶದ್ವಾರ ಪರಿಸರವನ್ನು ಸುಂದರಗೊಳಿಸಲಾಗಿದ್ದು, ಹಸುರುಕರಣದೊಂದಿಗೆ ಕಂಗೊಳಿಸುತ್ತಿದೆ. ಪ್ರವೇಶ ದ್ವಾರ, ವೃತ್ತಗಳಿಗೆ, ವಿಭಜಕಗಳಿಗೆ ಬಣ್ಣ ಬಳಿಯಲಾಗಿದೆ. ಸಕೀìಟ್‌ ಹೌಸ್‌ ಆವರಣದಲ್ಲಿ ಹಸುರುàಕರಣಗೊಳಿಸಿ ಗಾರ್ಡನ್‌ಗಳು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next