ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿಗಳು ಪ್ರಸಕ್ತ ಸಾಲಿನ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರು ನಗರದ ಸಿಐಡಿಯ ಆರ್ಥಿಕ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್, ರಾಜ್ಯದ ಆಂತರಿಕಾ ಭದ್ರತಾ ದಳ (ಐಎಸ್‌ಡಿ) ಎಡಿಜಿಪಿ ಜೆ. ಅರುಣ್ ಚಕ್ರವರ್ತಿ, ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್ ಕಮಾಂಡೆಂಟ್ ಎಂ.ವಿ. ರಾಮಕೃಷ್ಣ ಪ್ರಸಾದ್, ಮಲ್ಲೇಶ್ವರಂ ಉಪವಿಭಾಗ ಎಸಿಪಿ
ಕೆ.ಎಸ್.ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ಪಿ.ರವಿ, ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್‌ಪಿ ನವೀನ್ ಕುಲಕರ್ಣಿ, ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಸಿದ್ದರಾಜು, ಬೆಂಗಳೂರು ನಗರದ ಎಸಿಬಿ ಇನ್‌ಸ್ಪೆಕ್ಟರ್ ಎಂ.ಜೆ. ದಯಾನಂದ, ಕಲಬುರಗಿ ಗ್ರಾಮಾಂತರ ವೃತ್ತ ನಿರೀಕ್ಷಕ
ಶಂಕರಗೌಡ ಪಾಟೀಲ್, ಬೆಳಗಾವಿಯ ಕಂಗ್ರಳ್ಳಿ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಆರ್‌ಎಸ್‌ಐ ಎಸ್. ಬಿ.ಮಾಳಗಿ, ರಾಜ್ಯ ಗುಪ್ತಚರ ವಿಭಾಗದ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಎಸ್.ಇ. ಗೀತಾ, ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್ ಎಆರ್‌ಎಸ್‌ಐ ಡಿ.ಎಸ್. ಗೋವರ್ಧನ ರಾವ್, ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್‌ಐ ಮೋಹನ, ಬೆಂಗಳೂರು ನಿಸ್ತಂತು ವಿಭಾಗದ ಎಎಸ್‌ಐ ರಾಮ ನಾಯ್ಕ್, ತುಮಕೂರಿನ ಜಯನಗರ ಠಾಣೆಯ ಸಿಎಚ್‌ಸಿ ಮೊಹಮ್ಮದ್ ಮುನ್ನಾವರ್ ಪಾಷಾ, ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್ ಆರ್‌ಎಚ್‌ಸಿ ಎಸ್.ಪಿ. ಕೆರುಟಗಿ, ಬಳ್ಳಾರಿ ಡಿಎಆರ್‌ನ ಎಎಚ್‌ಸಿ ಬಿ.ಎಸ್. ದಾದಾ ಅಮೀರ್, ಬೆಂಗಳೂರಿನ ಯಲಹಂಕದಲ್ಲಿ ರುವ ಎಪಿಟಿಎಸ್ ನ ಎಎಚ್‌ಸಿ ವಿ. ಸೋಮಶೇಖರ್, ಚಿಕ್ಕಮಗಳೂರಿನ ಕಂಪ್ಯೂಟರ್ ವಿಭಾಗದ ಸಿಎಚ್‌ಸಿ ಆರ್. ಕುಮಾರ್, ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್ ಆರ್‌ಎಚ್‌ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ- ಧಾರವಾಡ ಸಿಸಿಆರ್‌ಬಿ ಸಿಎಚ್‌ಸಿ ಗೋಪಾಲಪ್ಪ ದೇವೇಂದ್ರಪ್ಪ ಕೊಟಬಾಗಿ ಅವರ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗೆ ಪ್ರಶಸ್ತಿ ಸಂದಿದೆ.