Advertisement

ಕಿಲ್ಲರ್ಸ್‌ಗೆ ರಾಷ್ಟ್ರಪತಿ ಧ್ವಜ ಗೌರವ

01:54 AM Dec 06, 2021 | Team Udayavani |

ಹೊಸದಿಲ್ಲಿ: 1971ರಲ್ಲಿ ನಡೆದಿದ್ದ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ಅಪ್ರತಿಮ ಶೌರ್ಯ ತೋರಿದ “22 ಕ್ಷಿಪಣಿ ಸಾಮರ್ಥ್ಯದ ನೌಕಾ ತುಕಡಿ’ಗೆ ರಾಷ್ಟ್ರಪತಿಯವರ ಧ್ವಜ (ಪ್ರಸಿಡೆಂಟ್ಸ್‌ ಸ್ಟಾಂಡರ್ಡ್‌) ಗೌರವ ಘೋಷಿಸಲಾಗಿದೆ.

Advertisement

ಬುಧವಾರ ಈ ಗೌರವವನ್ನು ನೌಕಾಪಡೆ ಮುಖ್ಯಸ್ಥರಿಗೆ ರಾಷ್ಟ್ರಪತಿ ಕೋವಿಂದ್‌ ಪ್ರದಾನ ಮಾಡಲಿದ್ದಾರೆ.

ಈ ನೌಕಾ ತುಕಡಿ ಕರಾಚಿ ನೌಕಾ ನೆಲೆಯ ಮೇಲೆ ದಾಳಿ ನಡೆಸಿ, ಪಾಕ್‌ ನೌಕಾಪಡೆಯ ಯುದ್ಧ ನೌಕೆಗಳನ್ನು ಜಲಸಮಾಧಿ ಮಾಡಿತ್ತು.

ಅದಕ್ಕಾಗಿಯೇ ದೇಶದ ನೌಕಾಪಡೆಯಲ್ಲಿ “ಕಿಲ್ಲರ್ಸ್‌ ಪಡೆ’ ಎಂಬ ಹೆಗ್ಗಳಿಕೆಯನ್ನು ಅದು ಪಡೆದುಕೊಂಡಿದೆ.

ಇದನ್ನೂ ಓದಿ:ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

Advertisement

“22 ಕ್ಷಿಪಣಿ ಸಾಮರ್ಥ್ಯದ ನೌಕಾ ತುಕಡಿ’ಯು ನೌಕಾಪಡೆಗೆ ಸೇರ್ಪಡೆಗೊಂಡು ಈ ವರ್ಷ 50 ವರ್ಷಗಳಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next