Advertisement

ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್‌

08:57 PM Jun 29, 2022 | Team Udayavani |

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗೆ ಕನಿಷ್ಠ 50 ಸಂಸದರ ಅಥವಾ ಶಾಸಕರು ಸೂಚಕರಾಗಿ ಹಾಗೂ ಅನುಮೋದಕರಾಗಿರಬೇಕು ಎಂಬ ಕಾನೂನಿನ ಔಚಿತ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಮನವಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

Advertisement

ಅರ್ಜಿದಾರರಲ್ಲೊಬ್ಬರಾದ ನವದೆಹಲಿ ಮೂಲದ ಬಮ್‌ ಬಮ್‌ ನೊವಾಟಿಯಾ, 2007ರಿಂದಲೂ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಲೇ ಇದ್ದು, ಸಂಸದರ, ಶಾಸಕರ ಬೆಂಬಲ ಸಿಗದೇ ಚುನಾವಣೆಗೆ ನಿಲ್ಲುವಲ್ಲಿ ವಿಫ‌ಲರಾಗಿದ್ದಾರೆ. ಇದನ್ನು ಗಮನಿಸಿದ ನ್ಯಾಯಪೀಠ, ರಾಷ್ಟ್ರಪತಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಇಂಥ ಅರ್ಜಿಗಳನ್ನು ಸಲ್ಲಿಸುವುದು ಉತ್ತಮ ನಡೆಯಲ್ಲ ಎಂದಿದೆ.

ಇದನ್ನೂ ಓದಿ:ಆಸ್ಕರ್‌ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್‌ ನಟಿ ಕಾಜೋಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next