Advertisement

ರಾಷ್ಟ್ರಪತಿ ಚುನಾವಣಾ ಕಣ: ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಸುಲಭ

06:15 PM Jul 13, 2022 | Team Udayavani |

ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿಯಾದ ಯಶ್ವಂತ್‌ ಸಿನ್ಹಾ ಕಣದಲ್ಲಿದ್ದಾರೆ. ಇವರಲ್ಲಿ ಮುರ್ಮು ಅವರಿಗೆ ಹೆಚ್ಚು ಮತಗಳು ಸಿಗಲಿದ್ದು, ವಿಜಯ ಮಾಲೆ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ.

Advertisement

5,43,200
ದೇಶದ ಏಳು ನೂರ ಎಪ್ಪತ್ತಾರು ಸಂಸದರ ಮತ ಮೌಲ್ಯ

5,43,231
ಒಟ್ಟು ನಾಲ್ಕು ಸಾವಿರದ ಮೂವತೂ¾ರು ಶಾಸಕರ ಮತ ಮೌಲ್ಯ

ಒಟ್ಟು ಮತ ಮೌಲ್ಯ
10,86,431

ಪಕ್ಷಗಳ ಬಲಾಬಲ ಎಷ್ಟಿದೆ?
ಇಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ 9,400 ಮತ ಮೌಲ್ಯಗಳ ಕೊರತೆಯಿದೆ. ಹಾಗಾಗಿ, ಸಮಾನ ಮನಸ್ಕ ಪಕ್ಷಗಳ ಸಹಕಾರಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಈಗಾಗಲೇ ಶಿವಸೇನೆ, ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಶಿರೋಮಣಿ ಅಕಾಲಿದಳ (ಎಸ್‌ಎಡಿ) ಪಕ್ಷಗಳು ಮುರ್ಮುಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಈ ಪಕ್ಷಗಳು ನುಡಿದಂತೆ ನಡೆದರೆ ಮುರ್ಮು ಗೆಲುವು ನಿಶ್ಚಿತ.

Advertisement

ಎನ್‌ಡಿಎ ಒಕ್ಕೂಟದ ಮತಗಳು – 5,33,751
ವೈಎಸ್‌ಆರ್‌ಸಿಪಿ – 45,709
ಬಿಜೆಡಿ – 31,686
ಶಿವಸೇನೆ – 25,200
ಬಿಎಸ್‌ಪಿ – 8,410
ಶಿರೋಮಣಿ ಅಕಾಲಿ ದಳ – 1,748
ವಿಪಕ್ಷಗಳ ಮತ ಮೌಲ್ಯ – 3,60,362
ಇತರೆ – 79,565

ಗೆಲುವಿಗಾಗಿ ಬೇಕಿರುವ ಮತಮೌಲ್ಯ
5,43,216

ಮುರ್ಮುರವರಿಗೆ ಸಿಗಬಹುದಾದ ಮತಮೌಲ್ಯ
6,46,504

Advertisement

Udayavani is now on Telegram. Click here to join our channel and stay updated with the latest news.

Next