Advertisement

ನೋವಿನ ನಡುವೆಯೇ ಸರಳ ಓಣಂ ಆಚರಣೆ

06:00 AM Aug 26, 2018 | |

ತಿರುವನಂತಪುರ: ಪ್ರವಾಹ ದುಸ್ಥಿತಿ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಹ ಓಣಂ ಹಬ್ಬದ ವೈಭವದ ಆಚರಣೆಗೆ ಬ್ರೇಕ್‌ ಹಾಕಿದೆ. ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಮಾದರಿಯಲ್ಲಿ ಈ ಬಾರಿಯ ಓಣಂನಂದು ನಡೆಸಲು ಉದ್ದೇಶಿಸಲಾಗಿದ್ದ “ಚಾಂಪಿಯನ್ಸ್‌ ಬೋಟ್‌ ಟ್ರೋಫಿ’ಯ ಉದ್ಘಾಟನೆ  ಮುಂದೂಡಲಾಗಿದೆ. 28ರಂದು ತ್ರಿಶೂರ್‌ನಲ್ಲಿ ನಡೆಯಬೇಕಿದ್ದ  “ಪುಲಿಕಲಿ’ (ಹುಲಿವೇಷ) ಸ್ಪರ್ಧೆ ರದ್ದುಗೊಳಿಸಲಾಗಿದೆ. ಕೊಚ್ಚಿಯ ತ್ರಿಕಾಕ್ಕರ ದೇಗುಲದಲ್ಲಿ ಸಾಂಪ್ರದಾಯಿಕ ಸಾದ್ಯ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಮಹಾವಿಷ್ಣುವಿನ ವಾಮನ ಅವತಾರದಿಂದ ಬಲಿ ಚಕ್ರವರ್ತಿ ಸಂಹಾರವಾದ ಐತಿಹ್ಯ ಹೊಂದಿರುವ ತ್ರಿಕಾಕ್ಕರ ದೇಗುಲದಲ್ಲಿ “ಓಣಂ ಸಾದ್ಯ’ ಆಚರಣೆ ರದ್ದುಗೊಳಿಸಲಾಗಿತ್ತು. 

Advertisement

ಹೊಸ ಆ್ಯಪ್‌, ಪರಿಹಾರ: ಏತನ್ಮಧ್ಯೆ, ಪ್ರವಾಹ ಪೀಡಿತ ಪ್ರಾಂತ್ಯಗಳಲ್ಲಿನ ಅವ್ಯವಸ್ಥೆಗಳನ್ನು ಬೇಗನೇ ಸ್ಥಳೀಯ ಸರಕಾರಗಳ ಗಮನಕ್ಕೆ ತರುವ ಉದ್ದೇಶದಿಂದಾಗಿ, ಸರಕಾರ ಹೊಸ ಆ್ಯಪ್‌ ವ್ಯವಸ್ಥೆ ಜಾರಿಗೆ ತಂದಿಗೆ. ಜನರು ತಾವಿರುವ ವಾಸಸ್ಥಳದಲ್ಲಿರುವ ಅವ್ಯವಸ್ಥೆಯನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿ ವಿಡಿಯೋ ತುಣುಕನ್ನು ಈ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಿ ತ್ವರಿತ ಸಹಾಯ ಪಡೆಯಬಹುದು. ಮುಖ್ಯಮಂತ್ರಿ ಸಂತ್ರಸ್ತರ ಪರಿಹಾರ ನಿಧಿಯಿಂದ 3.9 ಲಕ್ಷ ಕುಟುಂಬಗಳ ಪ್ರತಿಯೊಬ್ಬ ಸದಸ್ಯನ ಬ್ಯಾಂಕ್‌ ಖಾತೆಗೆ ತಲಾ 10,000 ರೂ. ಹಾಕಲು ಸರಕಾರ ತೀರ್ಮಾನಿಸಿದೆ. 

ಆ್ಯಪಲ್‌ನಿಂದ 7 ಕೋಟಿ ರೂ.: ಕೇರಳ ಸಂತ್ರಸ್ತರ ಪುನರ್ವಸತಿಗಾಗಿ ಖಾಸಗಿ ಸಂಸ್ಥೆಗಳ ಸಹಾಯ ಮುಂದುವರಿದಿದೆ. ಆ್ಯಪಲ್‌ ಸಂಸ್ಥೆ 7ಕೋ ರೂ. ದೇಣಿಗೆ ನೀಡಿದೆ. 

ಓಣಂ ಆತ್ಮ ಸ್ಥೈರ್ಯ ತರಲಿ: ಪ್ರಧಾನಿ
ಟ್ವಿಟರ್‌ನಲ್ಲಿ ಓಣಂ ಶುಭಾಶಯ ಸಲ್ಲಿಸಿರುವ ಪ್ರಧಾನಿ ಮೋದಿ, ಈ ಬಾರಿಯ ಓಣಂ ಕೇರಳದ ಜನರಿಗೆ ಮಾನಸಿಕ ಸ್ಥೈರ್ಯ ತರಲಿ ಎಂದು ಆಶಿಸಿದ್ದಾರೆ. ಜತೆಗೆ, ಕೇರಳದ ಬೆನ್ನಿಗೆ ಕೇಂದ್ರ ಸರಕಾರ ಎಂದಿಗೂ ಇರಲಿದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.

ಸಾವಿನ ಸಂಖ್ಯೆ 265 ಏರಿಕೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಆ.8ರಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 265. ನಾಪತ್ತೆಯಾದ 36 ಮಂದಿಯ ಸುಳಿವು ಸಿಕ್ಕಿಲ್ಲ. ಇದೇ ವೇಳೆ, ಪ್ರವಾಹ ಪೀಡಿತ ಪ್ರಾಂತ್ಯದಲ್ಲಿ 1,31,683 ಮನೆಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಕೆಟ್ಟು ಹೋಗಿದ್ದ 23.36 ಲಕ್ಷ ಟ್ರಾನ್ಸ್‌ಫಾರ್ಮರ್‌ಗಳನ್ನು ದುರಸ್ತಿಗೊಳಿಸಲಾಗಿದೆ ಎಂದು ಕೇರಳ ಸರಕಾರ ಹೇಳಿದೆ. ರಾಜ್ಯದಲ್ಲಿ ಹಾಳಾಗಿರುವ ಒಟ್ಟಾರೆ ಮನೆಗಳಲ್ಲಿ ಶೇ.31 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಹಾನಿಗೀಡಾದ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ತಲಾ 10 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಲಾಗಿದೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next