Advertisement

Bharat Ratna: ಠಾಕೂರ್‌, ಪಿವಿಎನ್ ಸೇರಿ ನಾಲ್ವರಿಗೆ ಭಾರತ ರತ್ನ ಪ್ರದಾನ; ಅಡ್ವಾಣಿ ಗೈರು

02:49 PM Mar 30, 2024 | Team Udayavani |

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ (ಮಾರ್ಚ್‌ 30) ಸಮಾಜವಾದಿ ಚೌಧರಿ ಚರಣ್‌ ಸಿಂಗ್‌, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್‌, ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್‌ ಹಾಗೂ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್‌ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

Advertisement

ಇದನ್ನೂ ಓದಿ:AIFF; ಹೋಟೆಲ್ ನಲ್ಲಿ ಎಐಎಫ್‌ಎಫ್‌ ಅಧಿಕಾರಿ ದುರ್ವರ್ತನೆ: ಫುಟ್ಬಾಲ್ ಆಟಗಾರ್ತಿಯರ ದೂರು

ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಅವರು ಅನಾರೋಗ್ಯದ ಕಾರಣದಿಂದ ಸಮಾರಂಭಕ್ಕೆ ಗೈರು ಹಾಜರಾಗಿದ್ದು, ಭಾನುವಾರ ರಾಷ್ಟ್ರಪತಿ ಮುರ್ಮ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಪ್ರಧಾನಿ ದಿ.ಪಿ.ವಿ.ನರಸಿಂಹ ರಾವ್‌ ಅವರ ಪುತ್ರ ಪಿ.ವಿ.ಪ್ರಭಾಕರ್‌ ರಾವ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ ಆರ್‌.ಎಲ್.ಡಿ. ಅಧ್ಯಕ್ಷ ಜಯಂತ್‌ ಸಿಂಗ್‌ ಅಜ್ಜನ ಪರವಾಗಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು. ತಂದೆಯ ಪರವಾಗಿ ಸ್ವಾಮಿನಾಥನ್‌ ಪುತ್ರಿ ನಿತ್ಯಾ ರಾವ್‌, ಕರ್ಪೂರಿ ಠಾಕೂರ್‌ ಪುತ್ರ ರಾಮ್‌ ನಾಥ್‌ ಠಾಕೂರ್‌ ರಾಷ್ಟ್ರಪತಿಯಿಂದ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಉಪ ರಾಷ್ಟ್ರಪತಿ ಜಗ್‌ ದೀಪ್‌ ಧನ್ಕರ್‌ ಸೇರಿದಂತೆ ಇತರ ಗಣ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next