Advertisement

ವರ್ಷಾಂತ್ಯದ ಅಧ್ಯಕ್ಷೀಯ ಚುನಾವಣೆಗೆ ಸಿದ್ಧಗೊಳ್ಳುತ್ತಿದೆ ಅಮೆರಿಕ

09:32 AM Mar 19, 2020 | sudhir |

ವಾಷಿಂಗ್ಟನ್‌: ವರ್ಷಾಂತ್ಯದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧವಾಗತೊಡಗಿದೆ. ರಿಪಬ್ಲಿಕನ್‌ ಪಕ್ಷದ ವತಿಯಿಂದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (73)ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಡೆಮಾಕ್ರಾಟ್‌ ಪಕ್ಷದ ವತಿಯಿಂದ ಮಾಜಿ ಉಪಾಧ್ಯಕ್ಷ ಜಾನ್‌ ಬಿಡೆನ್‌ (77) ಅವರೇ ಮುಂಚೂಣಿಯಲ್ಲಿದ್ದು, ಹುರಿಯಾಳಾಗುವ ಸಾಧ್ಯತೆಗಳು ಅಧಿಕ.

Advertisement

ಹಾಲಿ ಅಧ್ಯಕ್ಷ ಟ್ರಂಪ್‌ರ ತವರು ರಾಜ್ಯ ಫ್ಲಾರಿಡಾದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಲ್ಲಿ ಭಾಗವಹಿಸಿದ್ದ 2, 550 ಮಂದಿಯ ಪೈಕಿ 1, 330 ಮಂದಿ ಟ್ರಂಪ್‌ ಅಭ್ಯರ್ಥಿತನ ಬೆಂಬಲಿಸಿದ್ದಾರೆ. ಅನುಮೋದನೆಗಾಗಿ ಬೇಕಾಗಿರುವ ಮತಗಳ ಸಂಖ್ಯೆ 1, 276.

ಡೆಮಾಕ್ರಾಟ್‌ ವತಿಯಿಂದ ಮಾಜಿ ಉಪಾಧ್ಯಕ್ಷ ಜಾನ್‌ ಬಿಡೆನ್‌ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಫ್ಲಾರಿಡಾ, ಇಲಿನಾಯ್ಸ, ಅರಿಝೋನಾಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಕಾರ್ಯಕ್ರಮದಲ್ಲಿ ಬಿಡೆನ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ, ಅವರದ್ದೇ ಪಕ್ಷದ ಮತ್ತೂಬ್ಬ ನಾಯಕ ವರ್ಮೆಂಟ್‌ ಸೆನೆಟರ್‌ ಸ್ಯಾಂಡರ್ಸ್‌ಗಿಂತ ಮುಂದಿದ್ದಾರೆ. ಬಿಡೆನ್‌ಗೆ 1,121 ಮಂದಿ ಬೆಂಬಲ ವ್ಯಕ್ತಪಡಿಸಿದ್ದರೆ. ಸ್ಯಾಂಡರ್ಸ್‌ಹೆ 839 ಮಂದಿ ಬೆಂಬಲ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next