ಪುರಿ: ದ್ರೌಪದಿ ಮುರ್ಮು ಅವರು ಹಮ್ಮು ಬಿಮ್ಮು ಇಲ್ಲದ ರಾಷ್ಟ್ರಪತಿ ಎಂಬುದನ್ನು ಸಾಬೀತು ಮಾಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗೆ ಏರಿದ ಬಳಿಕ ಮೊದಲ ಬಾರಿಗೆ ಒಡಿಶಾಕ್ಕೆ ಭೇಟಿ ನೀಡಿರುವ ಅವರು ಪುರಿ ಜಗನ್ನಾಥ ದೇಗುಲಕ್ಕೆ ಗುರುವಾರ ಭೇಟಿ ನೀಡಿದ್ದಾರೆ.
Advertisement
ವಿಶೇಷವೆಂದರೆ, ಅವರು ಎರಡು ಕಿಮೀ ನಡೆದುಕೊಂಡು ಬಂದು ದೇಗುಲದಲ್ಲಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರಪತಿಗಳ ಜತೆಗೆ ಇದ್ದರು. ದ್ರೌಪದಿ ಮುರ್ಮು ಅವರು ಒಟ್ಟು 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ವಾಗತಿಸಿದ್ದರು.