Advertisement

ಅಮೆರಿಕದಲ್ಲಿ ನೂತನ ಪೌರತ್ವ ವಿಧೇಯಕ ಮಂಡನೆ ; ಎಚ್‌-1ಬಿ ವೀಸಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ

03:55 PM May 12, 2023 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಆಡಳಿತಾರೂಢ ಡೆಮೊಕ್ರಾಟಿಕ್‌ ಪಕ್ಷವು ಅಲ್ಲಿನ ಸಂಸತ್‌ನಲ್ಲಿ ಪೌರತ್ವ ವಿಧೇಯಕ ವನ್ನು ಮಂಡಿಸಿದೆ. ಈ ಕಾಯಿದೆ ಜಾರಿಗೆ ಬಂದರೆ ಪ್ರತಿ ದೇಶಕ್ಕೆ ವಿತರಿಸುವ ಗ್ರೀನ್ ಕಾರ್ಡ್ ಗಳ ಮೇಲಿನ ಮಿತಿಯನ್ನು ತೆಗೆದುಹಾಕಲಾಗುತ್ತದೆ. ಅಲ್ಲದೇ ಎಚ್‌-1ಬಿ ವೀಸಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಡೆಮೊಕ್ರಾಟಿಕ್‌ ಪಕ್ಷದ ಸಂಸದೆ ಲಿಂಡಾ ಸಾಚೆಜ್‌ “ಅಮೆರಿಕ ಪೌರತ್ವ ವಿಧೇಯಕ 2023′ ಅನ್ನು ಮಂಡಿಸಿದರು. ಈ ಕಾಯಿದೆಯಿಂದ ದಾಖಲೆರಹಿತ 1.1 ಕೋಟಿ ವಲಸಿಗರಿಗೆ ಪೌರತ್ವ ಸಿಗಲಿದೆ.

Advertisement

ಗಡಿಪಾರಿನ ಭಯವಿಲ್ಲದೇ ಐದು ವರ್ಷಗಳ ಕಾಲ ದೇಶದಲ್ಲಿ ನೆಲೆಸಿ, ತೆರಿಗೆ ಪಾವತಿಸಲು ಅವಕಾಶ ನೀಡಲಾಗುತ್ತದೆ.
ಪೌರತ್ವ ನೀಡುವ ಮುನ್ನ ಅವರ ಹಿನ್ನೆಲೆಯನ್ನು ತಪಾಸಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಕಾಯಿದೆಯು ಉದ್ಯೋಗ ಆಧಾರಿತ ವಲಸೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ. ಪ್ರತಿ ದೇಶಕ್ಕೆ ವೀಸಾ ವಿತರಣೆ ಮೇಲಿನ ಮಿತಿಯನ್ನು ತೆಗೆದುಹಾಕಲಾಗುತ್ತದೆ. ಅಮೆರಿಕದಲ್ಲಿ ಪದವಿ ಪಡೆದವರಿಗೆ ಅಲ್ಲಿಯೇ ಕೆಲಸ ಮಾಡಲು ಹಾಗೂ ಕಡಿಮೆ ವೇತನದ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಗ್ರೀನ್‌ ಕಾರ್ಡ್‌ ಪಡೆಯಲು ಹೆಚ್ಚಿನ ಅವಕಾಶ ಒದಗಿಸುತ್ತದೆ. ಅಲ್ಲದೇ ಉದ್ಯೋಗದಲ್ಲಿರುವವರ ಅವಲಂಬಿ ತರಿಗೆ ಹಾಗೂ ಅವರ ಮಕ್ಕಳಿಗೆ
ಸುಲಭವಾಗಿ ಎಚ್‌-1ಬಿ ವೀಸಾ ಸಿಗಲಿದೆ. ಒಮ್ಮೆ ಎಚ್‌-1ಬಿ ವೀಸಾ ವಿತರಿಸಿದರೆ, ಅದರ ಸಿಂಧುತ್ವವು
ಮೂರು ವರ್ಷಗಳವರೆಗೆ ಇರಲಿದೆ.

ಈ ವಿಧೇಯಕವು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರಾಯೋಗಿಕ ಕಾರ್ಯಕ್ರಮವನ್ನು
ರೂಪಿಸುತ್ತದೆ. ಅಲ್ಲದೇ ಅಮೆರಿಕನ್‌ ಉದ್ಯೋಗಿಗಳೊಂದಿಗಿನ ಸ್ಪರ್ಧೆಯಿಂದ ವಲಸಿಗರನ್ನು ರಕ್ಷಿಸಲು, ಉನ್ನತ
ಕುಶಲತೆಯ ವಲಸೆ ಉದ್ಯೋಗಿಗಳಿಗೆ ಹೆಚ್ಚಿನ ವೇತನವನ್ನು ಪ್ರೋತ್ಸಾಹಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next