Advertisement

ಕವಲು ದಾರಿಯಲ್ಲಿ ಪ್ರಸ್ತುತ ಶಿಕ್ಷಣ

12:18 PM Nov 25, 2017 | Team Udayavani |

ಮೈಸೂರು: ಪ್ರಸ್ತುತ ಶಿಕ್ಷಣ ಕವಲು ದಾರಿಯಲ್ಲಿದ್ದು, ಉಳ್ಳವರಿಗೆ ಒಂದು ರೀತಿ ಮತ್ತು ಬಡವರಿಗೆ ಮತ್ತೂಂದು ರೀತಿಯ ಶಿಕ್ಷಣ ನಡೆಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ನಡೆದ ಮೊದಲ ಮೊದಲ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಅವರು ಶಿಕ್ಷಣ: ವರ್ತಮಾನದ ಸವಾಲು ಕುರಿತು ಮಾತನಾಡಿದರು.

Advertisement

ಇಂತಹ ದ್ವಿಮುಖ ಶಿಕ್ಷಣ ವ್ಯವಸ್ಥೆಯಿಂದ ಮುಂದೊಂದು ದಿನ ಉಳ್ಳವರು ಮತ್ತು ಇಲ್ಲದವರು ಎಂಬ ಶಿಕ್ಷಣ ಪದ್ಧತಿ ಜಾರಿ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಸರ್ಕಾರಿ ಶಾಲೆಗಳು ಸಬಲೀಕರಣಗೊಳ್ಳಬೇಕಿದ್ದರೆ ಮೊದಲು ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಉಳ್ಳವರ ಮಕ್ಕಳಂತೆ ಬಡವರ ಮಕ್ಕಳಿಗೂ ಶಿಕ್ಷಣ ದೊರೆಯಬೇಕೆಂಬ ಕಾರಣಕ್ಕೆ ಆರ್‌ಟಿಇ ಕಾಯ್ದೆ ಜಾರಿಗೊಳಿಸಿದರು.

ಆದರೆ ಕಾನ್ವೆಂಟ್‌ ಶಾಲೆಗಳಲ್ಲಿ ಆರ್‌ಟಿಯಡಿ ಸೀಟು ಪಡೆದ ಮಕ್ಕಳನ್ನು ಕೀಳರಿಮೆಯಿಂದ ಬದುಕುವಂತ ದುಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆರ್‌ಟಿಇಯಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದ ಮಕ್ಕಳೊಂದಿಗೆ ಶ್ರೀಮಂತರ ಮಕ್ಕಳನ್ನು ಸೇರಲು ಬಿಡದ ವಾತಾವರಣ ನಿರ್ಮಿಸಲಾಗುತ್ತಿದೆ. ಅವರನ್ನು ಪ್ರವಾಸಕ್ಕೆ ಕರೆದೊಯ್ಯದೆ ಇರುವುದು,

ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡುವುದು ಹೀಗೆ ಹಲವು ರೀತಿಯಲ್ಲಿ ಆ ಮಕ್ಕಳಲ್ಲಿ ಕೀಳರಿಮೆ ಬರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಇದರಿಂದ ಉತ್ತಮ ಸಮಾಜದ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.  ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕುವಂತಾಗಬೇಕು.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುವ ಮುನ್ನ ಅವು ಸುರಕ್ಷಿತವಾಗಿರಬೇಕು. ಅಲ್ಲಿ ಮಕ್ಕಳು ಸುರಕ್ಷಿತವಾಗಿ ಕಲಿಯಬಹುದು. ಸರ್ಕಾರಿ ಶಾಲೆಗಳಲ್ಲಿ ಮೊದಲು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದು ಅಗತ್ಯ. ಇದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಕನ್ನಡ ಮಾಧ್ಯಮ: ಉದ್ಯೋಗವಕಾಶಗಳು ಕುರಿತು ವಿಷಯ ಮಂಡಿಸಿದ ಡಾ.ವಿಷ್ಣುಕಾಂತ ಚಟಪಲ್ಲಿ, ಕನ್ನಡ ಶಿಕ್ಷಣದಿಂದ ಉದ್ಯೋಗಗಳು ಸಿಗುವಂತಾಗಬೇಕು. ಅದು ಜೀವನದ ಗುಣಮಟ್ಟ, ಉತ್ಕೃಷ್ಟತೆಗೆ ಅಗತ್ಯವಾಗಿದೆ. ಯಾವಾಗ ಶಿಕ್ಷಣ ಉದ್ಯೋಗಮುಖೀಯಾಗುತ್ತದೋ ಅಂದು ಕನ್ನಡ ಉಳಿಯುತ್ತದೆ ಎಂದರು.  

ಪ್ರಾಥಮಿಕ ಶೈಕ್ಷಣಿಕ ಪ್ರಗತಿಗೆ ಇಚ್ಛಾಶಕ್ತಿ ಕೊರತೆ: ಶಿಕ್ಷಣ ತಜ್ಞ ಟಿ.ಎಂ. ಕುಮಾರ್‌ ಪ್ರಾಥಮಿಕ ಶಿಕ್ಷಣ: ದೂರವಾಗುತ್ತಿರುವ ಕನ್ನಡ ವಿಷಯದ ಕುರಿತು ವಾದ ಮಂಡಿಸಿ, ಬಂಡವಾಳದ ಆಧಾರದ ಮೇಲೆ ಶೈಕ್ಷಣಿಕ ಅಭಿವೃದ್ಧಿ ನಿರ್ಧಾರದ ಮೇಲೆ ಶೈಕ್ಷಣಿಕ ಅಭಿವೃದ್ಧಿ ನಿರ್ಧಾರವಾಗುತ್ತದೆ ಹೊರತು ಸದ್ಭಾವನೆಯಿಂದ ಅಲ್ಲ.

ಪ್ರಾಥಮಿಕ ಶೈಕ್ಷಣಿಕ ಪ್ರಗತಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದ ಅವರು, ಸರ್ಕಾರಿ ಶಾಲೆಗಳ ಮಕ್ಕಳನ್ನು ಆರ್‌ಟಿ ಇ ಯೋಜನೆಯಡಿ ವಿಮುಖಗೊಳಿಸಲಾಗುತ್ತಿದೆ. ನಮ್ಮ ಹಣವನ್ನು ಖಾಸಗಿ ಶಾಲೆಗಳಿಗೆ ಕೊಟ್ಟು ಸರ್ಕಾರಿ ಶಾಲೆಗಳನ್ನು ಹಾಳು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next