Advertisement

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಿದ್ಧತೆ

03:44 PM May 13, 2019 | pallavi |

ಹಾವೇರಿ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 24 ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಬೇಕಾದ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು ಇನ್ನೊಂದು ವಿಶೇಷ ತರಬೇತಿಗೆ ತಯಾರಿ ನಡೆದಿದೆ. ಜೂನ್‌ 1ರಿಂದಲೇ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಆರಂಭವಾಗಲಿದೆ.

ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ದುಬಾರಿ ಶುಲ್ಕ, ಡೊನೇಷನ್‌ ಹೊರೆ ಭರಿಸಲಾಗದೆ ಬಡ ಮಕ್ಕಳು ಅನಿವಾರ್ಯವಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಯಾಗುತ್ತಿದ್ದರು. ಸರಕಾರವೇ ಈಗ ಉಚಿತವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಆಂಗ್ಲಮಾಧ್ಯಮ ಆರಂಭಿಸುತ್ತಿರುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎಲ್ಲೆಲ್ಲಿ ಇಂಗ್ಲಿಷ್‌ ಶಾಲೆಗಳು?: ಜಿಲ್ಲೆಯಲ್ಲಿ ಒಟ್ಟು 24 ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಬ್ಯಾಡಗಿ ಕ್ಷೇತ್ರದಲ್ಲಿ ಮೂರು ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಬುಡಪನಹಳ್ಳಿ, ಬಿಸಲಹಳ್ಳಿ ಹಿ.ಪ್ರಾ. ಶಾಲೆ ಹಾಗೂ ಬ್ಯಾಡಗಿಯ ಕೆ.ಪಿ.ಎಸ್‌. ಶಾಲೆಯಲ್ಲಿ ಆಂಗ್ಲಮಾಧ್ಯಮ ವಿಭಾಗ ತೆರೆದುಕೊಳ್ಳಲಿದೆ.

ಹಾನಗಲ್ಲ ತಾಲೂಕಿನಲ್ಲಿ ಒಟ್ಟು ನಾಲ್ಕು ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಜಿ.ಎಂ.ಪಿ.ಎಸ್‌. ಆಡೂರ, ಎಂ.ಪಿ.ಎಸ್‌. ಹಾನಗಲ್, ಬೆಳಗಾಲಪೇಟೆಯ ಉನ್ನತೀಕರಿಸಿದ ಆರ್‌ಎಂಎಸ್‌ಎ ಶಾಲೆ, ವರ್ದಿಯ ಜಿ.ಎಚ್.ಪಿ.ಎಸ್‌. ಶಾಲೆಯಲ್ಲಿ ಆಂಗ್ಲಮಾಧ್ಯಮ ಶಾಲೆ ತಲೆ ಎತ್ತಲಿವೆ.

Advertisement

ಹಾವೇರಿ ತಾಲೂಕಿನಲ್ಲಿ ಒಟ್ಟು ಐದು ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಜಿ.ಎಂ.ಪಿ.ಎಸ್‌. ಕಬ್ಬೂರ, ಎಚ್.ಪಿ.ಯು.ಎಸ್‌. ನಂ.4 ನಾಗೇಂದ್ರಮಟ್ಟಿ, ಜಿ.ಎಂ.ಪಿ.ಎಸ್‌. ನಂ.2 ಹಾವೇರಿ, ಎಚ್.ಪಿ.ಜಿ.ಎಸ್‌. ಕರ್ಜಗಿ, ಜಿ.ಎಚ್.ಪಿ.ಎಸ್‌. ಕೂರಗುಂದದಲ್ಲಿ ಆಂಗ್ಲಮಾಧ್ಯಮ ಶಾಲೆ ಆರಂಭವಾಗಲಿವೆ.

ಹಿರೇಕೆರೂರು ತಾಲೂಕಿನಲ್ಲಿ ಒಟ್ಟು ನಾಲ್ಕು ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಎಂ.ಕೆ.ಬಿ.ಎಸ್‌. ಹಿರೇಕೆರೂರ, ಎಚ್.ಪಿ.ಎಸ್‌. ಕಡೂರ, ಎಚ್.ಪಿ.ಎಸ್‌. ದೂದೀಹಳ್ಳಿ, ಕೆ.ಪಿ.ಎಸ್‌. ನೂಲಗೇರಿಯಲ್ಲಿ ಆಂಗ್ಲಮಾಧ್ಯಮ ಶಾಲೆ ತೆರೆಯಲಾಗುತ್ತಿದೆ. ರಾಣಿಬೆನ್ನೂರು ತಾಲೂಕಿನಲ್ಲಿ ಒಟ್ಟು ನಾಲ್ಕು ಆಂಗ್ಲಮಾಧ್ಯಮ ಶಾಲೆಗಳು ಆರಂಭವಾಗಲಿವೆ. ಜಿ.ಎಚ್.ಪಿ.ಎಸ್‌. ಇಟಗಿ, ಎಚ್.ಪಿ.ಎಸ್‌. ನಂ.17 ಮಾರುತಿ ನಗರ ರಾಣಿಬೆನ್ನೂರ, ಜಿ.ಎಚ್.ಪಿ.ಎಸ್‌. ಹರನಗಿರಿ, ಜಿ.ಎಂ.ಪಿ.ಎಸ್‌. ಅರೇಮಲ್ಲಾಪೂರ ಶಾಲೆಯಲ್ಲಿ ಆಂಗ್ಲಮಾಧ್ಯಮ ಶಾಲೆ ಆರಂಭವಾಗಲಿವೆ.

ಸವಣೂರು ತಾಲೂಕಿನಲ್ಲಿ ಎರಡು ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶುರುವಾಗಲಿದೆ. ಮಜೀದ್‌ ಕರ್ನಾಟಕ ಪಬ್ಲಿಕ್‌ ಶಾಲೆ ಸವಣೂರ, ಎಚ್.ಪಿ.ಎಸ್‌. ತೆಗ್ಗಿಹಳ್ಳಿಯಲ್ಲಿ ಆಂಗ್ಲಮಾಧ್ಯಮ ಶಾಲೆ ತೆರೆಯಲಾಗುತ್ತಿದೆ.

ಶಿಗ್ಗಾವಿ ತಾಲೂಕಿನಲ್ಲಿ ಎರಡು ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶುರುವಾಗಲಿದೆ. ಕೆ.ಪಿ.ಎಸ್‌ ಶಾಲೆ ನಾರಾಯಣಪೂರ, ಎಂ.ಕೆ.ಬಿ.ಎಸ್‌. ಶಿಗ್ಗಾವಿಯಲ್ಲಿ ಆಂಗ್ಲಮಾಧ್ಯಮ ಶಾಲೆ ತೆರೆಯಲಾಗುತ್ತಿದೆ.

ಸುಸಜ್ಜಿತ ಕಟ್ಟಡ, ಪ್ರತ್ಯೇಕ ಕೊಠಡಿ ಸೇರಿದಂತೆ ಇನ್ನಿತರ ಸೌಕರ್ಯ ಇರುವ, ಹೆಚ್ಚಿನ ಮಕ್ಕಳು ದಾಖಲಾಗಬಹುದಾದ ಶಾಲೆಗಳನ್ನು ಆಂಗ್ಲಮಾಧ್ಯಮಕ್ಕಾಗಿ ಆಯ್ಕೆ ಮಾಡಲಾಗಿದೆ. ಇಂಥ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಶಾಲಾ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯಲಾಗುತ್ತಿದೆ. ಸರ್ಕಾರ ಆಂಗ್ಲಮಾಧ್ಯಮ ಮಕ್ಕಳಿಗೆ ಪ್ರತ್ಯೇಕ ಬಣ್ಣದ ಸಮವಸ್ತ್ರದ ಬಗ್ಗೆ ಸೂಚನೆ ನೀಡದೆ ಇದ್ದರೂ ಶಾಲಾಭಿವೃದ್ಧಿ ಸಮಿತಿಯವರು ಸ್ವಯಂಪ್ರೇರಣೆಯಿಂದ ಪ್ರತ್ಯೇಕ ಬಣ್ಣದ ಸಮವಸ್ತ್ರ ಮಾಡಿಕೊಳ್ಳಲು ನಿರ್ಧರಿಸಿವೆ. ಒಟ್ಟಾರೆ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ.

ಇದೇ ಮೊದಲ ಬಾರಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ಶಾಲೆಗೆ ಇಬ್ಬರು ಶಿಕ್ಷಕರನ್ನು ತರಬೇತುಗೊಳಿಸಲಾಗುತ್ತಿದೆ. ಆಯಾ ಶಾಲೆಯ ಶಿಕ್ಷಕರಿಗೆ ಹಾಗೂ ಅಕ್ಕ ಪಕ್ಕದ ಶಾಲೆ ಆಸಕ್ತ ಶಿಕ್ಷಕರಿಗೆ, ಇಂಗ್ಲಿಷ್‌ ವಿಷಯದಲ್ಲಿ ಪದವಿ ಪಡೆದವರಿಗೆ, ಆಸಕ್ತ ಶಿಕ್ಷಕರನ್ನು ಆಯ್ದು ಅವರಿಗೆ ಡಯಟ್ ಮೂಲಕ ತರಬೇತಿ ನೀಡಲಾಗುತ್ತಿದೆ. ಇನ್ನೊಂದು ವಿಶೇಷ ತರಬೇತಿಗೆ ಸಿದ್ಧತೆ ನಡೆದಿದೆ.

ಶಿಕ್ಷಕರಿಗೆ ವಿಶೇಷ ತರಬೇತಿ

ಇದೇ ಮೊದಲ ಬಾರಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ಶಾಲೆಗೆ ಇಬ್ಬರು ಶಿಕ್ಷಕರನ್ನು ತರಬೇತುಗೊಳಿಸಲಾಗುತ್ತಿದೆ. ಆಯಾ ಶಾಲೆಯ ಶಿಕ್ಷಕರಿಗೆ ಹಾಗೂ ಅಕ್ಕ ಪಕ್ಕದ ಶಾಲೆ ಆಸಕ್ತ ಶಿಕ್ಷಕರಿಗೆ, ಇಂಗ್ಲಿಷ್‌ ವಿಷಯದಲ್ಲಿ ಪದವಿ ಪಡೆದವರಿಗೆ, ಆಸಕ್ತ ಶಿಕ್ಷಕರನ್ನು ಆಯ್ದು ಅವರಿಗೆ ಡಯಟ್ ಮೂಲಕ ತರಬೇತಿ ನೀಡಲಾಗುತ್ತಿದೆ. ಇನ್ನೊಂದು ವಿಶೇಷ ತರಬೇತಿಗೆ ಸಿದ್ಧತೆ ನಡೆದಿದೆ.
Advertisement

Udayavani is now on Telegram. Click here to join our channel and stay updated with the latest news.

Next