ಹೊಸಬೆಟ್ಟು: ಇಲ್ಲಿನ ಶ್ರೀ ರಾಘ ವೇಂದ್ರ ಮಠದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಮೇ 19ರಿಂದ 26ರ ವರೆಗೆ ನಡೆಯಲಿದ್ದು ಈ ಪ್ರಯುಕ್ತ ಸಾಂಸ್ಕೃತಿಕ ವೇದಿಕೆ, ಉಗ್ರಾಣದ ವ್ಯವಸ್ಥೆ, ಪಾಕಶಾಲೆ, ಅನ್ನಸಂತರ್ಪಣೆಗೆ ಸ್ಥಳಾವಕಾಶ, ಕಾರ್ ಪಾರ್ಕಿಂಗ್‌ಗಳಿಗೆ ಬೇಕಾದ ಸಕಲ ಸುವ್ಯವಸ್ಥೆ ಸಿದ್ಧತೆಯನ್ನು ಮಾಡಲಾಗುತ್ತಿದೆ ಎಂದು ಬ್ರಹ್ಮಕಲ ಶೋತ್ಸವ ಸಮಿತಿ ವ್ಯವಸ್ಥಾಪನ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ನುಡಿದರು.
ಹೊಸಬೆಟ್ಟು ಗುರುರಾಘವೇಂದ್ರ ಮಠದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಜರಗಿದ ಮಾತೃ ಮಂಡಳಿ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಿದ್ಧತೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಸಹಕಾರ ಅಗತ್ಯ
ರಾಜಗೋಪುರದ ಉದ್ಘಾಟನೆಯು ಮೇ 9ರಂದು ನಡೆಯಲಿದ್ದು, ಕೆಲಸ ಕಾರ್ಯ ಅತ್ಯಂತ ಶೀಘ್ರ ವಾಗಿ ಪೂರ್ಣಗೊಳ್ಳುತ್ತಿದೆ. ಬ್ರಹ್ಮಕಲಶೋತ್ಸವ ಸಮಯದಲ್ಲಿ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವ ಸ್ಥಾನ, ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನಗಳಿಂದ ಹೊರೆಕಾಣಿಕೆ ಮೆರವ ಣಿಗೆಯು ಹೊಸಬೆಟ್ಟು ರಾಘ ವೇಂದ್ರ ಮಠ ಸೇರಲಿದೆ.
ಈ ಎಲ್ಲ ಕಾರ್ಯಗಳಿಗೂ ಮಾತೆಯರ, ಮಹಿಳಾ ಸಂಘದವರ ಸಹಕಾರ ಕೂಡ ಅಗತ್ಯವಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಬದವಿದೆ ಹೊಸಬೆಟ್ಟು, ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು ಇದರ ಆನುವಂಶಿಕ ಆಡಳಿತ ಮೊಕ್ತೇಸರ ರಾಘವೇಂದ್ರ ಎಚ್.ವಿ., ಟಿ. ಕೃಷ್ಣಮೂರ್ತಿ ರಾವ್, ಮಹಾಬಲ ಪೂಜಾರಿ ಕಡಂಬೋಡಿ, ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಕಾರ್ಯದರ್ಶಿ ಬಂಟ್ವಾಳ ಮೋನಪ್ಪ ಗೌಡ, ಕಾರ್ಯಾಧ್ಯಕ್ಷ ಪಿ.ಎಚ್. ಆನಂದ, ರಾಮಕೃಷ್ಣ ಸಾಲ್ಯಾನ್, ಹರಿಶ್ಚಂದ್ರ ಎಚ್., ಸುಂದರ ಗೌಡ ಬಲ್ಲಾಳ್, ಮಾತೃ ಮಂಡಳಿ ಅಧ್ಯಕ್ಷೆ ಇಂದುಮತಿ, ಗೌರವಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ ರಾವ್, ಉಪಾಧ್ಯಕ್ಷೆ ಗೌರಿ ರಾಘವೇಂದ್ರ, ಹರಿಣಿ ಜಯಶಂಕರ್, ಹೇಮಾ ಎಸ್. ರಾವ್, ಮಹಾಲಕ್ಷ್ಮೀ ದಿವಾಕರ್, ಶೋಭಾ ಚಿತ್ರಾಪುರ, ಶ್ಯಾಮಲಾ ಜಿ. ರಾವ್, ಜಯಂತಿ ಎಸ್. ಹೊಳ್ಳ, ಕಾರ್ಯಧ್ಯಕ್ಷೆ ಜಯಶ್ರೀ ರಟ್ಟಿಹಳ್ಳಿ, ರಮಾ ವೆಂಕಟ್ರಾವ್, ಸುಶೀಲಾ ರಾಮಕೃಷ್ಣ, ಸುಮತಿ ಹಂದೆ, ಲಲಿತಾ ಭಟ್, ಸುಮಂಗಳಾ ಹೇರಳೆ, ವಿನುತಾ, ಶೋಭಾ ಆರ್. ರಾವ್, ಜ್ಯೋತಿ ರವಿಕುಮಾರ್, ಮೋಹಿನಿ ಪಿ. ಸಾಲ್ಯಾನ್, ಶೋಭಾ ಸಾಲ್ಯಾನ್, ಪ್ರಬಿತಾ ಸಿ. ಸಾಲ್ಯಾನ್, ವನಜಾ ಎಸ್. ರಾವ್, ಗೀತಾ ಆಚಾರ್, ಕೆ. ಕಮಲಾ, ವೀಣಾ ಜಿತೇಂದ್ರಿಯ, ಲತಾ ಸುಧೀರ್ ಶ್ರೀಯಾನ್, ನಿವೇದಿತಾ ಅಮೀನ್, ಆಶಾ ಡಿ. ಕರ್ಕೇರ, ಉಮಾ ಜಿ. ಭಟ್, ಕಮಲಾಕ್ಷಿ ಶ್ರೀಯಾನ್, ಮೋಹಿನಿ ಶ್ರೀಯಾನ್, ಲೀಲಾವತಿ ಕಾಂಚನ್, ಶಶಿಕಲಾ ನಾಗೇಶ್, ಗುಡ್ಡೆಕೊಪ್ಲ ಮೊಗವೀರ ಮಹಿಳಾ ಸಮಾಜದ ಸದಸ್ಯೆಯರು ಉಪಸ್ಥಿತರಿದ್ದರು.ಕೆ. ಕಲಾವತಿ ನಿರೂಪಿಸಿದರು. ಶ್ರೀನಿವಾಸ್ ಕುಳಾಯಿ ವಂದಿಸಿದರು.