Advertisement
2020ನೇ ವರ್ಷದ ವೈರಮುಡಿ ಬ್ರಹ್ಮೋತ್ಸವ ರದ್ದಾದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಅನುಸರಿಸುತ್ತಾ ಬಂದಿರುವ ಪೂಜಾಕೈಂಕರ್ಯ ಪದ್ಧತಿಯ ಕೈಪಿಡಿ ಈಶ್ವರ ಸಂಹಿತೆಯ ಪ್ರಕಾರ ಪ್ರಾಯಶ್ಚಿತ್ತ ಪೂರ್ವಕವಾಗಿ ಸಹಸ್ರ ಕಳಶಾಭಿಷೇಕ ಹಮ್ಮಿಕೊಳ್ಳಲಾಗಿದೆ. 4 ದಿನಗಳ ಈ ಮಹತ್ವಪೂರ್ಣ ಧಾರ್ಮಿಕ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ.
Related Articles
Advertisement
ಸಹಸ್ರ ಕಳಶಾಭಿಷೇಕದಲ್ಲಿ ನಿಗದಿಯಾದದಿನಗಳಂದು ಪೂಜಾ ಕೈಂಕರ್ಯಗಳು ಹೇಗಿರಬೇಕು. ಯಾವ ರೀತಿ ಕಳಶಾಭಿಷೇಕ ಮಾಡಬೇಕು. ಕಳಶಗಳನ್ನು ಯಾವ ಸ್ಥಳದಲ್ಲಿ ಸ್ಥಾಪಿಸಬೇಕು ಎಂಬುದನ್ನು ಈಶ್ವರ ಸಂಹಿತೆಯ ಆಧಾರದಲ್ಲಿ ಪಾಂಚರಾತ್ರಾಗಮ ಪಂಡಿತರೊಂದಿಗೆ ಚರ್ಚಿಸಿ, ಧಾರ್ಮಿಕದತ್ತಿ ಇಲಾಖೆಯ ಆಯುಕ್ತರ ಕಚೇರಿಯಿಂದ ರೂಪುರೇಷೆ ಸಿದ್ಧ ಮಾಡಲಾಗುತ್ತದೆ ಎಂದು ಧಾರ್ಮಿಕದತ್ತಿ ಇಲಾಖೆಯ ಆಗಮ ಪಂಡಿತ ವಿಜಯಕುಮಾರ್ ತಿಳಿಸಿದ್ದಾರೆ.
ಮೇಲುಕೋಟೆಯಲ್ಲಿ ನಡೆಸಿದ ಸಭೆಯಲ್ಲಿ ಮಹೋತ್ಸವಕ್ಕೆ ದಿನಾಂಕ ನಿಗದಿ ಮಾಡಿ ಧಾರ್ಮಿಕ ಪರಂಪರೆಗೆ ಚ್ಯುತಿ ಬರದಂತೆ ಮಹೋತ್ಸವಗಳನ್ನು ನಡೆಸಬೇಕು ಎಂದು ತೀರ್ಮಾನಿಸಲಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಾನಿಗಳನ್ನು ಗುರುತಿಸಲಾಗಿತ್ತು. ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ ಮಾಡಿರಲಿಲ್ಲ.
ಹೀಗಾಗಿ ಒಂದೆರಡು ದಿನಗಳಲ್ಲಿ ಪಾಂಚಾರಾತ್ರಗಮದ ಪ್ರಖ್ಯಾತ ಪಂಡಿತರೊಂದಿಗೆ ಚರ್ಚಿಸಿ, ಈಶ್ವರ ಸಂಹಿತೆಯಲ್ಲಿ ಉಲ್ಲೇಖೀಸಿದ ಆಧಾರ ಪರಾಮರ್ಶಿಸಿ ಮಹೋತ್ಸವದಲ್ಲಿ ಕೈಗೊಳ್ಳಬೇಕಾದ ವಿಧಿ ವಿಧಾನ ನಿರ್ಧರಿಸಲಾಗುತ್ತದೆ. ಸಹಸ್ರ ಕಳಶಾಭಿಷೇಕ ಮಾ.5ರಂದು ವಿದ್ಯುಕ್ತವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.