Advertisement

ಮೀನುಗಾರಿಕೆ ಆರಂಭಕ್ಕೆ ತಯಾರಿ; ದಕ್ಕೆಯಲ್ಲಿ ಗರಿಗೆದರಿದ ಚಟುವಟಿಕೆ!

10:04 PM Jul 28, 2021 | Team Udayavani |

ಮಹಾನಗರ: ಮೀನುಗಾರಿಕೆ ಋತು ಮತ್ತೆ ಆರಂಭಗೊಳ್ಳುತ್ತಿದ್ದು, ಆ. 1ರಿಂದ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳು ಕಡಲಿಗಿಳಿಯಲು ಸಿದ್ಧತೆ ನಡೆಸಿವೆ. ಹೀಗಾಗಿ ಮಂಗಳೂರಿನ ಮೀನುಗಾರಿಕೆ ದಕ್ಕೆಯಲ್ಲಿ ಬಿರುಸಿನ ಚಟುವಟಿಕೆ ಕೂಡ ಶುರುವಾಗಿದೆ.

Advertisement

ಆ. 1ರಿಂದಲೇ ಬೋಟ್‌ಗಳು ಕಡ ಲಿಗಿಳಿಯುವುದು ಸದ್ಯದ ಪ್ರಕಾರ ಅನುಮಾನವಾದರೂ ಆಗಸ್ಟ್‌ ಮೊದಲ ವಾರದ ಬಳಿಕ ಹಂತ ಹಂತವಾಗಿ ಬೋಟ್‌ಗಳು ಮೀನುಗಾರಿಕೆ ಆರಂಭಿಸುವ ಲಕ್ಷಣ ಕಂಡುಬಂದಿದೆ. ಇದಕ್ಕಾಗಿ ಎಲ್ಲ ಬೋಟ್‌ಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದ್ದು, ಅಂತಿಮ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಆಳ ಸಮುದ್ರ ಮೀನುಗಾರಿಕೆಯಲ್ಲಿ ಆದಾಯದ ಶೇ. 50ರಷ್ಟು ಭಾಗ ಬೋಟ್‌ಗಳಿಗೆ ಬಳಸುವ ಡೀಸೆಲ್‌ಗೆ ಖರ್ಚಾಗುವ ಹೊರೆ, ಹವಾಮಾನ ವೈಪರಿತ್ಯದ ಭಯ, ಸಮುದ್ರ ಮಾಲಿನ್ಯ ಸಹಿತ ವಿವಿಧ ಆತಂಕದಿಂದಾಗಿ ಕೆಲವು ವರ್ಷದಿಂದ ಮೀನುಗಾರಿಕೆ ಯಶಸ್ವಿಯಾಗಿ ನಡೆದಿರಲಿಲ್ಲ. ಜತೆಗೆ ಕಳೆದ ವರ್ಷದಿಂದ ಎದುರಾದ ಲಾಕ್‌ಡೌನ್‌ನಿಂದ ಮೀನುಗಾರಿಕೆಗೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇಂತಹ ಸಮಸ್ಯೆ- ಸವಾಲುಗಳನ್ನು ಎದುರಿಸುತ್ತ ಈ ಬಾರಿ ಹೊಸ ಆಶಾಭಾವದೊಂದಿಗೆ ಬೋಟ್‌ಗಳು ಕಡಲಿಗಿಳಿಯಲು ಸಿದ್ಧತೆ ನಡೆಸಲಾಗಿವೆ.

ಮಂಗಳೂರು ದಕ್ಕೆಯಿಂದ ಸಾವಿ ರಾರು ಮೀನುಗಾರಿಕೆ ಬೋಟ್‌ಗಳು ಕಾರ್ಯನಿರ್ವಹಿಸುತ್ತಿದ್ದು ಹೊರರಾಜ್ಯದ ಕಾರ್ಮಿಕರು ಅಧಿಕವಿರುತ್ತಾರೆ. ಮೀನು ಗಾರಿಕೆ ರಜೆ ಕಾರಣದಿಂದ ಮೇ ಅಂತ್ಯ ದಲ್ಲಿ ಊರಿಗೆ ತೆರಳಿದ ಅವರು ಇದೀಗ ತಂಡ ತಂಡವಾಗಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ.

ಮೀನುಗಾರರಿಗೆ ಕರ ರಹಿತ ದರದ ಡೀಸೆಲ್‌:

Advertisement

2015-16ರಿಂದ ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್‌ ಡೀಸೆಲ್‌ ಮೇಲಿನ ಮಾರಾಟ ಕರವನ್ನು ಮರುಪಾವತಿಸಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿ ಯನ್ನಾಗಿಸಲು 2021-22ನೇ ಸಾಲಿನಿಂದ “ಡೀಸೆಲ್‌ ಡೆಲಿವರಿ ಪಾಯಿಂಟ್‌’ನಲ್ಲೇ ಕರ ರಹಿತ ದರದಲ್ಲಿ ಡೀಸೆಲ್‌ ಅನ್ನು ವಿತರಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಹೀಗಾಗಿ ಸಬ್ಸಿಡಿ ಪಡೆಯಲು ಸಮಸ್ಯೆ ಅನುಭವಿಸುತ್ತಿರುವ ಮೀನುಗಾರರಿಗೆ ನೆಮ್ಮದಿಯ ಸುದ್ದಿ ಸರಕಾರ ನೀಡಿದೆ. ಇದು ಆಗಸ್ಟ್‌ನಿಂದಲೇ ಜಾರಿಯಾಗುತ್ತಿರುವುದು ಮೀನುಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ತೈಲ ಕಂಪೆನಿಗೆ “ಕರ’ ನೀಡಲಿದೆ ಸರಕಾರ! :

ಒಂದು ಬೋಟ್‌ ಒಮ್ಮೆ ಮೀನುಗಾರಿಕೆಗೆ ತೆರಳಲು 6,500 ಲೀ. ಡೀಸೆಲ್‌ ಬೇಕು. 1 ಲೀಟರ್‌ ಡೀಸೆಲ್‌ ದರದಲ್ಲಿ ಒಳಗೊಂ ಡಿರುವ “ಮಾರಾಟ ಕರ’ವನ್ನು ಸಬ್ಸಿಡಿ ರೂಪ ದಲ್ಲಿ ಸರಕಾರ ಮೀನುಗಾರರಿಗೆ ನೀಡುತ್ತಾ ಬಂದಿದೆ. ಪ್ರತೀ ತಿಂಗಳಿಗೆ ಒಂದು ದೊಡ್ಡ ಬೋಟ್‌ಗೆ ಗರಿಷ್ಠ 9,000 ಲೀಟರ್‌ ಡೀಸೆಲ್‌ವರೆಗೆ ಸಬ್ಸಿಡಿ ದೊರೆಯುತ್ತದೆ.

ಆ. 1ರಿಂದ ಮೀನುಗಾರಿಕೆ ಅನುಮಾನ! :

ಸರಕಾರದ ಅನುಮತಿಯ ಪ್ರಕಾರ ಆ. 1ರಿಂದ ಮೀನುಗಾರಿಕೆ ಆರಂಭ ವಾಗಲಿದೆ. ಆದರೆ ಮೀನುಗಾರಿಕೆ ಬೋಟ್‌ಗಳ ಮಾಲಕರ ಡೀಸೆಲ್‌ ಪಾಸ್‌ಬುಕ್‌ ಸಂಬಂಧಿತ ಕೆಲವು ಸಮಸ್ಯೆ, ಕರ ರಹಿತ ದರದ ಡೀಸೆಲ್‌ ವಿಚಾರದಲ್ಲಿ ಮೀನುಗಾರರಿಗೆ ಕೆಲವು ಗೊಂದಲದ ಕಾರಣದಿಂದ ಬಹುತೇಕ ಬೊಟ್‌ಗಳು ಆ. 1ರಿಂದಲೇ ಕಡಲಿಗಿಳಿಯುವುದು ಬಹುತೇಕ ಅನುಮಾನ. ಈ ಬಗ್ಗೆ ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಮಹತ್ವದ ಸಭೆ ಜು. 31ರಂದು ಮಂಗಳೂರಿ ನಲ್ಲಿ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಮಧ್ಯೆ ಪರ್ಸಿನ್‌ ಮೀನುಗಾರರ ಸಂಘದ ಮಹತ್ವದ ಸಭೆ ಆ. 4ರಂದು ನಡೆಯಲಿದ್ದು, ಆ. 6ರಂದು ವಿಶೇಷ ಪೂಜೆ ಆಗಿ ಆ. 8ರ ಬಳಿಕ ಮೀನುಗಾರಿಕೆ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.  ಕಳೆದ ವರ್ಷ ಆಗಸ್ಟ್ ನಲ್ಲಿ  ಪ್ರಾರಂಭವಾಗಬೇಕಾದ ಮೀನು ಗಾರಿಕೆ ಕೊರೊನಾದಿಂದ ಸೆಪ್ಟಂಬರ್‌ನಲ್ಲಿ ಆರಂಭವಾಗಿತ್ತು.

ಈ ಹಿಂದೆ ಮಾರಾಟ ಕರ 1 ಲೀ.ಗೆ 8 ಸುಮಾರು ರೂ. ಇದ್ದರೆ, ಈಗ ಈ ಮೊತ್ತ 14 ರೂ.ಗೆ ಏರಿಕೆಯಾಗಿದೆ. ಈ ಮೊತ್ತ ಸಬ್ಸಿಡಿ ರೂಪದಲ್ಲಿ ಸಿಗು ತ್ತಿತ್ತು. ಮುಂದಿನ ದಿನದಲ್ಲಿ ಇದು ಬದಲಾಗಲಿದೆ. ಇದರಂತೆ ಜಿಲ್ಲೆಯ 5 ಅನುಮೋದಿತ ಡೀಸೆಲ್‌ ಬಂಕುಗಳಲ್ಲಿ ಮಾರಾಟ ಕರವನ್ನು ಕಡಿತ ಮಾಡಿಯೇ ಮೀನುಗಾರರಿಗೆ ಡೀಸೆಲ್‌ ನೀಡಲಾಗುತ್ತದೆ. ಈ ಕರವನ್ನು ಸರಕಾರವು ಸಂಬಂಧಿತ ತೈಲ ಕಂಪೆನಿಯವರಿಗೆ ನೀಡಲಿದೆ. 2020-21ರ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ 1,924 ಕೋ.ರೂ. ಮೌಲ್ಯದ 1,39,714 ಟನ್‌ ಮೀನು ಲಭ್ಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ (2,031 ಕೋ.ರೂ. ಮೌಲ್ಯದ 1,79,944 ಟನ್‌)ಇದು ಕುಸಿತ ಆಗಿತ್ತು.

ಆ. 1ರಿಂದ ಮೀನುಗಾರಿಕೆ ಆರಂಭಿಸಲು ಅನುಮತಿ ಯಿದೆ. ಈ ಬಾರಿ ಮೀನುಗಾರರಿಗೆ ಡೀಸೆಲ್‌ ಡೆಲಿವರಿ ಪಾಯಿಂಟ್‌ನಲ್ಲೇ ಕರರಹಿತ ದರದಲ್ಲಿ ಡೀಸೆಲ್‌ ಅನ್ನು ವಿತರಿಸಲಾಗುತ್ತದೆ. ಆಗಸ್ಟ್‌ ತಿಂಗಳಿಗೆ 1975 ಕೆಎಲ್‌ ತೆರಿಗೆ ರಹಿತ ಡೀಸೆಲ್‌ ಕೂಡ ಮಂಜೂರಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. -ಹರೀಶ್‌, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ-ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next