Advertisement

ವೃತ್ತಿ ಗೌರವ ಕಾಪಾಡಿಕೊಳ್ಳಲು ಸಿದ್ಧಾರೂಢ ಸ್ವಾಮೀಜಿ ಸಲಹೆ

12:37 PM Aug 18, 2018 | |

ವಿಜಯಪುರ: ಒಬ್ಬ ವ್ಯಕ್ತಿ ನಿರಂತರವಾಗಿ ಸೇವೆ ಸಲ್ಲಿಸಿ ವೃತ್ತಿ ಗೌರವ ಕಾಪಾಡುವುದರೊಂದಿಗೆ ಜನರ ಮಧ್ಯದಲ್ಲಿದ್ದುಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡು, ಸಾಂಸ್ಕೃತಿಕ ವಾರಸುದಾರನಾಗಿ ಬದುಕಿನಲ್ಲಿ ಮೌಲ್ಯ ರೂಪಿಸಿಕೊಂಡು ಹೋಗುತ್ತಾನೆ ಎಂದು ಷಣ್ಮುಖಾರೂಢ ಮಠದ ಪೂಜ್ಯ ಅಭಿನವ ಸಿದ್ಧಾರೂಢ ಸ್ವಾಮಿಗಳು ಹೇಳಿದರು.

Advertisement

ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ| ಡಿ.ಆರ್‌. ನಿಡೋಣಿ (ಗುಲಗಂಜಿ) ಅಭಿನಂದನಾ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ
ವಹಿಸಿ ಮಾತನಾಡಿದ ಅವರು, ಡಾ| ನಿಡೋಣಿ 35 ವರ್ಷಗಳ ಕಾಲ ಕಾಲೇಜಿನ ಉಪನ್ಯಾಸಕರಾಗಿ ಯುವ ಪೀಳಿಗೆಗೆ
ಹಿಂದಿನ ಇತಿಹಾಸವನ್ನು ತಿಳಿಸಿದ್ದಾರೆ. ಸ್ವತಃ ಜಮಖಂಡಿ ಸಂಸ್ಥಾನದ ಕುರಿತು ನಿರಂತರ ಅಧ್ಯಯನ ಮಾಡಿ ಪಿ.ಎಚ್‌.ಡಿ. ಗ್ರಂಥ ರಚಿಸಿ, ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ ಎಂದರು.

ಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಎನ್‌.ಜಿ. ಕರೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ಎಂದಿನಿಂದಲೂ ಕಳ್ಳು-ಬಳ್ಳಿಯ ಸಂಬಂಧವಾಗಿದೆ. ಡಾ| ನಿಡೋಣಿಯವರು ಸುಮಾರು 35 ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿ ಮತ್ತು ಅಷೇr ಸರಳ ಜೀವಿ ಎಲ್ಲರನ್ನು ಸಹಕಾರ ಮನೋಭಾವದಿಂದ ಕಾಣುವ ವ್ಯಕ್ತಿಯಾಗಿದ್ದಾರೆ. ಆ ಒಂದು ಪ್ರೀತಿ, ವಿಶ್ವಾಸ ಅಂತಃಕರಣ ಉಳಿಸಿಕೊಂಡಿದ್ದರ ಪರಿಣಾಮವಾಗಿಯೇ, ನಾನು ನಾಲ್ಕು ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

ಡಾ| ನಿಡೋಣಿ ಅವರ ಪಿಎಚ್‌ಡಿ ಗ್ರಂಥ ಪರಿಚಯಿಸಿದ ಎಸ್‌.ಬಿ. ಮಟೋಳಿ, ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಹಲವಾರು ಸಂಸ್ಥಾನಗಳಲ್ಲಿ ಜಮಖಂಡಿ ಸಂಸ್ಥಾನವೂ ಒಂದಾಗಿತ್ತು. ಅಷೇrಯಲ್ಲ ಅದರ ಅ ಪತಿ, ಜನಪರ ಕಾರ್ಯಗಳಿಂದಾಗಿ ದಕ್ಷಿಣ ಮರಾಠಾ ಸಂಸ್ಥಾನದಲ್ಲಿಯೇ ಹೆಸರು ಗಳಿಸಿತ್ತು. ಸ್ವತಂತ್ರ ನಂತರ ಅಖೀಲ ಭಾರತ ಒಕ್ಕೂಟದಲ್ಲಿ ವಿಲಿನವಾದ ದೇಶಿ ಸಂಸ್ಥಾನಗಳಲ್ಲಿಯೇ ಇದೆ ಮೊಟ್ಟ ಮೊದಲನೆಯದು ಇದರಿಂದ ಅಖಂಡ ಭಾರತ ನಿರ್ಮಾಣಕ್ಕೆ ನಾಂದಿಯಾಯಿತು ಎಂದು ಹೇಳಿದರು.
 
ಡಯಟ್‌ನ ಹಿರಿಯ ಉಪನ್ಯಾಸಕ ಆರ್‌. ವೈ. ಕೊಣ್ಣೂರ ಮಾತನಾಡಿದರು. ಉಪನ್ಯಾಸಕ ಸಿ.ಜಿ. ಮಠಪತಿ, ಡಾ| ನಿಡೋಣಿ ಬದುಕು ಮತ್ತು ಸೇವೆ ಕುರಿತು ಮಾತನಾಡಿದರು. ಇದೇ ವೇಳೆ ವೇದಿಕೆ ಮೇಲಿರುವ ನಿಡೋಣಿ ದಂಪತಿಗೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಡಾ| ಎಂ.ಎಸ್‌. ಮಧಭಾವಿ, ಡಾ| ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ, ಎಂ.ಎನ್‌. ಗುಲಗಂಜಿ, ಆರ್‌.ಎ. ಜಹಗೀರದಾರ, ಪ್ರಕಾಶ ಗೊಂಗಡಿ, ಎಸ್‌.ಎ. ಬಿರಾದಾರ(ಕನ್ನಾಳ), ಎ.ಎಸ್‌.ಪಾಟೀಲ, ಜೆ.ಎಸ್‌.ಪೂಜಾರಿ,
ಬಿ.ಆರ್‌.ಗುಲಗಂಜಿ, ಸಿ.ಆರ್‌.ತೊರವಿ, ಬಿ.ಬಿ.ಗಂಗನಳ್ಳಿ, ಎಸ್‌.ಎಸ್‌.ಹೊಸಮನಿ, ಕಿತ್ತೂರ ಹಾಗೂ ನಿಡೋಣಿ ಅವರ ಅಪಾರ ಬಂಧು-ಬಳಗ ಮತ್ತು ಸ್ನೇಹಿತರು ಇದ್ದರು. ಅಶ್ವಿ‌ನಿ ಹಿರೇಮಠ ಪ್ರಾರ್ಥಿಸಿದರು. ಡಾ| ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಶಿವಾನಂದ ನುಚ್ಚಿ ಮತ್ತು ಐ.ಎಸ್‌.ಕಾಳಪ್ಪನವರ ನಿರೂಪಿಸಿದರು. ಪೊ.ಎ.ಬಿ.ಬೂದಿಹಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next