Advertisement

ಅಕ್ರಮ ತನಿಖೆಗೆ ನಡೆದಿದೆ ಸಿದ್ಧತೆ

07:23 AM Feb 16, 2019 | Team Udayavani |

ಬೀದರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಐದು ಎಂಎಸ್‌ಪಿಟಿಸಿ (ಮಹಿಳಾ ಆಹಾರ ಉತ್ಪನ್ನ ಘಟಕ) ಗಳಲ್ಲಿ ಈ ವರೆಗೆ ನಡೆದ ವ್ಯವಹಾರ ಕುರಿತು ಅಧಿಕಾರಿಗಳು ಸೂಕ್ತ ತನಿಖೆ ನಡೆಸಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.

Advertisement

ಜಿಲ್ಲೆಯ ಬೀದರ್‌, ಬಸವಕಲ್ಯಾಣ, ಔರಾದ, ಭಾಲ್ಕಿ ಹಾಗೂ ಹುಮನಾಬಾದ ತಾಲೂಕುಗಳಲ್ಲಿ ಎಂಎಸ್‌ಪಿಟಿಸಿ ಘಟಕಗಳಿದ್ದು, ಆಯಾ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಠಿಕ ಆಹಾರ ಪೂರೈಕೆ ಮಾಡುತ್ತಿವೆ. ಆದರೆ, ಕೆಲ ಘಟಕಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ಹಾಗೂ ಮೇಲಾಧಿಕಾರಿಗಳ ಪರವಾನಗಿ ರಹಿತ ಆಡಳಿತ ನಡೆಸಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದಾರೆ.

ಪ್ರತಿಯೊಂದು ಘಟಗಳಲ್ಲಿ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಮುಖ್ಯ ಸ್ಥರಾಗಿದ್ದು, ಫೆಸಿಲಿಟೇಟರ್‌ (ಪಿಎಫ್‌) ಗಳು ಘಟಕದ ಎಲ್ಲಾ ಕಾರ್ಯಗಳ ಮೇಲೆ
ಉಸ್ತುವಾರಿ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರತಿಯೊಂದು ಘಟಕಗಳು ಸರಿಸುಮಾರು 400ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಠಿಕ ಆಹಾರ ಪೂರೈಕೆ ಮಾಡುತ್ತಿವೆ.

ತಿಂಗಳಿಗೆ ಸರಾಸರಿ 35ರಿಂದ 40 ಲಕ್ಷದ ಆಹಾರ ಪದಾರ್ಥಗಳು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿವೆ. ಈ ಪೈಕಿ ಸರಾಸರಿ 5ರಿಂದ 8 ಲಕ್ಷ ರೂ. ಘಟಕಕ್ಕೆ ಪ್ರತಿ ತಿಂಗಳು ಲಾಭ ಆಗುತ್ತಿದ್ದು, ಸ್ತ್ರೀಶಕ್ತಿ ಸಂಘದ ಮಹಿಳೆಯರು ಅವರು ಮಾಡಿದ ಕೆಲಸದ ಸಂಬಳ ಪಡೆದು ಇನ್ನುಳಿದ ಹಣ ಯಾವ ಕಾರ್ಯಕ್ಕೆ ಖರ್ಚು ಮಾಡಲಾಗುತ್ತಿದೆ. ಯಾವ ವಸ್ತು ಖರೀದಿ ಮಾಡಲಾಗುತ್ತಿದೆ ಎಂಬುದನ್ನು ಲಿಖೀತ ಪತ್ರದ ಮೂಲಕ ಉಪ ನಿರ್ದೇಶಕರ ಪರವಾನಗಿ ಪಡೆಯಬೇಕು ಎಂಬುದು ಘಟಕಗಳ ನಿಯಮವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದೀಗ ಇಲ್ಲಿನ ಕೆಲ ಎಂಎಸ್‌ ಪಿಟಿಸಿಗಳು ನಿಯಮ ಪಾಲಿಸದೇ ಹಣ ಖರ್ಚು ಮಾಡಿರುವುದು ತಿಳಿದು ಬಂದಿರು ಹಿನ್ನೆಲೆಯಲ್ಲಿ ಸೂಕ್ತ ಪರಿಶೀಲನೆ ನಡೆಸಲು ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನ ಬಂದಂತೆ ಸಂಬಳ ಹೆಚ್ಚಳ: ಅಧಿಕಾರಿಗಳ ಮಾಹಿತಿ ಪ್ರಕಾರ ಎಂಎಸ್‌ಪಿಟಿಸಿ ಘಟಕಗಳಲ್ಲಿ ಕೆಲಸ ನಿರ್ವಹಿಸುವ ಸ್ತ್ರೀಶಕ್ತಿ ಸಂಘದ ಸದಸ್ಯರು ಸಂಬಳ ಹೆಚ್ಚಿಸಿ ಕೊಳ್ಳಬೇಕಾದರೂ ಇಲಾಖೆಯ ಉಪನಿರ್ದೇಶಕರ ಪರವಾನಗಿ ಪಡೆಯಬೇಕು. ಆದರೆ, ಘಟಕಗಳು ಯಾವುದೇ ನಿಯಮಗಳನ್ನು ಪಾಲಿಸದೆ ಮನಬಂದತೆ ಸಂಬಳ ಹೆಚ್ಚಿಸಿಕೊಂಡಿರುವುದು ತಿಳಿದುಬಂದಿದೆ. ಕೆಲ ಘಟಕದ ಅಧ್ಯಕ್ಷರಿಗೆ ತಿಂಗಳಿಗೆ ಎಷ್ಟು ಪ್ರಮಾಣದ ವ್ಯವಹಾರ
ನಡೆಯುತ್ತದೆ ಎಂಬುದು ಕೂಡ ಮಾಹಿತಿ ಇಲ್ಲದ ಸ್ಥಿತಿ ಇದೆ.

Advertisement

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next