Advertisement
ಗುರುವಾರ ಪಟ್ಟಣದ ಶ್ರೀಮತಿ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾನಗಲ್ಲ ಮಂಡಲ ಕಾರ್ಯಕರ್ತರು ಹಾಗೂ ಮತದಾರರಿಗಾಗಿ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ಚುನಾವಣೆಯನ್ನು ಹಣದಿಂದ ಮಾಡಬಾರದು, ಹೋರಾಟದಿಂದ ಮಾಡಬೇಕು ಎಂದು ದಿ.ಸಿ.ಎಂ. ಉದಾಸಿ ಹೇಳುತ್ತಿದ್ದರು. ಉದಾಸಿ ಅವರು ಮಾಡಿದ ಸಾಧನೆಗಳ ಕುರಿತು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಫಲರಾಗಿದ್ದಾರೆ. ಕೇವಲಮೂರು ವರ್ಷದಲ್ಲಿ ಕ್ಷೇತ್ರದಲ್ಲಿದ್ದು, ಮಾಡಿದ ಅಲ್ಪ ಸೇವೆಯನ್ನೇ ದೊಡ್ಡದಾಗಿ ಪ್ರಚಾರ ಮಾಡಿ ಸುಳ್ಳು ಅಪಪ್ರಚಾರ ನಡೆಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
Related Articles
Advertisement
ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನಾಯಕರು ಕಾರ್ಯಕರ್ತರ ನಡುವಿನ ಸಮನ್ವಯತೆ ಕೊರತೆ. ಪಕ್ಷ ಸಂಘಟನೆ ಬಿಟ್ಟು ವೈಯಕ್ತಿಕ ಹಿಂಬಾಲಕರ ಪಡೆ ಹೆಚ್ಚಿಸಿಕೊಳ್ಳುವ ಪ್ರಯತ್ನ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳನ್ನು ಜನತೆಗೆ ತಿಳಿಸುವಲ್ಲಿ ವಿಫಲವಾಗಿರುವುದು ಪಕ್ಷದ ಸೋಲಿನ ಪ್ರಮುಖ ಅಂಶಗಳಾಗಿವೆ. ಮುಂದಿನ ದಿನಗಳಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಗೆಲುವಿಗೆ ಶ್ರಮಿಸೋಣ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಮುಖಂಡರಾದ ಶಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೆಟ್ಟರ, ಪದ್ಮನಾಭ ಕುಂದಾಪೂರ, ಶಿವಲಿಂಗಪ್ಪ ತಲ್ಲೂರ, ಬಸವರಾಜ ಹಾದಿಮನಿ, ರಾಜಣ್ಣ ಪಟ್ಟಣದ, ರಾಜಣ್ಣ ಗೌಳಿ, ಬಿ.ಎಸ್.ಅಕ್ಕಿವಳ್ಳಿ, ಕೃಷ್ಣ ಈಳಿಗೇರ, ರವಿಚಂದ್ರ ಪುರೋಹಿತ, ಸಂತೋಷ ಟೀಕೋಜಿ, ಸಂತೋಷ ಭಜಂತ್ರಿ, ಶಿವಕುಮಾರ ಹಳೇಕೋಟಿ ಮೊದಲಾದವರು ಇದ್ದರು.