ಕೋಲಾರ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಹಾಜರಾಗಲು ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಮೇಲೂ ಕೊರೊನಾ ವೈರಸ್ ಹೆಚ್ಚು ಪರಿಣಾಮ ಬೀರಿದೆ.
ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸುವ ಮೂಲಕ ಜೂ.25 ರಿಂದ ಜು.4 ರವರೆಗೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹೇಳಿದರು. ರಾಜ್ಯದ ಶೈಕ್ಷಣಿಕ 34 ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಅಲ್ಲಿನ ಪರೀಕ್ಷೆಯ ಪೂರ್ವ ಸಿದ್ಧತೆ ಹಾಗೂ ತರಬೇತಿಯ ಬಗ್ಗೆ ಸಿ.ಇ. ಒ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಕ್ಷಣಾ ಧಿಕಾರಿಗಳ ಜತೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.
20 ಮಕ್ಕಳಿಗೆ ಅವಕಾಶ: 8.5 ಲಕ್ಷ ಮಕ್ಕಳಿಗೆ 8500 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ನಡೆದಿದೆ. ಪ್ರತಿ ಕೊಠಡಿ ಯಲ್ಲಿ 24 ರಿಂದ 26 ವಿದ್ಯಾರ್ಥಿಗಳಿಗೆ ಕೂರುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸಾಮಾಜಿಕ ಅಂತರ ಕಾಪಾಡಲು 18 ರಿಂದ 20 ಮಕ್ಕಳಿಗೆ ಅವಕಾಶ ನೀಡಲಾಗಿದೆ ಎಂದು ನುಡಿದರು. ಕೆಮ್ಮ, ಜ್ವರ ಇದ್ರೆ ಪ್ರತ್ಯೇಕ ಕೊಠಡಿ: ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಪ್ರತಿ ಮಕ್ಕಳಿಗೆ ಪರೀಕ್ಷಾ ದಿನದಂದು ಮಾಸ್ಕ್ ವಿತರಿಸುತ್ತಿದ್ದಾರೆ.
ಕೆಲವು ಖಾಸಗಿ ಸಂಸ್ಥೆಗಳು ಉಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಉಚಿತವಾಗಿ ವಿತರಿಸಲು ಮುಂದೆ ಬಂದಿವೆ. ಜೊತೆಗೆ ಥರ್ಮಲ್ ಸ್ಕ್ಯಾನ್ ಹಾಗೂ ಆರೋಗ್ಯ ತಪಾ ಸಣೆ ನಡೆಸಲಾಗುತ್ತದೆ. ಕೆಮ್ಮು, ಜ್ವರ ಇದ್ದಲ್ಲಿ ಅಂತಹ ಮಕ್ಕಳಿಗೆ ಬೇರೆ ಕೊಠಡಿಯನ್ನು ಮೀಸಲು ಮಾಡಲಾಗಿದೆ. ಕಂಟೇ ನ್ಮೆಂಟ್ ಜೋನ್‌ನಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಬಹಳ ಎಚ್ಚರ ವಹಿಸಲಾಗಿದೆ ಎಂದು ವಿವರಿಸಿದರು.
ನೆಲೆಸಿರುವ ಸ್ಥಳದಲ್ಲೇ ಪರೀಕ್ಷೆಗೆ ಅವಕಾಶ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಬರಲು ಸಾರಿಗೆ ವ್ಯವಸ್ಥೆ ಗಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆ ಬಸ್‌ನಲ್ಲಿ ಪರೀಕ್ಷಾ ಸೆಂಟರ್‌ಗೆ ಕರೆತರಬಹು ದು. ವಲಸೆ ಕಾರ್ಮಿಕರ ಮಕ್ಕಳಿಗೆ ಅವರ ನೆಲೆಸಿರುವ ಸ್ಥಳಗಳ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅನುಕೂಲ ಮಾಡಲಾಗಿ ದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಜಿಫ್ ಶಾಸಕಿ ರೂಪಕಲಾ, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಸಿಇಒ ದರ್ಶನ್, ಚಿಕ್ಕಬಳ್ಳಾಪುರ ಸಿಇಒ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಗಳು ಭಾಗವಹಿಸಿದ್ದರು.