Advertisement

ಸಮರ್ಪಕ ಮತದಾರರ ಪಟ್ಟಿ ಸಿದ್ಧಪಡಿಸಿ

02:48 PM Dec 19, 2021 | Team Udayavani |

ತುಮಕೂರು: ಜಿಲ್ಲೆಯಲ್ಲಿ 2022ರ ಜ.1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಮತದಾರರ ಡಬಲ್‌ ಎಂಟ್ರಿಗೆ ಅವಕಾಶ ನೀಡದೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮತ ದಾರರ ಪಟ್ಟಿ ವೀಕ್ಷಕ ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022ಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿ, ಜಿಲ್ಲೆಯ ಗಡಿಭಾಗದ ತಾಲೂಕುಗಳಲ್ಲಿ ಮತದಾರರು ಎರಡೂ ಕಡೆ ನೋಂದಣಿ ಮಾಡಿಕೊಳ್ಳುವ ಸಂಭವವಿರುತ್ತದೆ. ಇಂತಹಪ್ರಕರಣಗಳಲ್ಲಿ ಸಹಾಯಕ ಮತದಾರರನೋಂದಣಾಧಿಕಾರಿಗಳು ವಿಶೇಷ ಗಮನಹರಿಸಿ ಡಬಲ್‌ಎಂಟ್ರಿಗೆ ಅವಕಾಶ ನೀಡದಂತೆ ಮತದಾರರ ಪಟ್ಟಿ ಯನ್ನು ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಫೋಟೋ ಮುದ್ರಣದ ಗುಣಮಟ್ಟ ಪರಿಶೀಲಿಸಿ: ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಕಲರ್‌ ಪಿವಿಸಿ ಎಪಿಕ್‌ ಕಾರ್ಡ್‌ಗಳ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಮತದಾರರ ಪಟ್ಟಿಗಳಲ್ಲಿನ ಫೋಟೋಗಳ ಮುದ್ರಣದ ಗುಣಮಟ್ಟವನ್ನು ಪರಿಶೀಲಿಸಬೇಕು. ಆಯಾ ಉಪವಿಭಾಗ, ತಾಲೂಕು ವ್ಯಾಪ್ತಿಯ ವಿವಿಧ ಕಾಲೇಜು ಮುಖ್ಯಸ್ಥರುಗಳ ಸಭೆ ಕರೆದು ವೋಟರ್‌ ಹೆಲ್ಪ್ ಲೈನ್‌ ಆ್ಯಪ್‌ ಬಗ್ಗೆ ಯುವಕರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನ.8ರಿಂದ ಡಿ.8ರವರೆಗಿನ ಅವಧಿಯಲ್ಲಿ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ಕಾಲಮಿತಿಯೊಳಗೆ ನಿಯಮಾನುಸಾರ ವಿಲೇವಾರಿ ಮಾಡಿ 2022ರ ಜನವರಿ 13ರಂದು ದೋಷರಹಿತ ಅಂತಿಮ ಮತದಾರರ ಪಟ್ಟಿಗಳನ್ನು ಪ್ರಚುರಪಡಿಸಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸೂಚಿಸಿದರು.

ದಾಖಲೆ ಕ್ರಮಬದ್ಧವಾಗಿ ನಿರ್ವಹಿಸಿ: ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ, ವಿಲೇ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ನಮೂನೆಗಳಲ್ಲಿ ಸಂಬಂಧಿಸಿದವರಿಗೆ ನೋಟಿಸ್‌ ನೀಡಿ, ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಲ್ಲದೆ, ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು ಎಂದರು.

ನಂತರ ಸಹಾಯಕ ಮತದಾರರ ನೋಂದಣಾಧಿ ಕಾರಿಗಳು ಸಲ್ಲಿಸಿದ ಅತಿ ಹೆಚ್ಚು ಹಾಗೂ ಅತಿ ಕಡಿಮೆ ಸೇರ್ಪಡೆ, ಡಿಲೀಷನ್‌ ಆಗಿರುವ 20 ಮತಗಟ್ಟೆಗಳ ವಿವರಗಳನ್ನುಪರಿಶೀಲಿಸಿದರಲ್ಲದೆ, ಸ್ವೀಕೃತವಾದ ನಮೂನೆ-6, 6ಎ, 7,8 ಮತ್ತು 8ಎ ಅರ್ಜಿಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿ,ಸಹಾಯಕ ಮತದಾರರ ನೋಂದಣಾಧಿಕಾರಿಗಳು ನಿಯ ಮಾನುಸಾರ ವಿಲೇವಾರಿ ಮಾಡಿರುವ ಕುರಿತು ಸೂಪರ್‌

Advertisement

ಚೆಕ್ಕಿಂಗ್‌ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌.ಪಾಟೀಲ ಅವರಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ,ಉಪವಿಭಾಗಾಧಿಕಾರಿಗಳಾದ ಅಜಯ್‌, ದಿಗ್ವಿಜಯ್‌, ಸೋಮಪ್ಪ ಕಡಕೋಳ, ಚುನಾವಣಾ ತಹಶೀಲ್ದಾರ್‌ ಗೌರಮ್ಮ, ಚುನಾವಣಾ ಶಿರಸ್ತೇದಾರ್‌ ನಾಗಭೂಷಣ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಪವಾಗದಂತೆ ಎಚ್ಚರವಹಿಸಿ: ಡೀಸಿ ವೈ.ಎಸ್‌.ಪಾಟೀಲ್‌

ಜಿಲ್ಲೆಯಲ್ಲಿ ಒಟ್ಟು 2016 ವಿಐಪಿ ಹಾಗೂ 26557 ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿ ಭಾನುವಾರ ಆಯಾ ಮತಗಟ್ಟೆಗಳಲ್ಲಿ ಹಾಜರಿದ್ದು, ಅರ್ಹ ಮತದಾರರಿಂದ ದೂರುಗಳನ್ನು ಸ್ವೀಕರಿಸಿ, ಶೀಘ್ರ ವಿಲೇವಾರಿ ಮಾಡಲು ಮತಗಟ್ಟೆ ಮಟ್ಟದಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಲೋಪವಾಗದಂತೆ ಜಾಗರೂಕತೆಯಿಂದ ಅಂತಿಮಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

ಮತದಾರರ ಪಟ್ಟಿಗಳಲ್ಲಿನ ಫೋಟೋಗಳ ಮುದ್ರಣದ ಗುಣಮಟ್ಟ ಪರಿಶೀಲಿಸಿ, ಆಯಾ ಉಪವಿಭಾಗ, ತಾಲೂಕು ವ್ಯಾಪ್ತಿಯ ವಿವಿಧ ಕಾಲೇಜು ಮುಖ್ಯಸ್ಥರುಗಳ ಸಭೆ ಕರೆದುವೋಟರ್‌ ಹೆಲ್ಪ್  ಲೈನ್‌ ಆ್ಯಪ್‌ ಬಗ್ಗೆ ಜಾಗೃತಿಮೂಡಿಸಬೇಕು. ಎಲ್ಲಿಯೂ ಡಬಲ್‌ ಎಂಟ್ರಿಗೆ ಅವಕಾಶ ನೀಡದೆ ಮತದಾರರ ಪಟ್ಟಿ ಸಿದ್ಧಪಡಿಸಿ. – ರಾಕೇಶ್‌ ಸಿಂಗ್‌, ಮತದಾರರ ಪಟ್ಟಿ ವೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next